ಉಪಾಧ್ಯಕ್ಷರಾಗಿ ಆಯ್ಕೆ
ಚನ್ನಮ್ಮನ ಕಿತ್ತೂರು, ಆ30: ತಾಲೂಕಿನ ತಿಗಡೊಳ್ಳಿ ಗ್ರಾಪಂದಲ್ಲಿ ಶ್ರೀಮತಿ ಜಾನಕಿ ಕಲ್ಲಪ್ಪ ಬಡಸದ ಇವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ತೆರವಾದ ಸ್ಥಾನಕ್ಕೆ ಉಪಾಧ್ಯಕ್ಷರಾಗಿ ಶ್ರೀಮತಿ ಶೈನಾಜಬಿ ಮುಗುಟಸಾಬ ದಾದೇಬಾಯಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕೆ.ಆಯ್.ಆರ್.ಡಿ.ಎಲ್. ಇಲಾಖೆ ಅಧಿಕಾರಿ ರಾಮಣ್ಣವರ, ಸಹಾಯಕ ಚುನಾವಣಾಧಿಕಾರಿ ಪಿಡಿಓ ಮಂಜು ಕುಟಾಳೆ, ಕಾರ್ಯದರ್ಶಿ ಈಶ್ವರ ಸರಪಳಿ ಕಾರ್ಯನಿರ್ವಹಿಸಿದ್ದರು. ಪೋಲಿಸ್ ಬಿಗಿಬಂದೋಬಸ್ತ ಏರ್ಪಡಿಸಲಾಗಿತ್ತು.
ಈ ಸಮಯದಲ್ಲಿ ಗ್ರಾಪಂ ಅಧ್ಯಕ್ಷ ಭೂಪಾಲ(ಗೋಪಾಲ) ಹುಕ್ಕೇರಿ, ನಿಕಟಪೂರ್ವ ಅಧ್ಯಕ್ಷ ಅಶೋಕ ಕಳಸನ್ನವರ, ಸದಸ್ಯರುಗಳಾದ ಕಲ್ಲಪ್ಪ.ಸ.ಕ್ಯಾತನವರ, ಜಾನಕಿ ಬಡಸದ, ಶೀಲಾವತಿ ದಳವಾಯಿ, ಸವಿತಾ ಗೋದಳ್ಳಿ, ಕರೆವ್ವಾ ನಾಯ್ಕರ, ಜಗದೀಶ ಗೋದಳ್ಳಿ, ಬಸವಂತ.ನಿಂ.ಶಿರಗಾಪೂರ, ಬಸವ್ವ ಕೋಲಕಾರ, ನಾಗೇಶ ಗೌಡರ, ಸಿಬ್ಬಂದಿಗಳಾದ ಕಕ್ರ್ಲ ರವೀಂದ್ರ ಪಾಟೀಲ, ಡಿಇಓ ಅಸ್ಲಮ್ ಬೀಡಿ, ಕರವಸೂಲಿ ಕೆ.ಆರ್.ಬಾಗೇವಾಡಿ, ಚನ್ನಬಸಪ್ಪಾ ಮಲಶೆಟ್ಟಿ, ಮುಗುಟಸಾಬ ದಾದೇಬಾಯಿ, ರಾಜು ಕುಲವಳ್ಳಿ, ಈರಣ್ಣಾ ಮಲಶೆಟ್ಟಿ, ಸದಾನಂದ ಬಡಿಗೇರ, ಬಸು ಗೋದಳ್ಳಿ, ವಿಜಯ ಕೋಲಕಾರ ಸೇರಿದಂತೆ ಇನ್ನಿತರರಿದ್ದರು.