ಮುದಗಲ್ಲ ಪುರಸಭೆ ಪ್ರಥಮ ಪ್ರಜೆಯ ಪದಗ್ರಹಣ ಸಮಾರಂಭ
ಮುದಗಲ್ಲ,ಆ೩೦:ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ನೂತನ ಅಧ್ಯಕ್ಷರಾಗಿ ಮಹಾದೇವಮ್ಮ ಹಾಗೂ ಉಪಾಧ್ಯಕ್ಷ ಅಜ್ಮೀರ್ ಬೆಳ್ಳಿಕಟ್ ಅವರು ಪದಗ್ರಹಣ ಸಮಾರಂಭ ಪುರಸಭೆ ಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಡಿ.ಎಸ್ ಹೂಲಿಗೇರಿ ಅವರು ನೂತನ ಅಧ್ಯಕ್ಷರಾಹ ಮಹಾದೇವಮ್ಮ ಗುತ್ತಿಗೆದಾರ ಹಾಗೂ ಉಪಾಧ್ಯಕ್ಷರಾದ ಅಜೀರ್ ಬೆಳ್ಳಿ ಕಟ್ ಅವರಿಗೆ ಸನ್ಮಾನ ಮಾಡಿದರು ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಮಹದೇವಮ್ಮ ಅವರು ಪಟ್ಟಣದ ಸಮಗ್ರ ಅಭಿವೃದ್ಧಿ ಹಾಗೂ ಮೂಲಸೌಲಭ್ಯ ಕಲ್ಪಿಸಲು ಹಗಲಿರುಳು ಶ್ರಮಿಸುವುದಾಗಿ ಭರವಸೆ ನೀಡಿದರು.