ವಿದ್ಯಾರ್ಥಿಗಳ ಮನವಿಗೆ ಸ್ಪಂದನೆ ನೀಡಿದ ಸಚಿವರು
(ಸಂಜೆವಾಣಿ ಪ್ರತಿನಿಧಿಯಿಂದ)
ಮಾನವಿ,ಆ೩೦: ಮಾನವಿ ತಾಲೂಕಿನ ಜಾಗೀರಪನ್ನೂರು ಗ್ರಾಮದ ಚೀಕಲ್ ಪರ್ವಿ ಮಾರ್ಗವಾಗಿ ಹಾದುಹೋಗುವ ರಸ್ತೆಯ ಮಾರ್ಗದಲ್ಲಿ ಜುಮಾಲಿ ಮನೆಯಿಂದ ಬಸವಗುಡಿಯವರೆಗೆ ಇರುವ ರಸ್ತೆಯು ತೀರ ಹದಗೆಟ್ಟು ಗ್ರಾಮಕ್ಕೆ ಸುಮಾರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ.
ಇದರಿಂದ ಗ್ರಾಮದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳ ಪರ ಹೋರಾಟಗಾರ ಪ್ರಶಾಂತ್ ಪನ್ನೂರ್ ಹಾಗೂ ಗ್ರಾಮದ ವಿದ್ಯಾರ್ಥಿಗಳು ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರಿಗೆ ಗುರುವಾರ ಸಂಜೆ ಮನವಿ ಪತ್ರ ಸಲ್ಲಿಸಿದರು.
ವಿದ್ಯಾರ್ಥಿಗಳ ಮನವಿಗೆ ದೀಡಿರ್ ಸ್ಪಂದನೆ ನೀಡಿದ ಸಚಿವರಾದ ಎನ್. ಎಸ್.ಬೋಸರಾಜು ಆದಷ್ಟು ಬೇಗನೆ ಕಾಮಗಾರಿ ಮುಗಿಸಿ ಗ್ರಾಮಕ್ಕೆ ಬಸ್ ಬಿಡಲು ಅಧಿಕಾರಿಗಳಿಗೆ ಸ್ಥಳದಲ್ಲೇ ಕರೆ ಮಾಡಿ ಸೂಚಿಸಿದರು.