ತುರವಿಹಾಳ, ಅದ್ಯಕ್ಷ ,ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆ
ಸಂಜೆವಾಣಿ ವಾರ್ತೆ
ಸಿಂಧನೂರು ಆ.೩೦ ತಾಲೂಕಿನ ತುರವಿಹಾಳ ಪಟ್ಟಣ ಪಂಚಾಯತಿ ಅಧ್ಯಕ್ಷ ರಾಗಿ ಶಾಮಿದ್ ಸಾಬ ತಂ ಖಾಜಾಸಾಬ ಚೌದ್ರಿ (ವಾರ್ಡ್ – ೩) ಉಪಾಧ್ಯಕ್ಷರಾಗಿ ಗಂಗಮ್ಮ ಗಂ ಯಲ್ಲಪ್ಪ ಬೋವಿ (ವಾರ್ಡ್- ೧೧) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ೧೪ ಸದಸ್ಯರಿರುವ ತುರವಿಹಾಳ ಪಟ್ಟಣ ಪಂಚಾಯತಿಯ ನಿನ್ನೆ ಮುಂದೂಡಿದ್ದ ಚುನಾವಣೆ ಇಂದು ಘೋಷಣೆ ಯಾಗಿತ್ತು ಅದರಂತೆ ಅದ್ಯಕ್ಷ ಸ್ಥಾನದ ಮಿಸಲಾತಿ ಸಾಮಾನ್ಯ ,ಉಪಾಧ್ಯಕ್ಷ ಪರಿಶಿಷ್ಟ ಜಾತಿ ಆದೇಶವಾಗಿತ್ತು.ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿರುವುದರಿಂದ ಅವಿರೋಧವಾಗಿ ಆಯ್ಕೆಯಾದರು.
ನೂತನ ಅದ್ಯಕ್ಷ ಉಪಾಧ್ಯಕ್ಷ ರಿಗೆ ಶುಭಕೋರಿ ,ಹೂವಿನ ಹಾರ ಹಾಕಿದರು. ಸಿಹಿ ತಿನಿಸಿ ,ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶಾಸಕ ಬಸನಗೌಡ ತುರವಿಹಾಳ,ಕಾಂಗ್ರೆಸ್ ಮುಖಂಡರು, ಹಿರಿಯರಾದ ಮಲ್ಲನಗೌಡ ದೇವರಮನಿ, ಪಾರುಖ್ ಸಾಬ,ಉಮರಸಾಬ,ಮೌಲಪ್ಪಯ್ಯ ಗುತ್ತೆದಾರ,ಗೂಳಪ್ಪ ಕುಂಟೋಜಿ,ಆರ್.ಸಿದ್ದನಗೌಡ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
ನಂತರ ನೂತನ ಅಧ್ಯಕ್ಷ ಶಾಮಿದ್ ಸಾಬ ಪತ್ರಕರ್ತರೊಂದಿಗೆ ಮಾತನಾಡಿ ಪಟ್ಟಣದಲ್ಲಿನ ಕುಡಿಯುವ ನೀರು,ರಸ್ತೆ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೆನೆಂದರು ಮತ್ತು ಎಲ್ಲರ ಸಹಕಾರದೊಂದಿಗೆ ನನ್ನನ್ನು ಅದ್ಯಕ್ಷ ನನ್ನಾಗಿ ಆಯ್ಕೆಗೊಳಿಸಿದ ಪಟ್ಟಣದ ಹಿರಿಯರು, ಶಾಸಕರು,ಸದಸ್ಯರು ,ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು ಎಂದರು.