ಬೆಂಗಳೂರು ವಿಭಜನೆಗೆ ಪದ್ಮನಾಭರೆಡ್ಡಿ ವಿರೋಧ
ಬೆಂಗಳೂರು, ಆ.೩೦- ಗ್ರೆಟರ್ ಬೆಂಗಳೂರು ಮಸೂದೆ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ, ಬೆಂಗಳೂರುನಗರ ಛಿದ್ರ, ಛಿದ್ರ ಮಾಡಬೇಡಿ ಎಂದು ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ರೆಟರ್ ಬೆಂಗಳೂರು ರಚನೆ ಮಾಡಲು ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡಿದ್ದು, ಇದೀಗ ಸಮಿತಿ ಸಹ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರಕ್ಕೆ ಗ್ರೆಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಲು ಅವಕಾಶವಿದ್ದಿಯೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಸಹ ಕಾನೂನು ಪದವಿ ಪಡೆದವರು, ಕೇಂದ್ರ ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ.
ರಾಜ್ಯ ಸರ್ಕಾರ ಅರ್ಟಿಕಲ್ ೨೪೩ರ ಪ್ರಕಾರ ಪಾಲಿಕೆ ರಚನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದ ಅವರು, ಯಾವುದೇ ಕಾರಣಕ್ಕೂ ಬೆಂಗಳೂರುನಗರ ಛಿದ್ರ, ಛಿದ್ರ ಮಾಡುವುದು ಬೇಡ ಎಂದರು.
ಗ್ರೆಟರ್ ಬೆಂಗಳೂರು ರಚನೆ ನಿಯಾಮವಳಿ ಹಳೆಯ ಬಿಬಿಎಂಪಿ ನಿಯಾಮವಳಿ ಸಹ ಒಂದೇ ಆಗಿದೆ ಯಾವುದೇ ಬದಲಾವಣೆ ಇಲ್ಲ.ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ವಿಂಗಡಣೆ ಮಾಡಬೇಡಿ. ಒಂದು ಕಡೆ ತೆರಿಗೆ ಹೆಚ್ಚಳ ಇನ್ನೂಂದು ಕಡೆ ತೆರಿಗೆ ಸಂಗ್ರಹ ಕಡಿಮೆ ಬರುತ್ತದೆ. ಪಾಲಿಕೆ ತೆಗೆದುಕೊಳ್ಳುವ ನಿರ್ಣಯಗಳಲ್ಲಿ ವ್ಯತ್ಯಾಸ ಆಗಬಹುದು ಇದರಿಂದ ಅಭಿವೃದ್ದಿ ಕುಂಠಿತವಾಗುತ್ತದೆ ಎಂದು ಉಲ್ಲೇಖಿಸಿದರು.
ಅನ್ಯ ಭಾಷಿಗರಿಗೆ ಪಾಲಿಕೆ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ . ಓಟ್ ಬ್ಯಾಂಕ್ ರಾಜಕೀಯ ಮಾಡಲು ಕಾಂಗ್ರೆಸ್ ಪಕ್ಷ ಕುತಂತ್ರ ಮಾಡುತ್ತಿದೆ. ಬಿ.ಎಸ್.ಪಾಟೀಲ್, ಸಿದ್ದಯ್ಯ, ರವೀಂದ್ರನ್ ಸಮಿತಿ ನೀಡಿರುವ ವರದಿಯಲ್ಲಿ ಲಂಡನ್ ಮಾದರಿ ಆಡಳಿತ ಬೆಂಗಳೂರಿನಲ್ಲಿ ತರುತ್ತೇವೆ ಎಂದು ಹೇಳಿದ್ದರು.
ಲಂಡನ್ ನಲ್ಲಿ ಸ್ಥಳೀಯ ಸಂಸ್ಥೆಯಲ್ಲಿ ಹೆಚ್ಚಿನ ಅಧಿಕಾರ ನೀಡಿದ್ದಾರೆ ಅದರೆ ಗ್ರೆಟರ್ ಬೆಂಗಳೂರು ವರದಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಕಡಿತ ಮಾಡಿದ್ದಾರೆ.
೧ರಿಂ೧೦ಪಾಲಿಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ, ಯಾವ ಸಂವಿಧಾ ಅನ್ವಯ ಮಾಡುತ್ತಿರಾ ಎಂದು ಸರ್ಕಾರ ತಿಳಿಸಬೇಕು ಎಂದು ಕೇಳಿದರು.
೫ವರ್ಷಕ್ಕೊಮ್ಮೆ ಹೊಸ ಸರ್ಕಾರ ಬಂದ ನಂತರ ಬಿಬಿಎಂಪಿ ಯಲ್ಲಿ ನಿಯಾಮವಳಿ ಬದಲಾವಣೆಯಾಗುತ್ತಿದೆ. ಇದರಿಂದ ಆಡಳಿತ ಅಭಿವೃದ್ದಿ ಕುಂಠಿತವಾಗುತ್ತದೆ.
ಬೆಂಗಳೂರು ನಗರ ಬಿಜೆಪಿ ಭದ್ರಕೋಟೆ ಎಂಬ ತಿಳಿದ ಕಾಂಗ್ರೆಸ್ ಪಕ್ಷ ಶಾಸಕರಿಗೆ ಬಿಬಿಎಂಪಿಯಲ್ಲಿ ಮತದಾನ ಮಾಡುವ ಹಕ್ಕು ಕೊಟ್ಟಿಲ್ಲ. ಸದ್ಯಕ್ಕೆ ಮೀಸಲಾತಿ ಮಾಡಿದರೆ ಸಾಕು ಚುನಾವಣೆ ಮಾಡಬಹುದು. ಆದರೂ ಕಾಂಗ್ರೆಸ್ ಸರ್ಕಾರ ನ್ಯಾಯಲಯದಲ್ಲಿ ಕೇಸ್ ಇದೆ ಸುಳ್ಳು ಹೇಳುತ್ತಿದೆ ಎಂದರು.
ಗ್ರೆಟರ್ ಬೆಂಗಳೂರು ಮಸೂದೆ ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು. ಇನ್ನೂ, ಸಂಪುಟದಲ್ಲಿ ನಿರ್ಣಯ ಮಾಡಿ ಕಳುಹಿಸಿದ್ದು, ಇದನ್ನು ರಾಜ್ಯಪಾಲರು ಸಂವಿಧಾನ ವಿರೋಧಿ ಮಸೂದೆಯನ್ನು ತಿರಸ್ಕಾರ ಮಾಡುವ ಸಾಧ್ಯತೆ ಇದೆ ಎಂದು ಹೇಳಿದರು.