ಗಾಂಧಿಜೀಯವರ ಜೀವನಾದರ್ಶಗಳು ರೂಢಿಸಿಕೊಳ್ಳಬೇಕು:ಎಲ್.ಆರ್.ನಾಯಕ
ಸೈದಾಪುರ:ಅ.೩:ಸತ್ಯ, ಶಾಂತಿ ಅಹಿಂಸೆಯ ಮೂಲಕ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಜೀಯವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಅವರ ತತ್ವಗಳು ವಿಶ್ವಕ್ಕೆ ಮಾದಿರಿಯಾಗಿವೆ ಮುಖ್ಯಗುರು ಲಿಂಗಾರೆಡ್ಡಿ ನಾಯಕ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಸ್ಥೆಯ ವಿವಿಧ ವಿಭಾಗಗಳ ವತಿಯಿಂದ ಹಮ್ಮಿಕೊಂಡ ಗಾಂಧೀಜಿ ಹಾಗೂ ಲಾಲಬಹುದ್ದೂರ ಶಾಸ್ತಿçÃ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಸ್ವಾಂತAತ್ರö್ಯಕ್ಕಾಗಿ ತಮ್ಮದೆಯಾದ ಮಹತ್ವ ನೀಡಿದ ಮಹಾನ ವ್ಯಕ್ತಿಗಳ ಸಾಧನೆ ವಿಶೇಷತೆಯನ್ನುಂಟು ಮಾಡುವಂತಿದೆ. ಅವರ ಆದರ್ಶಗಳು ನಮ್ಮದಾಗಬೇಕು ಎಂದು ಹೇಳಿದರು.
ಪ್ರಾಂಶುಪಾಲ ಹಂಪಣ್ಣ ಸಜ್ಜನಶೆಟ್ಟಿ, ಜಿ.ಎಂ.ಗುರುಪ್ರಸಾದ, ಕರಬಸಯ್ಯ ದಂಡಿಗಿಮಠ, ಗೂಳಪ್ಪ.ಎಸ್.ಮಲ್ಹಾರ, ದೇವಿಂದ್ರ ಪೀರಾ, ರಾಜಶೇಖರ ಪಾಟೀಲ, ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ಇತರರಿದ್ದರು.