ಕನಕ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ, ಶಾಸ್ತಿç ಜಯಂತಿ
ಸAಜೆವಾಣಿ ವಾರ್ತೆ,
ವಿಜಯಪುರ,ಅ.೩:ಅಹಿಂಸೆಯ ಮಾರ್ಗದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿ ವಿಶ್ವಕ್ಕೆ ಸತ್ಯ ಹಾಗೂ ಅಹಿಂಸೆಯ ಮಾರ್ಗ ತೋರಿದ ಭಾರತದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ, ಶಾಸ್ತ್ರೀಯವರು ಕೂಡ ಸ್ವಾತಂತ್ರ‍್ಯ ಹೋರಾಟಕ್ಕೆ ಶ್ರಮಿಸಿ ಗಾಂಧೀಜಿಯವರ ತತ್ವದಡಿಯಲ್ಲಿ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದವರು. ಭಾರತದ ಪ್ರಧಾನಿಯಾಗಿ ಉತ್ತಮ ಆಡಳಿತ ಕೊಟ್ಟ ಮೋಹಕ ರಾಜಕಾರಣಿ ಶಾಸ್ತ್ರಿಜಿಯವರು. ಗಾಂಧೀಜಿ ಹಾಗೂ ಶಾಸ್ತ್ರಿಜಿಯವರು ಭಾರತ ದೇಶದ ಎರಡು ಕಣ್ಣುಗಳು ಎಂದು ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಯಪ್ರಭು ಕೊಳಮಲಿ ಹೇಳಿದರು. ಬುಧವಾರ ವಿಜಯಪುರ ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಪಬ್ಲಿಕ್ ಶಾಲೆಯಲ್ಲಿ ಆಚರಿಸಿದ ಗಾಂಧೀಜಿ ಹಾಗು ಶಾಸ್ತ್ರಿಜಿ ಜಯಂತಿಯ ಕಾರ್ಯಕ್ರಮದಲ್ಲಿ ಮಹಾನ್ ಚೇತನರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿಗಳು ಗಾಂಧೀಜಿ, ಶಾಸ್ತ್ರಿಜಿಯವರು ಕುರಿತು ಅತ್ಯುತ್ತಮ ಭಾಷಣವನ್ನು ಮಾಡಿದರು, ಗಾಂಧೀಜಿ, ಶಾಸ್ತ್ರಿಜಿಯವರ ವ್ಯಕ್ತಿತ್ವವನ್ನ ಗಾಯನದ ಮೂಲಕ ತಿಳಿಸಿಕೊಟ್ಟರು. ಗಾಂಧೀಜಿ ಮತ್ತು ಶಾಸ್ತ್ರಿಜಿಯವರ ವೇಷದಲ್ಲಿ ಪುಟಾಣಿಗಳು ಮಿಂಚಿದ್ದು ಕಾರ್ಯಕ್ರಮಕ್ಕೆ ಮೆರೆಗನ್ನು ತಂದಿತು.
ಸAಸ್ಥೆಯ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.