ರಮಾಬಾಯಿ ಅಂಬೇಡ್ಕರ ಸಂಯುಕ್ತ ಪ.ಪೂ ಕಾಲೇಜಿನಲ್ಲಿ ಗಾಂಧೀಜಿ, ಶಾಸ್ತಿç ಜಯಂತಿ
ವಿಜಯಪುರ,ಅ.೩:ಇಲ್ಲಿನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಮಹಾತ್ಮ ಗಾಂಧೀಜಿ ಅವರ ೧೧೫ನೇ ಹಾಗೂ ಲಾಲಬಹದ್ದೂರ್ ಶಾಸ್ತ್ರಿಜಿ ಅವರ ೧೨೦ನೇ ಜಯಂತಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ತುಕಾರಾಮ ಚಂಚಲಕರ ಅವರು ಮಾತನಾಡಿ, ಇರ್ವರು ದೇಶಕ್ಕೆ ಒಳಿತು ಮಾಡಿದ್ದನ್ನು ವಿವರಿಸಿದರು.
ವೇದಿಕೆ ಮೇಲೆ ಮುಖ್ಯಗುರುಗಳಾದ ಶಶಿಕಾಂತ ಕಟ್ಟಿ. ಅಂಜುಟಗಿ, ಗುಳೇದಗುಡ್ಡ ಎಸ್.ಎಸ್. ಸಚಿನ, ಅಶ್ವಿನಿ ನಾಯ್ಕ, ರೇಷ್ಮಾ ತಾಳಿಕೋಟಿ, ಅಕ್ಕಮಹಾದೇವಿ ವಿಶ್ವ ವಿದ್ಯಾಲಯದ ಪೂಜಾ ಮಸಲಿಕೇರಿ, ಲಕ್ಷಿö್ಮÃ ಹಿಪ್ಪರಗಿ, ಎಂ ಲಕ್ಷ್ಮಿ ಉಪಸ್ಥಿತರಿದ್ದರು.