ಬಬಲೇಶ್ವರ ಪಶು ಆಸ್ಪತ್ರೆಯಲ್ಲಿ ಗಾಂಧಿ, ಶಾಸ್ತಿç ಜಯಂತಿ
ಸAಜೆವಾಣಿ ವಾರ್ತೆ,
ವಿಜಯಪುರ,ಅ.೩:ಎಲ್ಲರಿಗೂ ಬಟ್ಟೆ ಸಿಗಲಿ ಎಂಬ ಉದ್ದೇಶದಿಂದ ಮಹಾತ್ಮ ಗಾಂಧಿಜಿಯವರು ರುಮಾಲು ಬಿಟ್ಟು ಟೊಪ್ಪಿಗೆ ಹಾಕಿಕೊಳ್ಳುವ ಯೋಜನೆ ಜಾರಿಗೆ ತಂದರು. ಆವಾಗಿನಿಂದ ಇದು ಗಾಂಧಿ ಟೊಪ್ಪಿಗೆ ಎಂದು ಕರೆಸಿಕೊಂಡಿತು ಎಂದು ಸಾಹಿತಿ ಶಂಕರ ಬೈಚಬಾಳ ಹೇಳಿದರು.
ಗಾಂಧಿ ಟೊಪ್ಪಿಗೆ ಜಾರಿ ಶತಮಾನೋತ್ಸವ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದಡಿ ಬಬಲೇಶ್ವರ ಪಶು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಪಶುವೈದ್ಯಾದಿಕಾರಿ ಡಾ.ಚಂದ್ರಶೇಖರ ಬಜಂತ್ರಿ, ಗಾಂಧಿಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಬದುಕು ಅವರ ಜೀವನದ ಸನ್ನಿವೇಶಗಳು ನಮ್ಮೆಲ್ಲರಿಗೂ ಆದರ್ಶವಾಗಿವೆ ಎಂದರು.
ಇದೇ ವೇಳೆ ಮಾಜಿ ಪ್ರಧಾನಿ ಲಾಲಬಹದ್ದೂರ ಶಾಸ್ತಿç ಜಯಂತಿ ಕೂಡಾ ಆಚರಿಸಲಾಯಿತು.
ವೇದಿಕೆಯಲ್ಲಿ, ಪಶು ವೈದ್ಯರುಗಳಾದ ಡಾ.ಎಸ್.ಎನ್ ಪಟ್ಟಣಶೆಟ್ಟಿ ಡಾ.ಅಶೋಕ ಜಂಗಮಶೆಟ್ಟಿ ಇದ್ದರು.
ಕಾರ್ಯಕ್ರಮದಲ್ಲಿ ಪಿ.ಸಿ ಅಂಬಿಗೇರಿ, ಕೃಷ್ಣ ಹಂಚಿನಾಳ, ಸಚಿನ್ ಬೂದಿಹಾಳಮಠ, ಬಸು ಕಾಂಬಳೆ, ಕೃಷ್ಣ ಜಾಧವ, ಸಂಗೀತಾ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.