14 ಕಿ.ಮೀ ಪಾದಯಾತ್ರೆ ಮಾಡಿ ಗಾಂಧೀಜಿಗೆ ಗೌರವ ಸಲ್ಲಿಸಿದ ಶಾಸಕ ದರ್ಶನ್
ಸಂಜೆವಾಣಿ ವಾರ್ತೆ
ನಂಜನಗೂಡು: ಅ.03:- ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಯವರ ಜನ್ಮದಿನದ ಅಂಗವಾಗಿ ಶಾಸಕ ದರ್ಶನ್ ಧ್ರುವನಾರಾಯಣ್ ನೇತೃತ್ವದಲ್ಲಿ ನಂಜನಗೂಡಿನಿಂದ 14 ಕಿ.ಮೀ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.
ನಂಜನಗೂಡು ಪಟ್ಟಣದ ನಾಗಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಿಂದ ಕಾಲ್ನಡಿಗೆಯ ಮೂಲಕ ಶಾಸಕ ದರ್ಶನ್ ಧ್ರುವ ನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮುಖಂಡರು ಮತ್ತು ಬೆಂಬಲಿಗರ ಜೊತೆಗೂಡಿ ನಂಜುಂಡೇಶ್ವರನ ದೇವಾಲಯದ ಮಾರ್ಗವಾಗಿ ಚಾಮರಾಜನಗರ ಬೈಪಾಸ್ ರಸ್ತೆಯ ಮೂಲಕ ಬದನವಾಳು ಸಮೀಪದ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಇರುವ ಮಹಾತ್ಮ ಗಾಂಧಿಜಿಯವರ ಪ್ರತಮೆಗೆ ಮಾಲಾರ್ಪಣೆ ಮಾಡಿದರು. ನಂತರದಲ್ಲಿ ಮಾತಾನಾಡಿದ ಶಾಸಕರು 1927 ರಲ್ಲಿ ಮಹಾತ್ಮ ಗಾಂಧೀಜಿ ಅವರು ನಮ್ಮ ನಂಜನಗೂಡು ತಾಲ್ಲೂಕಿನ ಬದನವಾಳು ಮತ್ತು ತಗಡೂರಿಗೆ ಕಾಲಿಟ್ಟು ಚರಕಗಳ ಮೂಲಕ ನೂಲು ನೇಯುವ ಕಾರ್ಯ ಚಟುವಟಿಕೆಗಳನ್ನು ಆರಂಭ ಮಾಡುವುದರ ಮೂಲಕ ಶಾಶ್ವತ ಇತಿಹಾಸ ನಿರ್ಮಿಸಿದರೆ.
ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಘಟನೆಗಳ ಕುರುಹುಗಳು ಇನ್ನು ಗ್ರಾಮೋದ್ಯೋಗ ಕೇಂದ್ರದಲ್ಲಿ ಜೀವಾಂತವಾಗಿ ಉಳಿದಿವೆ.ಅಂದಿನಿಂದ ಇಂದಿನವರೆಗೂ ಕೂಡ ಖಾದಿ ಗ್ರಾಮೋದ್ಯೋಗದಲಿ ಚರಕಗಳ ಮೂಲಕ ಬಟ್ಟೆಗಳನ್ನು ನೆಯುತ್ತಾ ನಡೆಯುತ್ತಾ ಬಂದಿದ್ದರೆ ಇದನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಮ್ಮ ತಂದೆಯವರಾದ ಮಾಜಿ ಸಂಸದರಾದ ದಿವಂಗತ ಆರ್ . ಧ್ರುವನಾರಾಯಣ್ ಹಗಲಿರುಳು ಶ್ರಮಿಸಿದರು. ಇದನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿ ನೂರಾರು ಜನರಿಗೆ ಖಾಯಂ ಉದ್ಯೋಗ ನೀಡವ ಕನಸು ಹೊತ್ತಿದ್ದರು ಭರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಘಟಾನುಘಟಿ ರಾಜಕಾರಣಿಗಳು ಮಹಾತ್ಮ ಗಾಂಧೀಜಿ ಕಾಲಿಟ್ಟ ಈ ನೆಲೆಯನ್ನು ಅಭಿವೃದ್ಧಿಪಡಿಸಲು ಸಲಹೆ ಸೂಚನೆಯನ್ನು ನೀಡಿದರು.
ತಂದೆಯ ಆಸೆ ಈಡೇರಿಸುವ ಸಲುವಾಗಿ ಖಾದಿ ಗ್ರಾಮೋದ್ಯೋಗ ಕೇಂದ್ರದ ಅಭಿವೃದ್ಧಿಗೋಳಿಸಿ ಮತ್ತೆ ಇತಿಹಾಸ ನಿರ್ಮಿಸಲು ಪ್ರಮಾಣಿಕವಾಗಿ ಕೆಲಸ ಮಾಡುತ್ತೆನೆ. ಬದನವಾಳು ಪಾದಯಾತ್ರೆ ಯಶಸ್ವಿಯಾಗಿದೆ ಸ್ವಾತಂತ್ರ್ಯ ಪೂರ್ವದಿಂದ ಖಾದಿ ಗ್ರಾಮೋದ್ಯೋಗ ಕೇಂದ್ರ ಮತ್ತು ಬಾದನವಾಳು ಗ್ರಾಮಕ್ಕೆ ಗಾಂಧೀಜಿಯ ಸಂಬಂಧ ಇದೆ ಅವರು ಈ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿ ಗುಡಿ ಕೈಗಾರಿಕೆಯನ್ನು ಸ್ಥಾಪಿಸಿದರು.ಈ ಹಿಂದೆ ಐತಿಹಾಸಿಕ ಭಾರತ್ ಜೋಡೋ ಯಾತ್ರೆ ಮಾಡಲಾಗಿತ್ತು.ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಮತ್ತು ಅಭಿವೃದ್ಧಿ ಪಡಿಸಲು ಬಜೆಟ್ ನಲ್ಲಿ ಬೃಹತ್ ಮೊತ್ತವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಗಾಂಧೀಜಿ ಬಂದ ಜಾಗದಲ್ಲೇ ಗಾಂಧೀಜಿ ಜಯಂತಿ ಆಚರಣೆ ಮಾಡಬೇಕು ಎಂದು ಆಯೋಜನೆ ಮಾಡಿದ್ದೇವೆ.ದೂರ ದೃಷ್ಟಿ ಇಟ್ಟುಕೊಂಡು ಅಭಿವೃದ್ಧಿ ಪಡಿಸಲು ಇಂತಹ ಒಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ ಗುಡಿ ಮತ್ತು ಸಣ್ಣ ಕೈಗಾರಿಕೆ ಮಾಡಬೇಕು. 2027ಕ್ಕೆ 100 ವರ್ಷಗಳು ತುಂಬಲಿದೆ ಅಂದು ರಾಹುಲ್ ಗಾಂಧಿ ಅವರನ್ನು ಕರೆಸಿ ಅದ್ದೂರಿ ಕಾರ್ಯಕ್ರಮವನ್ನು ಮಾಡುತ್ತೇವೆ. ನನ್ನ ತಂದೆಯ ಕನಸನ್ನು ನನಸು ಮಾಡಲು ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಇದನ್ನು ಅದ್ಭುತವಾದ ಪ್ರವಾಸಿ ತಾಣವನ್ನಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕರದ ಕಳಲೆ ಕೇಶವಮೂರ್ತಿ, ನಗರ ಸಭಾ ಅದ್ಯಕ್ಷ ಕಂಠ ಎನ್, ಉಪಾಧ್ಯಕ್ಷ ರೇಹನ ಭಾನು, ಮುಖ್ಯ ಭಾಷಣಕಾರರ ಅರ್ ಎಚ್ ಪವಿತ್ರ, ಬದನವಾಳು ಗ್ರಾಂ ಅ ದೊರೆ ಸ್ವಾಮಿ, ಉಪಾಧ್ಯಕ್ಷ ಶೋಭ, ತಾಸಿಲ್ದಾರ್ ಶಿವಕುಮಾರ್ ಕಾಸನೂರ್, ತಾ ಪಂ ಇ ಒ ರಾಜೇಶ ಜೆರಾಲ್ಡ್, ನ ಸ ಪೌರಯುಕ್ತ ನಂಜುಂಡ ಸ್ವಾಮಿ, ನಂ ಉ ವಿ ಡಿ ವೈ ಎಸ್ ಪಿ ರಘು, ಬಿ ಒ ಮಹೇಶ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದೀಪಕ್ ಬ್ಲಾಕ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಸೊಮೇಶ್, ಸಿ ಎಂ ಶಂಕರ್,ಶ್ರೀ ಕಂಠ ನಾಯಕ್ಕ, ದೇಬೂರು ಅಶೋಕ ಲಾತಾಸಿದ್ದ ಶೇಟಿ ಶಶಿ ರೇಖಾ, ಎಚ್ ಡಿ ಕೋಟೆ ಸೌಮ್ಯ ಮಂಜುನಾಥ , ನಗರ ಸಭಾ ಸದ್ಯಸರುಗಳಾದ ಗಾಯತ್ರಿ ಮೋಹನ್,ಯೋಗೇಶ್, ಮಹೇಶ್, ವಿಜಯಲಕ್ಷ್ಮಿ, ಗಂಗಾಧರ್,ಸಿಧಿಕ್, ಗಾಯತ್ರಿ, ಸೇರಿದಂತೆ ಇತರರು ಇದ್ದರು