ವಿಷ ಮೇವು ತಿಂದು. ನಾಲ್ಕು ಮೇಕೆ ಸಾವು ಪರಿಹಾರಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.30:- ಸುತ್ತೂರು. ನಂಜನಗೂಡು ತಾಲೂಕು. ಮರಡಿಹುಂಡಿ ಗ್ರಾಮದ. ಮಾದೇವು ಎಂಬುವರು ಎಂದಿನಂತೆ ಹೊಲಕ್ಕೆ 16 ಮೇಕೆಗಳು ಹಾಗೂ ಐದು ಕುರಿಗಳನ್ನು ಮೇವು ಮೇಸಲು ಹೊಲಕ್ಕೆ ತೆರಳಿದರು.. ಆ ಸಂದರ್ಭದಲ್ಲಿ ವಿಷ ಮಿಶ್ರಣ ಹುಲ್ಲನ್ನು. ತಿಂದ ಮೇಕೆಗಳು ಸ್ಥಳದಲ್ಲಿ . ಸಾವನ್ನಪ್ಪಿದು . ಕೆಲ ಮೇಕೆಗಳು ಮನೆಗೆ ಬಂದು ವಿಷಯ ಮುಟ್ಟಿಸಿದ. ತಕ್ಷಣ ಸ್ಥಳೀಯ ಸುತ್ತೂರು ಪಶು ಆಸ್ಪತ್ರೆಯ ವೈದ್ಯರಾದ ಡಾ. ನಿಖಿತ್ ಅವರ ತಂಡ ಆಗಮಿಸಿ ಉಳಿದ ಮೇಕೆಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾದರು ಉಳಿದ ಎಲ್ಲ ಮೇಕೆಗಳು ಪ್ರಾಣಾಪಾಯದಿಂದ ಪಾರಾದವು. ನಂತರ ವೈದ್ಯರು ಸಾವುಗೀಡಾದ ಮೇಕೆಗಳಿಗೆ. ಮರಣೋತ್ತರ ಪರೀಕ್ಷೆ ನಡೆಸಿ. ಮರಣ ಹೊಂದಿದ ಮೇಕೆಗಳಿಗೆ. ಸರ್ಕಾರದಿಂದ ಪರಿಹಾರ ಕೊಡಿಸಲು ಎಲ್ಲ ವಿವರಗಳನ್ನು ಪಡೆದುಕೊಂಡರು.
ಮಾದೇವ ಅವರು ಕುಟುಂಬವು ಬಡ ಕುಟುಂಬವಾಗಿದ್ದು.ಕೂಲಿ ಮಾಡಿ ಮೇಕೆಯನ್ನು ಸಾಕಣೆಗೆ ಮಾಡುತ್ತಿದ್ದರು ಇವರಿಗೆ ಸರ್ಕಾರ ಕೂಡಲೇ ಪರಿಹಾರ ಕೊಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.