ನಿಗದಿತ ಸಮಯಕ್ಕೆ ಸಂಘದ ಹಣ ಪಾವತಿಸಿ: ರಾಜಶೇಖರ್ ಗಾಣಿಗ
ಸಂಜೆವಾಣಿ ವಾರ್ತೆ
ನಂಜನಗೂಡು: ಆ.30:- ಸಂಘದಲ್ಲಿ ಪಡೆದ ಹಣವನ್ನು ನಿಗದಿತ ಸಮಯಕ್ಕೆ ಪಾವತಿಸಿದರೆ ಸಂಘ ಉಳಿಸಬಹುದು ಮತ್ತು ಬೆಳೆಸಬಹುದು ರಾಜ್ಯಾಧ್ಯಕ್ಷ ರಾಜಶೇಖರ್ ಗಾಣಿಗ ತಿಳಿಸಿದರು.
ನಂಜನಗೂಡು ತಾಲೂಕು ಗಾಣಿಗರ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ ಮೊದಲನೆಯ ವರ್ಷದ ವಾರ್ಷಿಕ ಮಹಾಸಭೆ ಹಾಗೂ ಮೇಲ್ಕಂಡ ಸಂಘದ ಉದ್ಘಾಟನಾ ಸಮಾರಂಭವನ್ನು ಪಟ್ಟಣದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮ ಉದ್ಘಾಟನೆಯನ್ನು ಗಾಣಿಗ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ್ ಗಾಣಿಗ ಉದ್ಘಾಟಿಸಿದರು.
ಸಭೆ ಉದ್ದೇಶಿಸಿ ಮಾತನಾಡಿ ಆರ್ಥಿಕವಾಗಿ ಬೆಳೆಯಲು ಸಂಘ ಸಹಕಾರಿಯಾಗಿದೆ ಕಡಿಮೆ ಬಡ್ಡಿ ಹಣ ಸಾಲ ನೀಡುತ್ತಾರೆ ಸಾಲ ಪಡೆದವರು ಸರಿಯಾದ ಸಮಯಕ್ಕೆ ಹಣ ವಾಪಸ್ ನೀಡಿದರೆ ಸಂಘ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಇದರಿಂದ ಹಣಕಾಸು ವ್ಯವಹಾರ ಹೆಚ್ಚಾಗುತ್ತದೆ ಇದರಿಂದ ಸದಸ್ಯರಿಗೂ ಕೂಡ ಮುಂದಿನ ದಿನಗಳಲ್ಲಿ ಹೆಚ್ಚಿನ ಹಣ ಪಡೆದು ಆರ್ಥಿಕವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಂಘ ಸೇರುದಾರರನ್ನು ಪಡೆದು ಸಂಘವನ್ನು ಉಳಿಸಿ ಬೆಳೆಸಬೇಕು ಎಂದು ಕಿವಿ ಮಾತು ತಿಳಿಸಿದರು ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ಸೌಹಾರ್ದ ಸಹಕಾರಿ ಸಂಘ ಮಾಡಬೇಕೆಂದು ಅಂದುಕೊಂಡಿದ್ದೇನೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು ಯಾವುದೇ ಸಂಘ ಉಳಿಯಬೇಕಾದರೆ ಸೇರುದಾರರೇ ಮುಖ್ಯ ಪಡೆದ ಹಣವನ್ನು ಸರಿಯಾದ ಸಮಯಕ್ಕೆ ನೀಡಿದರೆ ಸಂಘವು ಕೂಡ ಉಳಿದು ಇನ್ನಿತರ ಕುಟುಂಬಗಳಿಗೆ ದಾರಿಯಾಗಲು ಸಾಧ್ಯವಾಗುತ್ತದೆ ಎಂದರು ಮುಂದಿನ ದಿನಗಳಲ್ಲಿ ನಿಮ್ಮ ಸಂಘಕ್ಕೆ ಕೈಜೋಡಿಸಿ ನಾನು ಕೂಡ ಸಹಕಾರಿಯಾಗುತ್ತೇನೆ ಎಂದು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಎಂ ಶಂಕರ್ ಅಧ್ಯಕ್ಷರು ನಂಜನಗೂಡು ತಾಲೂಕು ಗಾಣಿಗರ ಸೌಹಾರ್ದ ಸಂಘ ಉಪಸ್ಥಿತಿ ಎಂ ಬಿ ಬಸವರಾಜು ಗುರುಪ್ರಸಾದ್ ಬಂಗೇರವರು ಪ್ರಾಂತಿಯ ಅಧಿಕಾರಿಗಳು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೈಸೂರ್ ಆರ್ ಎಚ್ ಸುರೇಶ್ ಸಂಘದ ನಿರ್ದೇಶಕರಾದ ಪಿಎಂ ಆದ ಶೆಟ್ಟಿ ಬಿ ಸ್ವಾಮಿ ಶಿವಣ್ಣ ಸಿ. ರಾಮಚಂದ್ರು ಆರ್ ಸಿದ್ದೇಶ್ವರ ಮಹೇಶ್ ಮಾದೇವ ಮಾದೇವಸ್ವಾಮಿ ಶಿವಮಾದೇವು ಶ್ರೀಮತಿ ಕವಿತಾ ಮಂಜುನಾಥ್ ಶ್ರೀಮತಿ ಕೆ ವಿ ಅಶ್ವಿನಿ ರವಿ ಬಿ ಆರ್ ಸಂತೋಷ್ ಕಾಂತರಾಜು ಸಿದ್ದರಾಜು ಸಿಬ್ಬಂದಿ ವರ್ಗ ಶ್ರೀಮತಿ ಆರ್ ಪ್ರಪುಲ್ಲ ಎನ್ ಆರ್ ಶ್ರೀನಿವಾಸ್ ಸೇರಿದಂತೆ ಸಂಘದ ಸೇರುದಾರರು ಇದ್ದರು