ಹೌದು ನಾನು ಆರ್.ಎಸ್.ಎಸ್ ಏನೀಗ
ಕೋಲಾರ,ಆ,೩೦- ಹೌದು ನಾನು ಆರ್.ಎಸ್.ಎಸ್. ಏನೀ ಈವಾಗ ? ನಾನು ಆರ್.ಎಸ್.ಎಸ್ ಅದರೆ ಇವನು ಓರ್ವ ತಾಲಿಬಾನ್ ಏಜೆಂಟ್ ಇವನಿಂದ ೫೦-೬೦ ಮನೆಗಳು ಮುಳುಗಿಸಿ ನಾಶವಾಗಿದೆ. ಹಲವಾರು ಮಂದಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮುಬಾರಕ್ ಯಾರು ? ಅವನ್ಯಾರೂ ನನ್ನನ್ನು ಪ್ರಶ್ನಿಸಲು ಅವನಿಗೇನು ಅಧಿಕಾರ ಇದೆ. ನಾನು ಗೆಸ್ಟ್ ಹೌಸ್‌ನಲ್ಲಿ… ತೋಟದ,,, ಮನೆಯಲ್ಲಿ,,, ಕಚೇರಿಯಲ್ಲಿ,,,, ಫ್ಲೈಟ್‌ನಲ್ಲಿ,,,, ಬೇಕಾದರೂ ಮೀಟಿಂಗ್ ಕರೆಯುತ್ತೇನೆ, ಎಲ್ಲಿ ಬೇಕಾದರೂ ಮೀಟಿಂಗ್ ಮಾಡುತ್ತೇನೆ ಇದನ್ನು ಕೇಳಲು ಇವನ್ಯಾರೊ ಕಿತ್ತೋದೋನೂ, ನಾನು ಕರೆದ ಮೀಟಿಂಗ್‌ಗೂ ಇವನಿಗೂ ಏನು ಸಂಬಂಧ ?. ಇವನನ್ನು ಏನಾದರೂ ಮೀಟಿಂಗ್‌ಗೆ ಕರೆದಿದ್ದೇವಾ, ನಾನು ಎಲ್ಲಿ ಬೇಕಾದರೂ ಮೀಟಿಂಗ್ ಕರೆಯುತ್ತೇನೆ ಇವನಿಗೇನು ಕಿತ್ತೋದೋನಿಗೆ ? ನಾನು ಕೊತ್ತೂರು ಮಂಜುನಾಥ್ ನನ್ನ ಇಷ್ಟ, ನನ್ನ ಅಧಿಕಾರ, ಇವನ್ಯಾರೊ… ಎಂದು ಶಾಸಕ ಕೊತ್ತೂರು ಮಂಜುನಾಥ್ ಎಂದು ಪ್ರಶ್ನಿಸಿ ಕಿಡಿ ಕಾರಿದರು,
ನಗರಸಭೆಯಲ್ಲಿ ಬುಧುವಾರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂಗೀತಾ ಅವರುಗಳು ಅಧಿಕಾರಿಗಳ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾದ್ಯಮದವರ ಪ್ರಶ್ನೆಯೊಂದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಮಾತನಾಡಿ ನಾನು ಆರ್.ಎಸ್.ಎಸ್. ಎಂದು ರುಜುವಾತು ಪಡೆಸಲಿ ಇನ್ನು ಅವನು ತಾಲಿಬಾನ್ ಅವನಿಂದ ಹಲವಾರು ಕುಟುಂಬಗಳು ನಾಶವಾಗಿದೆ ಎಂದರು.
ಮುಬಾರಕ್‌ಗೂ ಕಾಂಗ್ರೇಸ್ ಪಕ್ಷಕ್ಕೂ ಸಂಬಂಧವಿಲ್ಲ,ಅತನನ್ನು ಕಾಂಗ್ರೇಸ್ ಪಕ್ಷವು ಅಮಾನತ್ತು ಪಡೆಸಿದೆ, ಅತನಿಗೆ ನಮ್ಮನ್ನು ಪ್ರಶ್ನಿಸುವಂತ ನೈತಿಕತೆಯೂ ಇಲ್ಲ, ಅಧಿಕಾರವೂ ಇಲ್ಲ… ಮುಬಾರಕ್ ಏನೆಂದು ಮೊಬೈಲ್‌ನಲ್ಲಿ ಚಿತ್ರಿಸಿದ್ದ ಪೊಲೀಸ್ ಠಾಣೆಯಲ್ಲಿ ಸ್ಲೇಟ್ ಹಿಡಿದು ಕೊಂಡಿರುವ ಪೋಟೋವನ್ನು ಪ್ರದರ್ಶಿಸಿದ ಅವರು ಮುಬಾರಕ್ ಎಂಥವನೆಂದು ? ಎಂದೆಂಧ ಒಳ್ಳೆ ಕೆಲಸಗಳು ಮಾಡಿದ್ದಾನೆಂದು ನೀವೇ ಅರ್ಥ ಮಾಡಿ ಕೊಳ್ಳಿ, ಇಂಥವನನ್ನು ನಾವು ನಗರಸಭೆಗೆ ಅಧ್ಯಕ್ಷರನ್ನಾಗಿ ಮಾಡಬೇಕಾ ? ಎಂದು ಪ್ರಶ್ನಿಸಿದರು,
ನಗರಸಭೆಯ ಅಧಿಕಾರ ಸ್ವೀಕಾರ-
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್, ,ನೊತನ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ನಗರಸಭೆ ಸದಸ್ಯರಾದ ಅಪ್ಸರ್, ಅಂಬರೀಷ್, ಶಂಕರ್, ಪ್ರವೀಣ್ ಗೌಡ, ರಾಕೇಶ್ ಗೌಡ, ಗ್ಯಾರೆಂಟಿ ಅನುಷ್ಟನಾ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಮೈಲಂಡಹಳ್ಳಿ ಮುರಳಿ, ಸೀಸಂದ್ರ ಗೋಪಾಲಗೌಡ, ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್, ಮುಖಂಡರಾದ ಅಮರ್, ಬಾಲು, ಜೆ.ಕೆ.ಜಯರಾಮ್. ಕುರಿಗಳ ರಮೇಶ್, ಜಗದೀಶ್,ಚಂದ್ರಮೌಳಿ. ಮುಂತಾದವರು ಹಾಜರಿದ್ದರು,