ಲಾರಿ ಡಿಕ್ಕಿ: ರಸ್ತೆ ದಾಟಲು ನಿಂತಿದ್ದ ಪಾದಚಾರಿ ಮೃತ್ಯು

ಬ್ರಹ್ಮಾವರ: ಇಲ್ಲಿನ ಬಸ್‌ಸ್ಟ್ಯಾಂಡ್ ಬಳಿ ರಾ.ಹೆ.ಯಲ್ಲಿ ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಶ್ರೀಪತಿ(೭೬) ಮೃತಪಟ್ಟಿದ್ದಾರೆ.
ಎದೆ ಹಾಗೂ ತಲೆಗೆ ತೀವ್ರ ಗಾಯಗೊಂಡ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ, ಅನಂತರ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.