ಸಿಯುಕೆಯಲ್ಲಿ ರಾಸಾಯನ ಶಾಸ್ತ್ರ ವಿಭಾಗದ ಎಮ್ ಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ
ಕಲಬುರಗಿ:ಆ.29:“ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಸರಿಯಾದ ಗುರಿಯನ್ನು ಹೊಂದಿರಬೇಕು ಮತ್ತು ಅದನ್ನು ಸಾಧಿಸುವ ನಿಟ್ಟಿನಲ್ಲಿ ಕಠಿಣ ಪರಿಶ್ರಮ ಪಡಬೇಕು” ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ. ಆರ್ ಆರ್ ಬಿರದಾರ ಹೇಳಿದರು.
ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ರಾಸಾಯನ ಶಾಸ್ತ್ರ ವಿಭಾಗ ಎಮ್ ಎಸ್ಸಿ ಪ್ರಥಮ ವರ್ಷದ (2024-26 ರ ಬ್ಯಾಚಿನ) ವಿದ್ಯಾರ್ಥಿಗಳ ಸ್ವಾಗತ ಸಮಾರಂಭ “ರಂಗ ತಿರಂಗಾ”ದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಕಠಿಣ ಪರಿಶ್ರಮದ ಜೊತೆಗೆ ಪ್ರಾಮಾಣಿಕತೆ, ನೈತಿಕತೆ, ಶಿಸ್ತು, ಸ್ವಯಂ-ನಿಯಂತ್ರಣ, ಆತ್ಮವಿಶ್ವಸ, ಹೊಂದಾಣಿಕೆಯ ಗುಣ, ಧನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕ” ವೆಂದು ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶೇಷತೆಯ ಬಗೆಗೆ ಮಾತನಾಡಿದ ಅವರು “ವಿಶ್ವವಿದ್ಯಾಲಯವು ಸುಸಜ್ಜಿತ ಗ್ರಂಥಾಲಯ, ಸುಂದರ ಕ್ಯಾಂಪಸ್, ಉತ್ತಮ ಕ್ರೀಡಾ ಸೌಲಭ್ಯಗಳು, ಒಳ್ಳೆಯ ಶಿಕ್ಷಕರು, ವಿವಿಧ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿಗಳನ್ನೊಳಗೊಂಡ ಸಣ್ಣ ಭಾರತದಂತಿದೆ. ಇದು ತಮಗೆ ವಿವಿಧ ಸಂಸ್ಕøತಿ, ಭಾμÉ, ಜ್ಞಾನ, ಉತ್ತಮ ಸ್ಪರ್ಧಾತ್ಮಕ ಕಲಿಕೆಯ ವಾತವರಣವನ್ನು ಒದಗಿಸುತ್ತದೆ. ಒಟ್ಟಾರೆಯಾಗಿ ಇದು ತಮ್ಮ ವ್ಯಕ್ತಿತ್ವದ ಸವಾರ್ಂಗಿಣ ಅಭಿವೃದ್ಧಿಗೆ ಪೂರಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪೆÇ್ರ. ವೆಂಕಟರಮಣ ದೊಡ್ಡಿಯವರು ಮಾತನಾಡಿ “ನಮ್ಮ ವಿಭಾಗವು ಶ್ರೇಷ್ಠ ಪ್ರಾದ್ಯಾಪಕರನ್ನು ಹಾಗು ಸುಸಜ್ಜಿತ ಪ್ರಯೊಗಾಲಯಗಳನ್ನು ಹೊಂದಿದೆ. ಅತಿ ಮುಖ್ಯವಾಗಿ ಎನ್ ಎಮ್ ಆರ್ ಸ್ಪೆಕ್ಟೊಮಿಟರ್, ಎಕ್ಸ್ ಆರ್ ಡಿ ಇನ್ಸ್ಟ್ರುಮೆಂಟ್ ನಂತಹ ಅತ್ಯಾಧುನಿಕ ಸಲಕರಣೆಗಳನ್ನು ಹೊಂದಿದೆ. ನಮ್ಮ ವಿಶ್ವವಿದ್ಯಾಲಯ ಎನ್ ಇ ಪಿ 2020 ಅಧಾರಿತ ಪಠ್ಯಕ್ರಮವನ್ನು ಹೊಂದಿದೆ. ಇದನ್ನು ಬಳಸಿಕೊಂಡು ತಮ್ಮ ಕಲಿಕೆಯನ್ನು ಉತ್ತಮಗೊಳಿಸಿ. ವಿಶ್ವವಿದ್ಯಾಲಯದಿಂದ ಹೊರಹೊಗುವ ಮೊದಲು ಗೆಟ್, ನೆಟ್, ಜೆಆರ್ಎಫ್ ಪರಿಕ್ಷೆಗಳನ್ನು ಉತ್ತೀರ್ಣರಾಗಿ ಒಳ್ಳೆಯ ಸಂಸ್ಥೆಗಳಲ್ಲಿ ಉದೋಗ ಪಡೆಯುವಂತಾಗಿ” ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಪೆÇ್ರ. ಕೆ. ಹನುಮೆಗೌಡ, ಪೆÇ್ರ. ಪಿ. ರಾಗವಯ್ಯ, ಪೆÇ್ರ. ಶೇಷನಾಥ ಭೋμÉ್ಲ, ಡಾ. ದೊರೈಪಾಂಡೆ, ಡಾ. ವೆಂಕಟನಾರಾಯಣ, ಡಾ. ಭವ್ಯ, ಡಾ. ಆಂಜೆನೆಯಲು ಹಾಗು ಎಮ್ ಎಸ್ಸಿ ಪ್ರಥಮ ಹಾಗು ದ್ವಿತಿಯ ವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.