ಖಾಸಗಿ ಕಂಪನಿಗಳಲ್ಲಿ ಹಣ ತೊಡಗಿಸಿವಂಚಿತರಾದವರಿಗೆ ಪರಿಹಾರಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೩೦; ವಿವಿಧ ಖಾಸಗಿ ಕಂಪನಿಗಳಲ್ಲಿ ಹಣ ತೊಡಗಿಸಿ ವಂಚಿತರಾದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಸೆ. ೧ ರಂದು ಬೆಳಿಗ್ಗೆ ೧೧ ಗಂಟೆಯಿAದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟವಧಿ ಸತ್ಯಗ್ರಹ ಧರಣಿ ನಡೆಸಲಾಗುವುದು ಎಂದು ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ ಸಂಘಟನೆಯ ಉಪಾಧ್ಯಕ್ಷ ಮಧು ಎಚ್.ಎಂ ಹರೋನಹಳ್ಳಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಅಗ್ರಿ ಗೋಲ್ಡ್, ಪಿಎಸಿಎಲ್, ಸಮೃದ್ದ ಜೀವನ್, ಅಚಿವರ್ಸ್, ಅಗ್ರಿ ಇಂಡಿಯಾ, ಇ- ಸ್ಟೋರ್ ಇಂಡಿಯಾ, ಹಿಂದೂಸ್ಥಾನ್ ಗುರುಟೀಕ್ ಸೇರಿದಂತೆ ವಿವಿಧ ಕಂಪನಿಗಳಲ್ಲಿ ಹಣತೊಡಗಿಸಿರುವವರಿಗೆ ಈ ಕಂಪನಿಗಳು ಲಕ್ಷಾಂತರ ರೂ., ವಂಚಿಸಿವೆ. ಇದರಿಂದ ಅನೇಕರು ಹಣ ಕಳೆದುಕೊಂಡು ನೊಂದಿದ್ದಾರೆ. ಸೆಬಿ ಆದೇಶದಂತೆ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಿರುವ ಸರ್ಕಾರಗಳು ವಂಚನೆ ಸಂತ್ರಸ್ತರಿಗೆ ಇನ್ನೂ ಹಣ ಕೊಡಿಸಿಲ್ಲ. ಕೂಡಲೇ ಹಣ ಪಾವತಿಸಲು ಆದೇಶ ನೀಡಬೇಕೆಂದು ಅವರು ಒತ್ತಾಯಿಸಿದರು.ಜಿಲ್ಲೆಯಲ್ಲಿ ಸುಮಾರು ೧ ಲಕ್ಷಕ್ಕೂ ಅಧಿಕ ವಿವಿಧ ಕಂಪನಿಗಳಿAದ ವಂಚನೆಗೊಳಗಾದ ಗ್ರಾಹಕರಿದ್ದೇವೆ. ರಾಜ್ಯದಲ್ಲಿ ಅಗ್ರಿ ಗೋಲ್ಡ್ ಒಂದು ಕಂಪನಿಯ ವಂಚನೆಯ ಮೊತ್ತವೇ ಸುಮಾರು ೩೦೦೦ ಕೋಟಿಯಷ್ಟಿದೆ. ಸಂತ್ರಸ್ತರು ದಾಖಲೆ ಸಮೇತ ಡಿಸಿ ಮತ್ತು ತಹಶಿಲ್ದಾರ್ ಕಚೇರಿಗಳಲ್ಲಿ ಮನವಿ ಸಲ್ಲಿಸಲು ವಿಶೇಷ ಆಡಳಿತ ಅವಕಾಶ ಕಲ್ಪಿಸಿದ್ದರೂ ಕಂಪನಿಗಳಿAದ ಹಣ ಮರಳಿಸುವ ಕೆಲಸ ಆಗಿರುವುದಿಲ್ಲ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೇರಿದಂತೆ ರಾಷ್ಟ್ರವ್ಯಾಪಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.