ಜಿಲ್ಲಾ ವಕೀಲರ ಸಂಘದಿಂದ ಲಾರ‍್ಸ್ ರೆಡಿ ರೆಕನರ್ ಪುಸ್ತಕ ಲೋಕಾರ್ಪಣೆ
ಸಂಜೆವಾಣಿ ವಾರ್ತೆ
ದಾವಣಗೆರೆ,ಆ.೩೦: ಜಿಲ್ಲಾ ವಕೀಲರ ಸಂಘ, ದಾವಣಗೆರೆ ವತಿಯಿಂದ ವಕೀಲ ಕೆ. ದಾದಾಪೀರ್ ಬರೆದಿರುವ ಲಾರ‍್ಸ್ ರೆಡಿ ರೆಕನರ್ ಪುಸ್ತಕ ಬಿಡುಗಡೆ ಸಮಾರಂಭವನ್ನು ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಬೆಳಿಗ್ಗೆ 10.30ಕ್ಕೆ ಏರ್ಪಡಿಸಲಾಗಿತ್ತು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ, ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದ್ದು, ನಮ್ಮ ಜೀವನದಲ್ಲಿ ಗುರಿಗಳನ್ನು ಸಾಧಿಸಲು ಪುಸ್ತಕಗಳು ಸರಿ ಹಾದಿಯಲ್ಲಿ ನಡೆಸುವುದರಿಂದ ಅವುಗಳಿಗೆ ಅಪಾರ ಪ್ರಾಮುಖ್ಯತೆ ಇದೆ ಎಂದು ಹೇಳಿದರು. ಒಂದು ಒಳ್ಳೆಯ ಪುಸ್ತಕ ನೂರು ಸ್ನೇಹಿತರ ಮೌಲ್ಯz್ದÁಗಿದೆ. ಪುಸ್ತಕಗಳ ಮೂಲಕ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತೇವೆ ಹಾಗೂ ಲೋಕದ ಅಂದವನ್ನು ಪಡೆಯಲು ಅವಕಾಶವಾಗುತ್ತದೆ. ಪ್ರಪಂಚದ ಬಗ್ಗೆ ಹೊಸ ಮಾಹಿತಿ, ನೆಲದ ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳು ಸಹಾಯ ಮಾಡುತ್ತವೆ ಮತ್ತು ಜ್ಞಾನವನ್ನು ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಮತ್ತು ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಿಸಿದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಲೇಖಕರು ಶ್ರಮವಹಿಸಿ ರಚಿಸಿದ ಪುಸ್ತಕವನ್ನು ಬಿಡುಗಡೆ ಮಾಡುವುದು ನಿಜಕ್ಕೂ ಹೆಮ್ಮೆ ಹಾಗೂ ಸಂತಸದ ಸಂಗತಿ ಎಂದರು. ಸಮಾರಂಭದಲ್ಲಿ ಮಾತನಾ ಡಿದ ಹಿರಿಯ ನ್ಯಾಯವಾದಿ ಲೇಖಕ ಕೆ. ದಾದಾಪೀರ್ ಮಾತನಾಡಿ, ಮೊಬೈಲ್‌ನಲ್ಲಿ ಗೂಗಲ್ ವೀಕ್ಷಣೆ ಬದಿಗಿಟ್ಟು, ಪುಸ್ತಕ ಓದುವ ಆನಂದ ಅನುಭವಿಸಿ, ಜ್ಞಾನ ಸಂಪನ್ನರಾಗಬೇಕೆಂದು ಯುವ ವಕೀಲರಿಗೆ ಸಲಹೆ ನೀಡಿದರು. ಆಳ ಅಧ್ಯಯನದಿಂದ ವಾಸ್ತವಾಂಶಗಳನ್ನು ಸರಿಯಾಗಿ ಮತ್ತು ಸುಲಲಿತವಾಗಿ ನ್ಯಾಯಾಲಯದಲ್ಲಿ ಮಂಡಿಸಿ, ಮನದಟ್ಟು ಮಾಡಲು ಕಾನೂನು ಪುಸ್ತಕಗಳ ಅಭ್ಯಾಸ ನಿರಂತರವಾಗಿರಬೇಕೆAದು ತಿಳಿಸಿದರು. ತಮ್ಮ ಪುಸ್ತಕದಲ್ಲಿ 20 ಕೇಂದ್ರದ ಅಧಿನಿಯಮಗಳು ಹಾಗೂ ಕರ್ನಾಟಕದ ಅಧಿನಿಯಮಗಳ ಪರಿಚಯವಿದ್ದು, 222 ಪುಟಗಳ ಈ ಪುಸ್ತಕವನ್ನು ಬೆಂಗಳೂರಿನ ಪ್ರೀಮಿಯರ್ ಬುಕ್ ಹೌಸ್ ಪ್ರಕಟಿಸಿದೆ ಎಂದು ತಿಳಿಸಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪುಸ್ತಕಗಳನ್ನು ನಮ್ಮನ್ನು ಒಂಟಿತನದ ಪ್ರಪಂಚದಿAದ ಹೊರತರುವ ಅತ್ಯುತ್ತಮ ಒಡನಾಡಿಗಳಾಗಿವೆ. ಪುಸ್ತಕ ರಚನೆ ಒಂದು ರಚನಾತ್ಮಕ ಕ್ರಿಯೆ, ಒಂದು ದೇಶದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ಜೀವನ ಮೌಲ್ಯವನ್ನು ತಿಳಿಯಲು ಪುಸ್ತಕಗಳು ಸಹಕಾರಿಯಾಗಿವೆ. ಪುಸ್ತಕಗಳಿಗೂ , ವಕೀಲರಿಗೂ ಅವಿನಾಭಾವ ಸಂಬAಧವಿದ್ದು, ಅವಿಭಾಜ್ಯ ಅಂಗಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಲೇಖಕ ಕೆ. ದಾದಾಪೀರ್ ದಂಪತಿಗಳನ್ನು ಸಂಘದ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್‌ಕುಮಾರ್, ಮಕ್ಕಳ ಸ್ನೇಹಿ ನ್ಯಾಯಾಲಯದ ಜಿ¯್ಲÁ ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಸಿಜೆಎಂ ಟಿ.ಎಂ.ನಿವೇದಿತಾ ಉಪಸ್ಥಿತರಿದ್ದರು.ಸಮಾರಂಭದಲ್ಲಿ ನಗರದ ಎಲ್ಲಾ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಮತ್ತು ವ್ಯವಸ್ಥಾಪಕರು ಉಪಸ್ಥಿತರಿದ್ದರು