ಚಿತ್ರಕಲೆ ಮತ್ತು ಶಿಲ್ಪಕಲೆಗೆ ಶರಣಸಂಸ್ಥಾನ ಕೊಡುಗೆ ಅಪಾರ
ಕಲಬುರಗಿ:ಆ.29:ಶರಣಬಸವೇಶ್ವರ ಸಂಸ್ಥಾನವು ಚಿತ್ರಕಲೆ ಮತ್ತು ಶಿಲ್ಪಕಲೆಗೆ ಬಹಳಷ್ಟು ಮಹತ್ವದ ಕೊಡುಗೆ ನೀಡಿದೆ ಎಂದು ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾಯ9 ಡಾ.ಸುರೇಶಕುಮಾರ ನಂದಗಾಂವ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಗುರುವಾರ ಚಿತ್ರಕಲೆ ಮತ್ತು ಶಿಲ್ಪಕಲೆ ಎಂಬ ವಿಷಯ ಕುರಿತು ಮಾತನಾಡಿದರು.
ಚಿತ್ರಕಲೆ’ ಎಂಬುದು ವರ್ಣಗಳನ್ನು ಬಳಸಿ, ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ’ಅರ್ಥವತ್ತಾಗಿ ಮೂಡಿಸುವುದು. ಮಾನವ ರಚಿಸದ ಚಿತ್ರಕಲೆಯನ್ನು ನಿಸರ್ಗಸೃಷ್ಟಿ ಅಥವಾ ದೈವೀಕ ಕಲೆ ಎನ್ನುತ್ತೇವೆ. ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಚಿತ್ರಕಲೆಯನ್ನು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು 1971 ರಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭಿಸಿ ಈ ಭಾಗದ ಜನರಿಗೆ ಚಿತ್ರಕಲೆ ಅರಿವನ್ನು ಮೂಡಿಸಿದ್ದಾರೆ. ಶರಣಬಸವೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಗೋದುತಾಯಿ ದೊಡ್ಪಪ್ಪ ಪದವಿ ಮಹಾವಿದ್ಯಾಲಯದಲ್ಲಿ ಚಿತ್ರಕಲೆ ಶಿಕ್ಷಣವನ್ನು ಆರಂಭಿಸಿದರು. ಸಾವಿರಾರು ವಿದ್ಯಾರ್ಥಿಗಳು ಚಿತ್ರಕಲೆಯಲ್ಲಿ ತಮ್ಮ ಪಾಂಡಿತ್ಯವನ್ನು ಪೂರ್ಣಗೊಳಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪೂಜ್ಯರು ಶರಣಬಸವೇಶ್ವರ ಲೀಲೆಗಳನ್ನು ಆಂಧ್ರದ ಖ್ಯಾತ ಕೆನಡಿ ಎಂಬ ಕಲಾವಿದರಿಂದ ಅವರಿಂದ ನೂರಾರು ಚಿತ್ರಗಳನ್ನು ಹೊರ ತಂದಿದ್ದಾರೆ. ಅವು ಶರಣಬಸವೇಶ್ವರ ಲೀಲಾಮೃತವನ್ನು ಸಾರಿ ಹೇಳುತ್ತವೆ. ಅಲ್ಲದೆ ಶಿವನ ಚಿತ್ರ, ಅನೇಕ ದೇವರುಗಳು ಚಿತ್ರಗಳು ಸಂಸ್ಥಾನದಲ್ಲಿ ಕಾಣಲು ಸಿಗುತ್ತವೆ. ಜೆ.ಎಸ್.ಕಂಡೇರಾವ, ಡಾ.ಶಾಂತಲಾ ಅಪ್ಪ, ಡಾ. ಮಲ್ಲಿಕಾರ್ಜುನ ಬಾಗೋಡಿ, ಸುಬ್ಬಯ್ಯ ನೀಲಾ, ಭಂಕೂರಕರ್, ಯುವ ಕಲಾವಿದ ಹಣಮಂತ ಹೀಗೆ ಅನೇಕ ಕಲಾವಿದರು ಚಿತ್ರಕಲಾವಿದರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಶರಣಬಸವೇಶ್ವರ ದೇವಸ್ಥಾನದಲ್ಲಿ ಶಿಲ್ಪಕಲೆ ಕಂಡು ಬರುತ್ತದೆ. ಅಲ್ಲಿ ಯಾವುದೇ ಶೈಲಿಯ ಶಿಲ್ಪ ಇಲ್ಲ, ಅದು ಎಲ್ಲ ಶೈಲಿಯ ಶಿಲ್ಪವನ್ನು ಹೊಂದಿರುವಂತಹ ನಾಡಿನ ಪ್ರಸಿದ್ಧ ದೇವಾಲಯ. ಪೂಜ್ಯರು ಶಿಲ್ಪಕಲೆಗೆ ತಮ್ಮದೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಶಿಲ್ಪಕಲಾವಿದರನ್ನು ಬೆಳೆಸಿದಿದಾರೆ. ಸಂಸ್ಥಾನದ ಅನೇಕ ಕಟ್ಟಡಗಳು ಶಿಲ್ಪಕಲೆಯನ್ನು ಹೊಂದಿವೆ ಎಂದು ಹೇಳಿದರು. ಪೂಜ್ಯ ದೊಡ್ಡಪ್ಪ ಅಪ್ಪ, ಪೂಜ್ಯ ಶರಣಸಬವಪ್ಪ ಅಪ್ಪ, ಬೇರೆ ಬೇರೆ ದೇವರುಗಳ ಶಿಲ್ಪಕಲೆ ಸಂಸ್ಥಾನದಲ್ಲಿ ಕಂಡು ಬರುತ್ತವೆ ಎಂದು ಹೇಳಿದರು.