ಅಭಿಧಮ್ಮ ಪಿಟಕ ಹೂದೋಟವಿದ್ದಂತೆ : ಮೊಳಕಾಲ್ಮೂರು ಶ್ರೀನಿವಾಸಮೂರ್ತಿ
ಕಲಬುರಗಿ:ಆ.29:ಬೌದ್ಧ ತ್ರಿಪಿಟಕಗಳ ಅನುಸಂಧಾನ ಕಾರ್ಯಾಗಾರದ ಎರಡನೆಯ ದಿನದ ಮೊದಲ ಗೋಷ್ಠಿಯಲ್ಲಿ ಅಭಿಧಮ್ಮ ಪಿಟಕ ಕುರಿತು ನಾಡಿನ ಹೆಸರಾಂತ ಬೌದ್ಧ ವಿದ್ವಾಂಸ, ಬೌದ್ಧ ಸಾಹಿತ್ಯದ ಅನುವಾದಕರಾದ ಮೊಳಕಾಲ್ಮೂರು ಶ್ರೀನಿವಾಸಮೂರ್ತಿಯವರು ಮಾತನಾಡುತ್ತಾ, ಅಭಿಧಮ್ಮ ಪಿಟಕ ಬೌದ್ಧ ವಿಹಾರಗಳಲ್ಲಿ ಬಿಕ್ಖುಗಳು ಧ್ಯಾನ ಮಾಡುವುದರ ಮೂಲಕ ಅಭಿಧಮ್ಮವನ್ನು ಬೋಧಿಸುತ್ತಾರೆ. ಅಭಿ: ಎಂದರೆ ಉನ್ನತವಾದುದು. ಶ್ರೇಷ್ಠವಾದುದು ಎಂದು ಅಭಿಧಮ್ಮವನ್ನು ಅಚಾರ್ಯ ಬುದ್ಧಘೋಷರು, ವಿಶೇಷಧಮ್ಮ ಎಂದು ಕರೆದ್ದಾರೆ. ಥೇರವಾದ ಬೌದ್ಧಧರ್ಮೀಯರು ಈ ಪಿಟಕವನ್ನು ಬೌದ್ಧ ಸಿದ್ಧಾಂತದ ಶ್ರೇಷ್ಠ ಹೂವೆಂದು ಪರಿಗಣಿಸಿದ್ದಾರೆ. ಒಬ್ಬ ಸಮ್ಮಾಸಂಬುದ್ಧನಿಗೆ ಮಾತ್ರ ಹೊಳೆಯಬಹುದಾದ ಅತ್ಯಂತ ನಿಖರವಾದ, ಸ್ಪಷ್ಟವಾದ, ಅನುಭವ ಭೂಮಿಕೆಯಿಂದ ಹೊರಟ ಜ್ಞಾನ ಈ ಅಭಿಧಮ್ಮದಲ್ಲಿದೆ. ಇದನ್ನೇ ಸಬ್ಬ ಜ್ಞಾನ ಎನ್ನುತ್ತಾರೆ. ಅಭಿಧಮ್ಮ ಪಿಟಕ ಒಂದು ಮನಃಶಾಸ್ತ್ರ ಗ್ರಂಥ ಎಂದು ಅಭಿಪ್ರಾಯಪಟ್ಟರು.
ಅಭಿಧಮ್ಮ ಪಿಟಕದಲ್ಲಿ ಏನಿದೆ? ಮನುಷ್ಯನ ಅಂತಿಮ ಗುರಿ ಸಾಧನೆಗೆ ನಿಬ್ಬಾಣ ಎಂಬುದಾಗಿದ್ದರೆ ಅದರ ಸಾಕ್ಷಾತ್ಕಾರವು ಮನಸ್ಸಿನಿಂದಲೇ ಆಗುವಂಥದ್ದು, ಆ ಮನಸ್ಸನ್ನು ಪರಿಶುದ್ಧಿ ಮಾಡುವ, ಅದಕ್ಕಾಗಿ ಬೇಕಾಗಿರುವ ಸಾಧನೆಗಳನ್ನು ವಿನಯ ಸುತ್ತ ಪಿಟಕಗಳಲ್ಲಿ ಭಗವಾನ್ ಬುದ್ಧರು ವೈಜ್ಞಾನಿಕ ಸತ್ಯಗಳ ಮೂಲಕ ನೀಡಿದ್ದಾರೆ. ವ್ಯಾವಹಾರಿಕ ಭಾμÉಯಲ್ಲಿ (ವೋಹಾರ ವಚನ) ಉಪದೇಶಿಸಿದ್ದಾರೆ ಎಂದರು. ಈ ಪದಗಳು ಸಮ್ಮುತಿ ಸಚ್ಚ (ಪಾರಂಪರಿಕ ಸತ್ಯ). ಲೌಕಿಕದಲ್ಲಿ ಹೀಗೆಯೇ ಹೇಳಬೇಕು. ಆದರೆ ಪರಮಾರ್ಥದಲ್ಲಿ ನಾನು, ನೀನು ಎಂಬುದಿಲ್ಲ ಅಭಿಧಮ್ಮದಲ್ಲಿ ಪಾರಮಾರ್ಥಿಕ ಸತ್ಯವನ್ನು ಬಿಂಬಿಸುವ ಪದಗಳನ್ನೇ ಬಳಸಲಾಗಿದೆ ಅಲ್ಲಿ ‘ನಾನು’ ಏನಿದ್ದರೂ ‘ನಾಮ ರೂಪ’ ಅμÉ್ಟೀ. ಮನುಷ್ಯನು ನಾಮ ರೂಪ ಎಂಬ ಪಂಚಕ್ಖಂದಗಳಿಂದ ಆದವನು, ‘ನಾಮ’ ಎಂದರೆ ಮನಸ್ಸು (ಚಿತ್ತ), ರೂಪ ಎಂದರೆ ಶರೀರ, ಅಭಿಧಮ್ಮದಲ್ಲಿ ಚಿತ್ತ, ಚೇತಸಿಕಾ, ರೂಪ, ನಿಬ್ಬಾಣ-ಎಂಬ ಈ ನಾಲ್ಕು ಪಾರಮಾರ್ಥಿಕ ಸತ್ಯಗಳನ್ನೇ ಭಗವಾನ್ ಬುದ್ಧ ಸಾರಿದ್ದಾರೆ.
ಮನುಷ್ಯನು ನಾಮ (ಮನಸ್ಸು/ಚಿತ್ತ) ರೂಪಗಳಿಂದ ಆದವನು. ಅದರಲ್ಲಿ 81 ಚಿತ್ತಗಳಿವೆ. 52 ಚೇತಸಿಕಾಗಳು ಇವೆ. ಚಿತ್ತ ಎಂದರೆ ವಸ್ತುಗಳನ್ನು, ಸಂಗತಿಗಳನ್ನು ಅರಿಯುವ ಅಥವಾ ಸಂಶೋಧಿಸುವಂತದ್ದು. ಚೇತಸಿಕಾ ಎಂದರೆ ಆ ಚಿತ್ತದಿಂದ ಅಥವಾ ಮನಸ್ಸಿನಿಂದ ಹೊರಟ ಕ್ರಿಯೆಗಳು ಅಥವಾ ಗುಣಗಳಾಗಿವೆ, ಅವು 81 ಚಿತ್ತಗಳು. ಕಾಮಾವಚರ ಚಿತ್ತಗಳು-24, ರೂಪಾವಚರ ಚಿತ್ತಗಳು-15, ಅರೂಪಾವಚರ ಚಿತ್ತಗಳು-12, ಲೋಕೋತ್ತರ ಚಿತ್ತಗಳು-40 ಎಂದು ವಿಭಾಗಗಳಿವೆ ಎಂದರು. ಅಭಿಧಮ್ಮ ಪಿಟಕದಲ್ಲಿ ಏಳು ಗ್ರಂಥಗಳಿವೆ ಅವು ಧಮ್ಮಸಂಗನಿ, ವಿಭಂಗ, ಧಾತುಕಥಾ, ಪುಗ್ಗಲ ಪಞ್ಞತ್ತಿ, ಕಥಾವತ್ಥು, ಯಮಕ, ಪಟ್ಠಾಣ ಇವುಗಳನ್ನು ಧ್ಯಾನ ಮಾಡುವುದರ ಮೂಲಕ ಜ್ಞಾನವನ್ನು ಪಡೆಯಬಹುದು ಎಂದು ತಿಳಿಸಿದರು.
ವಿನಯಪಿಟಕ ಕುರಿತು ಎರಡನೆಯ ದಿನದ ಎರಡನೆ ಗೋಷ್ಠಿಯಲ್ಲಿ ಡಾ. ಶರತ್‍ಚಂದ್ರಸ್ವಾಮಿ ಅವರು ಮಾತನಾಡುತ್ತ ವಿನಯಪಿಟಕ ಭಿಕ್ಖು ಸಂಘದ ನಿಯಮಾವಳಿಗನ್ನು ಕುರಿತು ಉಪದೇಶ ನೀಡಿದ್ದಾಗಿದೆ. ವಿನಯಪಿಟಕ ಆಜ್ಞೋಪದೇಶವಾಗಿದೆ ಎಂದರು. ಉಪಸಂಪದ ಎಂದರೆ ಸನ್ಯಾಸತ್ವ ಹೊಂದುವದು. ಬೌದ್ಧ ಭಿಕ್ಖುಗಳು ಕೂಡ ವರ್ಷಾವಾಸ ಮಾಡುವುದು ಕಡ್ಡಾವಾಗಿತ್ತು. ವಿನಯಪಿಟಕದಲ್ಲಿ ಮೂರು ವಿಭಾಗಗಳಿವೆ. ಸುತ್ತವಿಭಂಗ, ಖಂದಕ ವಿಭಂಗ ಮುಂತಾದವು. ಸುತ್ತವಿಭಂಗದಲ್ಲಿ ಭಿಕ್ಖುಗಳು ತಪ್ಪು ಮಾಡಿದಾಗ, ಅಪಾರಾಧ ಎಸೆಗಿದಾಗ ಪಶ್ಚಾತಾಪ ಪಡುವಂತಹ ನಿಯಮಗಳನ್ನು ತಿಳಿಸುತ್ತದೆ. ನಾಲ್ಕು ಪಾರಾಜಿತಗಳು, ಸಂಘಾಧಿಶೇಷಗಳು, ಅನಿಯಮಧಮ್ಮಗಳು, ನಿಸರ್ಗಿಯ ಧಮ್ಮಗಳು ಭಿಕ್ಖುಗಳು ಆಸೆ, ವ್ಯಾಮೋಹ, ಅಪರಾಧಗಳಿಂದ ಮುಕ್ತರಾಗಿ ಸರಳ ಜೀವನ ನಡೆಸಬೇಕೆಂಬುದಾಗಿ ಭಗವಾನ್ ಬುದ್ಧರು ಹೇಳಿದ್ದಾರೆ ಎಂದರು.
ಸಮಾರೋಪ ಸಮಾರಂಭದಲ್ಲಿ ಪೆÇ್ರ. ಎಚ್.ಟಿ. ಪÉÇೀತೆಯವರು ಬೌದ್ಧ ತ್ರಿಪಿಟಕಗಳ ಕುರಿತ ಅನುಸಂಧಾನ ಕಾರ್ಯಾಗಾರದಿಂದ ಬುದ್ಧನ ಮೌಲಿಕ ವಿಚಾರಧಾರೆಗಳು, ಚಿಂತನೆಗಳು ಅರಿತುಕೊಳ್ಳಲು ಪಾಲಿ ಇಂಟರ್ ನ್ಯಾಷನಲ್ ಇನ್ ಸ್ಟಿಟ್ಯೂಟ್ ರೂಪಿಸಿದ ಯೊಜನೆಗಾಗಿ, ಇನ್‍ಸ್ಟಿಟ್ಯೂಟ್ ರೂವಾರಿಗಳಾದ ಆಯುಷ್ಮಾನ್ ಮಲ್ಲಿಕಾರ್ಜುನ ಖರ್ಗೆಜಿಯವರಿಗೆ ಅಭಿನಂದನೆ ಹೇಳಬೇಕು. ಇದರಿಂದ ಈ ಭಾಗದ ಜನರಿಗೆ, ಓದುಗರಿಗೆ ಬುದ್ಧನ ಸಂದೇಶಗಳು ಮುಟ್ಟಿಸುವ ಕಾರ್ಯ ನಡೆಯುತ್ತಿರುವುದು ಸಂತಸ ತಂದಿದೆ ಎಂದರು. ಎರಡು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಡಾ. ಕೆ.ಪಿ. ರಾವ್ ಸರ್ಟಿಫಿಕೇಟ್‍ನ್ನು ಅವರು ನೀಡಿದರು. ಪಾಲಿ ಇಂಟರ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಗೌರವ ನಿರ್ದೇಶಕರಾದ ಪೆÇ್ರ. ಮಲ್ಲೇಪುರಂ ಜಿ. ವೆಂಕಟೇಶ ಅವರು ನಾಡಿನ ಹೆಸರಾಂತ ವಿದ್ವಾಂಸರಾದ ಡಾ. ಶರತ್‍ಶ್ಚಂದ್ರಸ್ವಾಮಿ, ಡಾ. ಕೆ.ಪಿ. ರಾವ್, ಡಾ. ಬಿ.ವಿ. ರಾಜಾರಾಂ ಮುಂತಾದವರಿಗೆ ಕೃತಜ್ಞತೆ ಹೇಳಿದರು. ಹಾಗೆಯೇ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ವಂದಿಸಿದರು.ಕಾರ್ಯಕ್ರಮದಲ್ಲಿ ಎರಡು ಪಾಲಿ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ನಗರದ ಬೌದ್ದ ಧಮ್ಮದ ಆಸಕ್ತರು ಪಾಲ್ಗೊಂಡಿದ್ದರು.