ಸರಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಹಕಾರ ಅಗತ್ಯ
ಕಲಬುರಗಿ,ಆ.29-ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಲನಿರ್ಂಗ್ ಲಿಂಕ್ಸ್ ಹಾಗೂ ಶಿಕ್ಷಣ ಇಲಾಖೆಯ ಮಧ್ಯೆ ಸಹಾಯ, ಸಹಕಾರ, ಸಮನ್ವಯತೆ ಅಗತ್ಯವಿದೆ ಎಂದು ಚಿತ್ತಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದರ್ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಶೋಕ್ ಲೇಲ್ಯಾಂಡ್ ಹಾಗೂ ಲನಿರ್ಂಗ್ ಲಿಂಕ್ಸ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ರೋಡ್ ಟು ಸ್ಕೂಲ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್‍ಎಲ್‍ಎಫ್ ರಾಜ್ಯ ನಿರ್ದೇಶಕ ಅನಿಲ ಕೊಡಂಬಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಚಿತ್ತಾಪುರ ತಾಲೂಕಿನ ಶೈಕ್ಷಣಿಕ ವಿಕಾಸಕ್ಕೆ ಕಳೆದ ಎರಡು ಮೂರು ವರ್ಷಗಳಿಂದ ಲನಿರ್ಂಗ್ ಲಿಂಕ್ಸ್ ಫೌಂಡೇಶನ್ ಬುನಾದಿ ಹಾಕಿದೆ. ಸಾಕ್ಷರತೆ ಗಣಿತ ಕಲಿಕೆಗಾಗಿ ಕೆಲಸ ಮಾಡುತ್ತಿದೆ. ಶೈಕ್ಷಣಿಕ ವರ್ಷ 24 25 ಕ್ಕೆ 242 ಸಂಪನ್ಮೂಲ ಶಿಕ್ಷಕರನ್ನ ಚಿತ್ತಾಪುರ, ಕಾಳಗಿ, ಶಹಾಬಾದ್ ತಾಲೂಕುಗಳಿಗೆ ನೀಡಿದೆ. ಶಿಕ್ಷಣ ಇಲಾಖೆಯೊಂದಿಗೆ ಹೆಜ್ಜೆ ಹಾಕುತ್ತಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ್ ಸೇಡಂ, ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷÀ ಶಿವಾನಂದ ನಾಲವರ, ಕಾರ್ಯದರ್ಶಿ ಅಬ್ದುಲ್ ಸಲೀಂ ಎನ್‍ಜಿಒ ಅಧ್ಯಕ್ಷÀ ಬಸವರಾಜ ಬಳುಂಡಗಿ, ಬಿಐಆರ್‍ಟಿ ಸಿಆರ್‍ಸಿ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಸಂಯೋಜಕÀ ಸಂತೋಷ್ ಕುಮಾರ್ ಪಾಸರ ಕಾರ್ಯಕ್ರಮ ನಿರೂಪಿಸಿದರು. ಕಾಳಗಿ ತಾಲೂಕು ಸಂಯೋಜಕ ತಿರುಪತಿ ಮನ್ನಾಪುರ ಸ್ವಾಗತಿಸಿದರು. ಕು. ರೇಷ್ಮಾ ಪ್ರಾರ್ಥಿಸಿದರು.