ಹದಗೆಟ್ಟ ನಾಲ್ವಾರ ರಸ್ತೆ: ವಾಹನ ಸಂಚಾರಕ್ಕೆ ಸಂಕಷ್ಟ
ವಾಡಿ,ಆ.29-ಚಿತ್ತಾಪುರ ತಾಲ್ಲೂಕಿನ ನಾಲ್ವಾರದಿಂದ ನಾಲ್ವಾರ ಸ್ಟೇಷನ್‍ವರೆಗೆಗಿನ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.
ಈ ರಸ್ತೆಯಲ್ಲಿ ವಾಹನಗಳ ಓಡಾಟ ದುಸ್ತರವಾದಂತಾಗಿದೆ. ರಸ್ತೆ ಮಧ್ಯೆದಲ್ಲಿಯೇ ತಗ್ಗು ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ.
ನಾಲ್ವಾರ ಸ್ಟೇಷನ್, ಐತಿಹಾಸಿಕ ಕೋರಿಸಿದ್ದೇಶ್ವರ ಮಠ, ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನ, ಬುದ್ಧ ವಿಹಾರಕ್ಕೆ ಹೋಗಲು ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಓಡಾಡುತ್ತವೆ. ರಸ್ತೆ ಹದಗೆಟ್ಟು, ರಸ್ತೆ ಮಧ್ಯದಲ್ಲಿ ತಗ್ಗುಗುಂಡಿಗಳು ಬಿದ್ದಿದ್ದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದ್ದಾರೆ. ಅಪಘಾತಗಳು ಸಂಭವಿಸಿ ಜೀವ ಹಾನಿಯಾದರೆ ಅದಕ್ಕೆ ಯಾರು ಹೊಣೆಯಾಗುತ್ತಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಿಸಿದವರು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕಿದೆ.
ಮಾಡಗಿ ಗ್ರಾಮದಿಂದ ನಾಲವಾರಕ್ಕೆ ಸಂಪರ್ಕ ಕಲ್ಪಿಸುವ ಪ್ಯಾಚ್ ರಸ್ತೆ ಕಾಮಗಾರಿ ಕಳ್ಳಪ್ಪೆ ಮಟ್ಟದ್ದಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ನಿಗಾವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದರ ಜೊತೆಗೆ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
-ಮಹ್ಮದ್ ಅಪಸರ ಸೆಟ್, ಕರವೇ ಹೋಬಳಿ ಅಧ್ಯಕ್ಷರು, ನಾಲವಾರ