ಬಾಲ್ಯವಿವಾಹ ತಡೆಯಲೆತ್ನಿಸಿದವನ ಮೇಲೆ ಪೋಕ್ಸೋ ಪ್ರಕರಣ:ಜಾಮೀನು ನೀಡಿದ ಹೈಕೋರ್ಟ್
ಕಲಬುರಗಿ,ಆ. 29: ಯುವಕನೋರ್ವ ಬಾಲಕಿಯ ಬಾಲ್ಯವಿವಾಹ ತಡೆಯಲು ಯತ್ನಿಸಿದಾಗ ಇದರಿಂದ ಕುಪಿತಗೊಂಡ ಅವಳ ಮನೆಯ ಜನ ಯುವಕನ ಮೇಲೆ ಪೆÇೀಕ್ಸೋ ಪ್ರಕರಣ ದಾಖಲಿಸಿದ ಬಗ್ಗೆ ಜಾಮೀನು ಅರ್ಜಿಯ ಪ್ರಕರಣವೊಂದರಲ್ಲಿ ಹೈಕೋರ್ಟ ನ್ಯಾಯಾಲಯದ ಗಮನ ತಂದಾಗ ಆತನಿಗೆ ಕರ್ನಾಟಕ ಹೈಕೋರ್ಟ ಕಲಬುರಗಿ ಪೀಠವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸಾಕ್ಷ್ಯದಲ್ಲಿ ಬಾಲಕಿಯ ಬಾಲ್ಯವಿವಾಹ ತಡೆದ ಬಗ್ಗೆ ಸ್ವತ: ಬಾಲಕಿ ಮತ್ತು ಅವಳ ಪಾಲಕರು, ಆರೋಪಿಪರ ವಕೀಲರು ಕ್ರಾಸ್ ಮಾಡುವಾಗ ಒಪ್ಪಿಕೊಂಡ ಈ ಸಂಗತಿಯ ಬಗ್ಗೆ ಆರೋಪಿ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಾಗ ನ್ಯಾಯಮೂರ್ತಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.
ಈ ರೀತಿ ಪೆÇೀಕ್ಸೊ ಪ್ರಕರಣ ದಾಖಲಾಗುತ್ತಿರುವುದು ಸಮಾಜವು ಗಮನಿಸಬೇಕಾದ ಸಂಗತಿ ಮತ್ತು ಶೋಚನೀಯ ಸಂಗತಿಯೂ ಆಗಿದೆ.
ಒಂದೆಡೆ ಬಾಲ್ಯವಿವಾಹ ತಡೆಯಬೇಕೆಂಬ ಜಾಗೃತಿ ಸರಕಾರ ಮಾಡಿಸುತ್ತಿದೆ ಇನ್ನೊಂದೆಡೆ ತಡೆಯಲು ಹೋದರೆ ಇಂತಹ ಪ್ರಕರಣ ಎದುರಿಸುವಂತಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.
ಆರೋಪಿಪರ ಹಿರಿಯ ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಅವರು ಹೈಕೋರ್ಟನಲ್ಲಿ ಆರೋಪಿತನ ಪರ ವಕಾಲತ್ತುವಹಿಸಿ ವಾದ ಮಂಡಿಸಿ ಇಂತಹ ಸಂದರ್ಭದಲ್ಲಿ ಆರೋಪಿಗೆ ಜಾಮೀನು ನೀಡಿ ನ್ಯಾಯ ಮತ್ತು ಸಮತೆ ಕಾಪಾಡಬೇಕೆಂದು ನ್ಯಾಯಪೀಠಕ್ಕೆ ಪ್ರಾರ್ಥಿಸಿದರು. ನ್ಯಾಯಪೀಠವು ಆರೋಪಿಯ ಅರ್ಜಿಯನ್ನು ಪುರಸ್ಕರಿಸಿ ಜಾಮೀನು ಮಂಜೂರು ಮಾಡಿದೆ.ಈ ರೀತಿ ಸಮಾಜದಲ್ಲಿ ಬಾಲ್ಯವಿವಾಹ ತಡೆದವರ ಮೇಲೂ ಪ್ರಕರಣ ದಾಖಲಾಗುತ್ತವೆ ಎಂದಾದರೆ ಸಮಾಜ ಸೇವೆ ಮಾಡುವುದಾದರೂ ಹೇಗೆ ಎಂಬ ಪ್ರಶ್ನೆ ಯುವಕರಲ್ಲಿ ಕೇಳಿಬರುತ್ತಿದೆ.