ನಾರಾಯಣ ಜೋಶಿ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿದ ಪಾಲಿಕೆ ಆಯುಕ್ತ
ಕಲಬುರಗಿ,ಆ 29: ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ ಗ್ಯಾಲರಿಯಲ್ಲಿ 185ನೇ ವಿಶ್ವ ಛಾಯಾಚಿತ್ರ ದಿನಾಚರಣೆ ಅಂಗವಾಗಿ ಏರ್ಪಡಿದ್ದ ನಾರಾಯಣ ಎಂ. ಜೋಶಿ ಅವರ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನಕ್ಕೆ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ್ ಅವರು ಭೇಟಿ ನೀಡಿದರು.
ಕಲಬುರಗಿ ಜಿಲ್ಲೆಯ ಕೋಟೆ-ಕೊತ್ತಲ, ಆಧ್ಯಾತ್ಮಿಕ ಸಾಂಸ್ಕøತಿಕ ಪರಂಪರೆಗೆ ಪ್ರತೀಕವಾಗಿರುವ ಗುಡಿ-ಗುಂಡಾರ ದೇಗುಲ ದೇವಸ್ಥಾನಗಳು, ಸೂಫಿ, ದಾಸರ, ಶರಣರ, ಸಂತರ ಜೈನ ಬಸದಿ, ಗುರುದ್ವಾರ, ಬೌದ್ಧ ವಿಹಾರ, ಶರಣರ ಅನುಭವ ಮಂಟಪ, ಆಧ್ಯಾತ್ಮಿಕ ಪರಂಪರೆಯ ತಾಣಗಳ ಛಾಯಾಚಿತ್ರ ವೀಕ್ಷಣೆ ಮೂಲಕ ಪ್ರತಿಯೊಬ್ಬರ ಮನೋವಿಕಾಸಕ್ಕೆ ಹಾಗೂ ಸ್ಥಳೀಯ ಸ್ಥಳಗಳ ಅರಿವು ಮೂಡಿಸಲು ಸಾಧ್ಯವೆಂದು ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ್ ಅವರು ಹೇಳಿದರು. ಛಾಯಾಚಿತ್ರ ವೀಕ್ಷಿಸಿ, ಸ್ಮಾರಕಗಳ ಪ್ರದರ್ಶನ ಕುರಿತು ಶ್ಲಾಘನೀಯ ಕಾರ್ಯವೆಂದು ಅವರು ಹೇಳಿದರು. ಡಾ.ಬಿ. ಗುಲಶೆಟ್ಟಿ, ಛಾಯಾಚಿತ್ರಗಾರ ರಾಘವೇಂದ್ರ ಬುರ್ಲಿ, ಬಿ.ಎಮ್.ರಾವೂರ ಇತರರು ಉಪಸ್ಥಿತರಿದ್ದರು.
ಕಲಬುರಗಿ ನಗರದ ಸರಕಾರಿ ಶಿಕ್ಷಿಯರ ತರಬೇತಿ ಕೇಂದ್ರ ಟಿ.ಟ.ಐ ಪ್ರಶಿಕ್ಷಣಾರ್ಥಿ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಭೇಟಿಕೊಟ್ಟು, ಛಾಯಾಚಿತ್ರ ವೀಕ್ಷಿಸಿನಾರಾಯಣ ಎಮ್. ಜೋಶಿ ಅವರೊಂದಿಗೆ ಸಂವಾದ ನಡೆಸಿ ಮಾಹಿತಿ ಪಡೆದರು.
ಜಿಲ್ಲೆಯ ಎಲ್ಲಾ ಸ್ಮಾರಕಗಳ ಸಂರಕ್ಷಣೆ, ಸ್ವಚ್ಛತೆ ಕಾಪಾಡುವದು ನಮ್ಮ ಜವಾಬ್ದಾರಿ. ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆಗಳ ಓದು ಜೊತೆಗೆ ಛಾಯಾಚಿತ್ರಗಳು ನೋಡುವದು ರೂಢಿಸಿಕೊಳ್ಳಬೇಕುಎಂದು ಸರಕಾರಿ ಶಿಕ್ಷಕಿಯರ ತರಬೇತಿ ಕೇಂದ್ರ ಟಿ.ಟ.ಐ ನ ಉಪನ್ಯಾಸಕ ನೂಸ್ರತ ಮೈನೂದಿನ, ಗುರುಶಾಂತಯ್ಯ ಹೀರೆಮಠ, ಮಲ್ಕಮ್ಮ ರಾಣೆ, ಇಬ್ರಾಹಿಮ್ ಅವರು ಹೇಳಿದರು.
ಹಿರಿಯ ಪತ್ರಕರ್ತ ವಾಸುದೇವರಾವ ದೇಸಾಯಿ ಅವರು ಮಾತನಾಡಿದರು. ಛಾಯಾಚಿತ್ರಗಾರ ರಾಘವೇಂದ್ರ ಬುರ್ಲಿ ಅವರು ನಾರಾಯಣ ಎಂ ಜೋಶಿ ಅವರನ್ನು ಸನ್ಮಾನಿಸಿದರು. ಪತ್ರಿಕಾ ಛಾಯಾಚಿತ್ರಗಾರ ಆಜಾದ ತಾಜೊದ್ದಿನ್ ಅವರನ್ನು ಗೌರವಿಸಲಾಯಿತು.