ಹೈದರಾಬಾದ್‍ನಲ್ಲಿ ಪ್ರಿಯತಮೆಯನ್ನು ಕೊಂದ ಬೀದರ್ ಯುವಕ!
ಬೀದರ್:ಆ.29: ಲವ್ ಮಾಡುತ್ತಿದ್ದ ಹುಡುಗಿ ಬ್ರೇಕಪ್ ಹೇಳಿದ್ದಾಳೆ.ಆತನ ಕೆಲ ವರ್ತನೆಗಳಿಂದ ಬೇಸತ್ತು ಆಕೆ ದೂರ ಆಗಲು ನೋಡಿದ್ದಾಳೆ. ಇದರಿಂದ ಆಕ್ರೋಶಗೊಂಡ ಯುವಕ ಕತ್ತಿನಿಂದ ಚುಚ್ಚಿ ಚುಚ್ಚಿ ಆಕೆಯನ್ನು ಕೊಲೆ ಮಾಡಿದ್ದಾನೆ. ಹೈದರಾಬಾದ್‍ನಲ್ಲಿ ಈ ಕೃತ್ಯ ಎಸಗಲಾಗಿದೆ.
ಆರೋಪಿಯನ್ನು ಕರ್ನಾಟಕದ ಬೀದರ್ ಮೂಲದ ರಾಕೇಶ್ ಎಂದು ಗುರುತಿಸಲಾಗಿದೆ. ಪೆÇಲೀಸರು ಆರೋಪಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿಯನ್ನು ಕರ್ನಾಟಕದ ಬೀದರ್ ಮೂಲದ ರಾಕೇಶ್ ಎಂದು ಗುರುತಿಸಲಾಗಿದೆ. ಪೆÇಲೀಸರು ಆರೋಪಿಯನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಗಚ್ಚಿಬೌಲಿ ಪೆÇಲೀಸ್ ಸ್ಟೇಷನ್ ವ್ಯಾಪ್ತಿಯ ಗೋಪನ್‍ಪಲ್ಲಿ ತಾಂಡಾದಲ್ಲಿ ಈ ಕೃತ್ಯ ಎಸಗಲಾಗಿದ್ದು, 25 ವರ್ಷದ ಗ್ರೀಷ್ಮಾ ಕೊಲೆಯಾದ ಯುವತಿ ಎಂದು ತಿಳಿದುಬಂದಿದೆ. ಆರೋಪಿ ರಾಕೇಶ್ ಕರ್ನಾಟಕದ ಬೀದರ್‍ನವನಾಗಿದ್ದು, ಹೈದರಾಬಾದ್‍ನ ಮಾದಾಪುರ್‍ನಲ್ಲಿರುವ ಒಂದು ಖಾಸಗಿ ಹಾಸ್ಟೆಲ್‍ನಲ್ಲಿದ್ದ. ನಲ್ಲಗಂಡ್ಲದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುವ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ವೆಸ್ಟ್ ಮೂಲದ ದೀಪನ ತಮಾಂಗ್ ಅಲಿಯಾಸ್ ಗ್ರೀಷ್ಮಾ ಎಂಬಾಕೆ ಈತನಿಗೆ ಪರಿಚಯವಾಗಿದ್ದಳು.. ಈ ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿತ್ತು. ದೀಪನಾ ತಮಾಂಗ್ ಅಲಯಾಸ್ ಗ್ರೀಷ್ಮಾ ತನ್ನ ಸ್ನೇಹಿತೆಯರ ಜೊತೆ ಗಚ್ಚಿಬೌಲಿಯ ಗೋಪನ್‍ಪಲ್ಲಿ ತಾಂಡಾದಲ್ಲಿ ವಾಸವಿದ್ದಳು. ಇಬ್ಬರೂ ಅಲ್ಲಿ ಇಲ್ಲಿ ಸುತ್ತಾಟ ಶುರು ಮಾಡಿದ್ದರು. ಈ ನಡುವೆ ರಾಕೇಶ್ ವರ್ತನೆಯಿಂದ ಬೇಸತ್ತು ಗ್ರೀಷ್ಮಾ ಬ್ರೇಕಪ್ ಹೇಳಿದ್ದಾಳೆ. ಆದ್ರೆ ರಾಕೇಶ್ ತನ್ನನ್ನೇ ಮದುವೆಯಾಗುವಂತೆ ಪಟ್ಟು ಹಿಡಿದಿದ್ದಾನೆ. ಇದಕ್ಕೆ ಗ್ರೀಷ್ಮಾ ಬಿಲ್‍ಕುಲ್ ಒಪ್ಪಿಲ್ಲ.
ಹೀಗಿರುವಾಗಲೇ ರಾತ್ರಿ ಗ್ರೀಷ್ಮಾ ಮನೆಗೆ ಹೋಗಿದ್ದಾನೆ.. ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ. ಇದಕ್ಕೆ ಒಲ್ಲೆ ಎಂದಾಗ ಆಕ್ರೋಶಗೊಂಡು ಅಲ್ಲೇ ಇದ್ದ ತರಕಾರಿ ಕಟ್ ಮಾಡುವ ಚಾಕು ತೆಗೆದುಕೊಂಡು ಆಕೆ ಮೇಲೆ ತೀವ್ರವಾಗಿ ದಾಳಿ ಮಾಡಿದ್ದಾನೆ. ಬಿಡಿಸಲು ಬಂದ ಮೂವರು ಸ್ನೇಹಿತೆಯರ ಮೇಲೂ ಆತ ದಾಳಿ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿದ್ದರಿಂದ ಗ್ರೀಷ್ಮಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮೂವರು ಯುವತಿಯರಿಗೆ ಗಾಯಗಳಾಗಿವೆ.
ಘಟನೆ ನಂತರ ಆರೋಪಿ ರಾಕೇಶ್ ಕೂಡಾ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬ ಏರಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಆದ್ರೆ ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.