ಮಹಿಳಾ ಸಬಲೀಕರಣದ ನೈಜ ಅನುಷ್ಠಾನದಿಂದ ಸಮಾನತೆ ಸಾಧ್ಯ
ಕಲಬುರಗಿ:ಆ.29:ಪ್ರಕೃತಿಯ ಸಮತೋಲನೆಗೆ ಗಂಡು ಮತ್ತು ಹೆಣ್ಣುಇಬ್ಬರೂಅಗತ್ಯವಾಗಿದೆ. ಹೆಣ್ಣಿನ ಬಗ್ಗೆ ಕೀಳರಿಮೆ ಬೇಡ. ಆಕೆಗೆ ದೊರೆಯಬೇಕಾದಎಲ್ಲಾ ಸೌಕರ್ಯಗಳನ್ನು ನೀಡಬೇಕು. ಮಹಿಳಾ ಸಬಲೀಕರಣ ಕೇವಲ ಭಾಷಣದಲ್ಲಿ ಉಳಿಯದೇ, ಅದರನೈಜ ಅನುಷ್ಠಾನದಿಂದ ಸಮಾನತೆ ಬರಲು ಸಾಧ್ಯವಾಗುತ್ತದೆಎಂದು ಮಹಿಳಾ ಚಿಂತಕಿಪ್ರಿಯಾಂಕಾ ವಾಲಿ ಅಭಿಪ್ರಾಯಪಟ್ಟರು.
ನಗರದ ನ್ಯೂರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದಈಚೆಗೆಏರ್ಪಡಿಸಲಾಗಿದ್ದ’ರಾಷ್ಟ್ರೀಯ ಮಹಿಳಾ ಸಮಾನತೆ ದಿನಾಚರಣೆ’ಯಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕಎಚ್.ಬಿ.ಪಾಟೀಲ ಮಾತನಾಡಿ, ಪ್ರತಿಯೊಬ್ಬ ಮಹಿಳೆಯುಶಿಕ್ಷಣವನ್ನು ಪಡೆಯಬೇಕು.ದೊರೆಯುವ ಸೌಕರ್ಯಗಳನ್ನು ಸದುಪಯೋಗಮಾಡಿಕೊಂಡು ಹೆಚ್ಚಿನ ಸಾಧನೆ ಮಾಡಬೇಕು. ಪ್ರಸ್ತುತವಾಗಿ ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದ್ದು ಹೆಮ್ಮೆಪಡುವ ಸಂಗತಿಯಾಗಿದೆ. ಮೌಢ್ಯತೆ, ಕಂದಾಚಾರ, ಅಂದಶೃದ್ಧೆಗಳಿಂದ ಹೊರಬಂದು, ವೈಚಾರಿಕತೆಮೈಗೂಡಿಸಿಕೊಳ್ಳಬೇಕು. ಮಹಿಳೆಯರು ಯಾವುದೇಕಾರಣಕ್ಕೂಆತ್ಮಹತ್ಯೆಗೆ ಶರಣಾಗದೆ, ಬಂದ ಸಮಸ್ಯೆಗಳನ್ನು ಧೈರ್ಯದಿಂದಎದುರಿಸುವಛಲಗಾರಿಕೆ ಬೆಳೆಸಿಕೊಳ್ಳಬೇಕು. ಮಹಿಳಾ ಸಮಾನತೆಗೆ ಬಸವಾದಿ ಶರಣರು, ಡಾ.ಬಾಬಾಸಾಹೇಬ್‍ಅಂಬೇಡ್ಕರ್‍ಅವರÀಕೊಡುಗೆ ಅವಿಸ್ಮರಣೀಯವಾಗಿದೆಎಂದರು.
ಕಾರ್ಯಕ್ರಮದಲ್ಲಿಸಂಸ್ಥೆಯಅಧ್ಯಕ್ಷ ಶಿವಕುಮಾರ ಮುತ್ತಾ, ಪ್ರಮುಖರಾದಶಿವಯೋಗೆಪ್ಪಾ ಎಸ್. ಬಿರಾದಾರ, ಲಕ್ಷ್ಮೀಇಂಡಿ,ಕಾಶಿಬಾಯಿ ಜಾಧವ, ಭೀಮಾಶಂಕರ, ಪ್ರಮೋದಕುಲಕರ್ಣಿ ಹಾಗೂ ಸಂಸ್ಥೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿದ್ದರು.