ಹಳೆಯ ನೆನಪುಗಳು ಸುಮಧುರ: ಮೇಘನಾ
ವಿಜಯಪುರ.ಆ.29:”ಹಳೆಯ ವಿದ್ಯಾರ್ಥಿಗಳು” ಎಂಬ ಪದವು ಶಾಲೆ,ಕಾಲೆಜಿನಿಂದ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಚಿತ್ರಿಸುತ್ತದೆ. ಈ ಸಂದರ್ಭವು ನಮಗೆ ಸುಂದರವಾದ ಮತ್ತು ಭಾವುಕತೆಯಿಂದ ಕೂಡಿದ ಎಷ್ಟೋ ಹಳೆಯ ನೆನಪುಗಳನ್ನು ಮೆಲಕು ಹಾಕುವ ಸುವರ್ಣ ಅವಕಾಶವನ್ನು ಒದಗಿಸುತ್ತವೆ ಎಂದು ತೆಲಸಂಗ ಕೆ. ಎಚ್. ಪಿ. ಎಸ್ ಸರ್ಕಾರಿ ಶಾಲೆ ಇಂಗ್ಲೀಷ್ ಶಿಕ್ಷಕಿ ಕು. ಮೆಘನಾ ಗುಡದಿನ್ನಿ ಅವರು ಹೇಳಿದರು.
ನಗರದ ಪ್ರತಿಷ್ಠಿತ ಬಿ.ಎ ಲ್.ಡಿ.ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಮಾಹಾವಿದ್ಯಾಲಯದಲ್ಲಿ ನಡೆದ ” ಹಳೆ ವಿದ್ಯಾರ್ಥಿಗಳ ಒಕ್ಕೂಟ ಸಭೆ ( ಂಟಿಟಿuಚಿಟ ಂಟumiಟಿi ಒeeಣ) ಯಲ್ಲಿ ಮಾತನಾಡಿ, ಕಾಲೇಜಿನಲ್ಲಿ ಕಲಿಕೆಯ ರೀತಿ, ಪ್ರಾಧ್ಯಾಪಕರ ಪ್ರೋತ್ಸಾಹದ ಕುರಿತು ತಮ್ಮ ನೆನಪುಗಳನ್ನು ಹಂಚಿಕೊಂಡು ಪ್ರಸ್ತುತ ವಿದ್ಯಾರ್ಥಿಗಳಿಗೆ ಸಾಧನೆಯ ಕರಿತು ಹೇಳಿದರು.
ಇನ್ನೋರ್ವ ವಿದ್ಯಾರ್ಥಿನಿ ಬಂಧನ ಬ್ಯಾಂಕ್‍ನ ರಿಲೇಶನ್‍ಶಿಪ್ ಮ್ಯಾನೇಜರ್ ಸಾವಿತ್ರಿ ಹಾದಿಮನಿ ಮಾತನಾಡಿ, ಶಿಕ್ಷಣ ಹಾದಿಯನ್ನು ಮತ್ತು ವಿಶ್ವವಿದ್ಯಾಲಾಯದಿಂದ ಬಂಗಾರದ ಪದಕವನ್ನು ಪಡೆದ ಸಂತಸವನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಛಲ ಮತ್ತು ಆತ್ಮವಿಶ್ವಾಸ ಇದ್ದರೆ ಸಾಧನೆ ಕಟ್ಟಿಟ್ಟ ಬುತ್ತಿ ಎಂದು ಹೆಳಿದರು.
ಅಧ್ಯಷ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ. ವಾಯ್. ತಮ್ಮಣ್ಣ ಅವರು ಆಗಮಿಸಿರುವ ಎಲ್ಲಾ ಹಳೆಯ ವಿದ್ಯಾರ್ಥಿಗಳ ಸಾಧನೆಯನ್ನು ಕುರಿತು ಸಂತಸ ವ್ಯಕ್ತಪಡಿಸಿ, ಭವಿಷ್ಯದಲ್ಲಿ ಇನ್ನು ಹೆಚ್ಚಿನ ಸಾಧನೆಗಳು ನಿಮ್ಮದಾಗಲಿ ಎಂದು ಹಾರೈಸಿದರು, ಈ ರೀತಿಯಾದ ಒಕ್ಕೂಟ ಮತ್ತು ಸಭೆಗಳು ಹಳೆಯ ವಿದ್ಯಾರ್ಥಿಗಳ ಪರಿಚಯ, ಸಾಧನೆಗಳನ್ನು ತಿಳಿಸುತ್ತದೆ ಮತ್ತು ಸುಮಧುರ ಬಾಂಧವ್ಯ ಬೆಳೆದು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ಐ.ಕ್ಯೂ.ಎ.ಸಿ ಸಂಯೋಜನಾಧಿಕಾರಿ ವಿ.ಎಸ್ ನಂದೇಶ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೆÇ್ರ. ರಾಧಾ ರೆಡ್ಡಿ ಮತ್ತು ಪೆÇ್ರ. ನಿಕಿತಾ ನಿರೂಪಿಸಿ ಸ್ವಾಗತಿಸಿದರು. ಕು. ಶೃತಿ ಪ್ರಾರ್ಥಿಸಿದರು. ಂಟumiಟಿi ಮುಖ್ಯಸ್ಥ ಪೆÇ್ರ. ಪೂಜಾ ಹಿರೇಮಠ ವಂದಿಸಿದರು. ಡಾ. ಆರ್.ಜಿ ಕಮತರ, ಬೋಧಕರು, ಬೋಧಕೇತರ ಸಿಬ್ಬಂದಿಯವರು, ಹಳೆಯ ಮತ್ತು ಪ್ರಸ್ತುತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.