ಕ್ವಿಜ್ ಮತ್ತು ನಾಥ ಸ್ಪರ್ಧೆಯಲ್ಲಿ ಮಕ್ಕಳ ಉತ್ತಮ ಸಾಧನೆ
ತಾಳಿಕೋಟೆ:ಆ.29: ಪಟ್ಟಣದ ರಿಲಾಯನ್ಸ್ ಎಜ್ಯುಕೇಶನ್ ಸೋಸಾಯಿಟಿ ಅಡಿಯಲ್ಲಿ ನಡೆಯುತ್ತಿರುವ ರಿಲಾಯನ್ಸ್ ಉರ್ದು ಪ್ರೌಢಶಾಲಾ ಮಕ್ಕಳು ಮುದ್ದೇಬಿಹಾಳ ತಾಲೂಕ ಮಟ್ಟದ ಕ್ವಿಜ್ ಮತ್ತು ನಾಥ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಹ್ಮದೀಯಾ ನಾಥ ಕಮೀಟಿ ಹಾಗೂ ಲಿಮ್ರಾ ಸೋಸೈಯಲ್ ವೆಲಫೇರ್ ಅಸೋಸಿಯೇಶನ್ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ವಿಜ್ ಸ್ಪರ್ಧೆಯಲ್ಲಿ ಕುಮಾರಿ ನಸರೀನ ದಾವಲಸಾಬ ಜಕಾತಿ ಮತ್ತು ಕುಮಾರಿ ಆಯಿಶಾ ಮಹಮ್ಮದಮುಸ್ತಫಾ ಬೇಪಾರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಎ.ಎಸ್.ನಮಾಜಕಟ್ಟಿ, ಕಾರ್ಯದರ್ಶಿಗಳಾದ ಮೊಹ್ಮದಇಸಾಖ ನಮಾಜಕಟ್ಟಿ, ಪ್ರೌಢಶಾಲೆಯ ಮುಖ್ಯ ಗುರುಮಾತೆಯಾದ ಶ್ರೀಮತಿ.ಬಿ.ಎ.ವಠಾರ ಹಾಗೂ ಸಿಬ್ಬಂಧಿ ವರ್ಗದವರು ವಿಧ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.