ಸೈದಾಪುರ:ಎಸ್.ಬಿಎಂ ಶಾಲಾ ಮಕ್ಕಳು ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ
ಸೈದಾಪುರ:ಆ.29:ಪಟ್ಟಣದ ಎಸ್.ಬಿ.ಎಂ ಶಾಲಾ ಮಕ್ಕಳು ಬೆಂಗಳೂರು ಏಷೀಯನ ಇಂಟರ ನ್ಯಾಷನಲ್ ಇಂಡಿಯ ವತಿಯಿಂದ 17 ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಬಾಲಾಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಕಾರ್ತಿಕ, ಮಹೇಶ, ವಿಶ್ವನಾಥ, ಪರಶುರಾಮ, ಸಾಜೀದ ಅಲಂ, ಮದನ, ಶರಣಬಸವ, ಸಂಕೇತ, ಭೀರಪ್ಪ, ವಿರೇಶ, ಸಂಜಯ, ಸಂಪತ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯವರು, ಶಾಲಾ ಮುಖ್ಯಗುರುಗಳು, ಸಿಬ್ಬಂದಿ ವರ್ಗ ಸೇರಿದಂತೆ ಇತರರು ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.