ಸುಧಾ ಕ್ರಾಸ್  ರೈಲ್ವೇ ಗೇಟ್ ಸಧ್ಯದಲ್ಲೇ ಬಂದ್
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ನಗರದ ಸುಧಾಕ್ರಾಸ್ ರೈಲ್ವೇ ಗೇಟ್ ಸಧ್ಯದಲ್ಲೆ ಬಂದ್ ಮಾಡಲಿದೆಯಂತೆ. ಇಲ್ಲಿ ರೈಲ್ವೇ ಮೇಲು ಸೇತುವೆ ನಿರ್ಮಾಣದ ಕಾಮಗಾರಿ ಆರಂಭವಾಗಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಿದೆಯಂತೆ.
ಟ್ರಾಫಿಕ್ ಗೆ ಸಮಸ್ಯೆ ಬರದಂತೆ ಸಧ್ಯ ಈ ರಸ್ತೆಯಲ್ಲಿ ಮರಗಳನ್ನು ಕಡಿದು. ರಸ್ತೆಯ ಎರೆಡು ಬದಿಯಲ್ಲಿ ಚರಂಡಿ ನಿರ್ಮಿಸುವ ಕಾರ್ಯ ನಡೆದಿದೆ.  ಇದಕ್ಕಾಗಿ  ಸೇಂಟ್ ಫಿಲೋಮಿನಾ ಶಾಲೆಯ ಕಾಂಪೌಂಡ್ ನಲ್ಲಿ 30 ಅಡಿ ವಿಸ್ತೀರ್ಣವನ್ನು ತೆಗೆದುಕೊಂಡು ಚರಂಡಿ ನಿರ್ಮಿಸುವ ಕಾರ್ಯ ನಡೆದಿದೆ.
ಎನ್.ಸಿ.ಸಿ.ಕಚೇರಿ, ಗಾಂಧಿ ಪ್ರತಿಮೆ ಬಳಿಯಿಂದ ಸೇಂಟ್ ಫಿಲೋಮಿನಾ ಶಾಲೆಯ ಆವರಣದಲ್ಲಿ ಈ ಮೇಲು ಸೇತುವೆ ಮತ್ತು ಸರ್ವೀಸ್ ರಸ್ತೆ ಬರಲಿದೆಯಂತೆ.
ಮತ್ತೊಂದು ಬದಿಯಲ್ಲಿ  ಉದ್ಯಮಿ ಮೋದಿ ಮತ್ತು ಮಾಜಿ ಶಾಸಕರ ಆಸ್ತಿ ಇರುವುದರಿಂದ ಶಾಲೆಯ ಮೈದಾನವನ್ನು ಒತ್ತುವರಿ ಮಾಡಲಾಗಿದೆ ಎನ್ನಲಾಗುತ್ತಿದೆ.