ಸಿದ್ದರಾಮಯ್ಯನವರನ್ನು ಬೆಂಬಲಿಸಿಡಿಎಸ್ ಎಸ್ ನಿಂದ ಬೃಹತ್ ಮೆರವಣಿಗೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ,29-  ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಡಿ.ಜಿ‌.ಸಾಗರ್ ಬಣದ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ನೇತೃತ್ವದಲ್ಲಿ ಇಂದು ನಗರದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಮತ್ತು ಮುಡಾ ಹಗರಣವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ಜನತಂತ್ರ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಬಿಜೆಪಿ ಮತ್ತು ಜೆಡಿಎಸ್ ನಡೆಯನ್ನು ಖಂಡಿಸಿ.ಬೃಹತ್ ಪ್ರತಿಭಟನೆ ನಡೆಸಲಾಯ್ತು.
 ನಗರದ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಕಚೇರಿಯಿಂದ  ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಗಡಗಿ ಚೆನ್ನಪ್ಪ ಸರ್ಕಲ್ ಮೂಲಕ ಡಿಸಿ ಕಚೇರಿಗೆ ಬಂದು ಜಿಲ್ಲಾಡಳಿತಕ್ಕೆ  ಮನವಿ  ಸಲ್ಲಿಸಿತು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾನಯ್ಯ ಅವರು. ಮುಡಾ ಹಗರಣಕ್ಕೆ ಸಂಭಂಧಿಸಿ ರಾಜ್ಯಪಾಲರು ನೀಡಿದ್ದ ಶೋಕಾಸ್‌ ನೋಟಿಸ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಉತ್ತರಿಸಿದ್ದಾರೆ. ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರವೇ ಇಲ್ಲ. ಜನರಿಂದ ಆಯ್ಕೆಯಾಗದ ರಾಜ್ಯಪಾಲರು ಜನಾದೇಶ ಪಡೆದ ಮುಖ್ಯಮಂತ್ರಿ ವಿರುದ್ಧ  ಸೂಕ್ತವಾಗಿ ಪರಿಶೀಲನೆ ಮಾಡದೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದು ಸರಿಯಲ್ಲವೆಂದರು.
ಬಿಜೆಪಿ ನೇತೃತ್ವದ ಎನ್.ಡಿ.ಎ. ಕೇಂದ್ರ ಸರ್ಕಾರ ಜನರಿಂದ ಆಯ್ಕೆಗೊಂಡ  ಬಿಜೆಪಿಯೇತರ ಸರ್ಕಾರಗಳನ್ನು ವಾಮಮಾರ್ಗದಿಂದ ಪತನಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆ ಇದು ಖಂಡನೀಯವೆಂದರು.
ಜನಪರ  ಮುಖ್ಯ ಮಂತ್ರಿಗಳಾಗಿ  ಉತ್ತಮ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ.  ಈ   ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.‌
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಡಾ.ಗಾದಿಲಿಂಗನಗೌಡ, ಹುಮಾಯೂನ್‌ ಖಾನ್, ಎರುಕಲಸ್ವಾಮಿ, ಸಿ.ನರಸಪ್ಪ, ವಿಜಯಕುಮಾರ್ ಸಂಗನಕಲ್ಲು, ಶಿವಶಂಕರ್, ಶ್ರೀನಿವಾಸ್ ಮೂರ್ತಿ, ದುರುಗಪ್ಪ,  ಸಂಘಟನೆಯ  ಜಿಲ್ಲಾ ಸಮಿತಿಯ ಸಂಚಾಲಕ ಹೆಚ್.ಬಿ.ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಹೆಚ್.ದೇವದಾಸ್, ಹೆಚ್.ಅಂಜಿನೇಯ, ಕೊಳಗಲ್ ಮಲ್ಲಯ್ಯ ನರಸಪ್ಪ, ಮಲ್ಲಿಕಾರ್ಜುನ, ಮಹೇಶ್ ಇಂದಿರಾ ನಗರ, ಹೆಚ್. ನಾಗೇಂದ್ರಪ್ಪ ದೀಪಾ ಪ್ರಿಂಟರ್ಸ್ ಬಿಸಲಹಳ್ಳಿ ರಮೇಶ್, ಹೆಚ್. ಮಲ್ಲಪ್ಪ, ಹೆಚ್. ಶಂಕರ್, ಆರ್.ಎಮ್. ರಾಮಯ್ಯ ಕಂಪ್ಲಿ, ಜಗದೀಶ್ ಮೆಟ್ರಿ, ಕುಮಾರ್ ಮೆಟ್ರಿ, ಮಾರೆಪ್ಪ, ಎಮ್. ರಮೇಶ್ ಇಂದಿರಾ ನಗರ, ಹಲಕುಂದಿ ಎರಿಸ್ವಾಮಿ, ಮಹೇಶ್ ಬತ್ರಿ, ಹನುಮಂತ ಎತ್ತಿನಬೂದಿಹಾಳ್‌, ಟಿ.ಎಮ್. ಎರಿಸ್ವಾಮಿ, ಹೆಚ್.ಕೆ. ತಿರುಮಲ ಎರಗುಡಿ, ಶಿವು ಅಸುಂಡಿ, ಗಂಗಾಧರ ವೇಣಿವೀರಾಪುರ, ಹನುಮಂತ ಕುಡುತಿನಿ, ಭೀಮ ಶಂಕರ್, ಪರಶುರಾಮ್ ಸಿದ್ದಾರ್ಥ್ ನಗರ, ಸಿ. ಗಂಗಾಧರ ಚೆಳ್ಳಗುರ್ಕಿ, ವಿಜಯ್, ಜಾನ್ ಟೈಲ‌ರ್, ಹೊನ್ನೂರಸ್ವಾಮಿ ಬೀಸಲಹಳ್ಳಿ ಮುಂತಾದವರು ಪಾಲ್ಗೊಂಡಿದ್ದರು.