ವಿಜಯನಗರ ಜಿಲ್ಲೆಯಲ್ಲಿ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಾಧಾನಕರ.
ಸಂಜೆವಾಣಿ ವಾರ್ತೆ
ಹೊಸಪೇಟೆ ಆ29: ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರದ  5 ಗ್ಯಾರಂಟಿ ಮಹಿಳೆ, ಯುವ ಜನಾಂಗ  ಮುಖ್ಯವಾಗಿ  ಬಡವರು  ಪ್ರಯೋಜನ ಪಡೆದು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಎಸ್.ಆರ್.ಮೆಹರೋಜ್ ಖಾನ್ ತಿಳಿಸಿದ್ದರು.
ಬುಧವಾರ ವಿಜಯನಗರ ಜಿಲ್ಲಾಡಳಿತ ಭವನದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪರಿಶೀಲನೆ ನಡೆಸಿದ ಅವರು ಮಾತನಾಡಿ ಗೃಹ ಲಕ್ಷ್ಮಿ ಯೋಜನೆಯಡಿ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 2,99,126 ಪಡಿತರ ಚೀಟಿಗಳನ್ನು ಹೊಂದಿರುವ ಫಲಾನುಭವಿಗಳಿದ್ದು, 2,85,687 ಮನೆ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯಾಗಿದ್ದು, ಈ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು ರೂ.2000  ರಂತೆ ಆಗಸ್ಟ್ – 2023 ರಿಂದ ಜೂನ್-2024 ವರೆಗೆ ಡಿ.ಬಿ.ಟಿ ಮೂಲಕ ಒಟ್ಟು  582,58,80,000 ರೂಪಾಯಿಗಳನ್ನು ಪಾವತಿಸಲಾಗಿರುತ್ತದೆ.
ಗೃಹ ಜ್ಯೋತಿಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 2,91,915 ಫಲಾನುಭವಿಗಳಿದ್ದು, ಇದರಲ್ಲಿ 1,84,515 ಫಲಾನುಭವಿಗಳು ಶೂನ್ಯ ಬಿಲ್ಲುಗಳನ್ನು ಹೊಂದಿದ್ದು ಉಳಿದ 94,313 ಫಲಾನುಭವಿಗಳು ಭಾಗಶಃ ಬಿಲ್ಲನ್ನು ಪಡೆದಿರುತ್ತಾರೆ. ಜುಲೈ-2024ರ ಅಂತ್ಯಕ್ಕೆ ಡಿ.ಬಿ.ಟಿ ಮೂಲಕ ಒಟ್ಟು 133.59 ಕೋಟಿ ಈ ಯೋಜನೆಗೆ ಪಾವತಿಸಲಾಗಿರುತ್ತದೆ ಎಂದರು. ಯುವನಿಧಿ ಯೋಜನೆಯಡಿ ಜನವರಿ-24 ರಿಂದ ಜಾರಿಯಾಗಿದು ಜುಲೈ-24ರ ವರೆಗೆ ಒಟ್ಟು 6704 ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಹಣ ಪಾವತಿಸಲಾಗಿರುತ್ತದೆ. 6643 ಪದವಿದರರಿಗೆ ತಿಂಗಳಿಗೆ  3000 ರೂಪಾಯಿಗಳ ಹಾಗೂ 61 ಡಿಪ್ಲೋಮ ವಿದ್ಯಾರ್ಥಿಗಳಿಗೆ ಮಾಸಿಕ1500 ರೂಪಾಯಿಯಂತೆ  ಒಟ್ಟು 6074 ವಿದ್ಯಾರ್ಥಿಗಳಿಗೆ ಒಟ್ಟು  2,00,20,500 ರೂಪಾಯಿಗಳನ್ನು ಪಾವತಿಸಲಾಗಿರುತ್ತದೆ ಎಂದು
ಅನ್ನಭಾಗ್ಯ ಯೋಜನೆಯಡಿ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 3,32,538 ಪಡಿತರ ಚೀಟಿಗಳಿದ್ದು, ಇದರಲ್ಲಿ 2,99,126 ಫಲಾನುಭವಿಗಳು ನೊಂದಣಿಯಾಗಿದ್ದು, ಪ್ರತಿ  ತಿಂಗಳು170 ರಂತೆ ಜುಲೈ-2023 ರಿಂದ ಜೂನ್-2024 ರ ವರೆಗೆ ಒಟ್ಟು 1,87,72,16,500 ರೂಪಾಯಿ ವೆಚ್ಚ ಭರಿಸಲಾಗಿರುತ್ತದೆ ಎಂದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 40176372 ಮಹಿಳಾ ಪ್ರಯಾಣಿಕರು ಹಾಗೂ 1578160 ಹೆಣ್ಣು ಮಕ್ಕಳು ಒಟ್ಟು 41754532 ಸಂಖ್ಯೆಯ ಪ್ರಯಾಣಿಕರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಿದ್ದು  ಇದರಿಂದ ಸಾರಿಗೆ ಇಲಾಖೆಯ ಆದಾಯ  153,95,62,164 ರೂಪಾಯಿಗಳು ಆಗಿದೆ ಎಂದರು.
ಸಭೆಯಲ್ಲಿ ಕುರಿ ಶಿವಮೂರ್ತಿ, ಬಡಾವಲಿ, ಚಂದ್ರಪ್ಲ ಹಯಲಿಕಟ್ಟಿ, ಸೊನ್ನದ ಗುರುಬಸವರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.