ಪೌರಾಯುಕ್ತರನ್ನು ಬೆಂಬಲಿಸಿ ನೌಕರರಿಂದ  ಸದಸ್ಯರ ವಿರುದ್ಧ ಮೌನ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಆ, 29- ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೊರದಿದ್ದರೂ ನಗರಸಭೆಯ ಪೌರಾಯುಕ್ತರನ್ನು ಗುರಿಯಾಗಿಸಿ ನಗರಸಭಾ ಸದಸ್ಯರು ತೋರಿದ ಪ್ರತಿಭಟನೆ ಖಂಡಿಸಿ ಬುಧವಾರ ನೌಕರರು ಪ್ರತಿಭಟಿಸಿದ ಘಟನೆ ಜರುಗಿದೆ.
ಹೊಸಪೇಟೆ ನಗರಸಭೆಯ ಮುಂದೆ ಪಕ್ಷಾತೀತವಾಗಿ ಪ್ರತಿಭಟಿಸಿ ನಗರಸಭಾ ಸದಸ್ಯರ  ನಿರ್ಲಕ್ಷ್ಯ ತೊರುವ ಪೌರಾಯುಕ್ತರ ಕಾರ್ಯವೈಖರಿ ಎಂದು ಅಧಿಕಾರಿವರ್ಗವನ್ನು ಗುರಿಯಾಗಿಸಿ ನೌಕರರ ಮೇಲೆ ಪ್ರಮುಖವಾಗಿ ಮಹಿಳಾ ಸದಸ್ಯರು ಅವರ ಪತಿ ಹಾಗೂ ಸದಸ್ಯರ ಆಪ್ತರು ದೌರ್ಜನ್ಯ ದಿಂದ ಕಾನೂನುಬಾಹಿರಾವಾಗಿ ಕಾರ್ಯನಿರ್ವಹಿಸಲು ಒತ್ತಾಯಿಸುತ್ತಾರೆ ಎಂದು ಮನವಿಯಲ್ಲಿ ಪ್ರತ್ಯಾರೋಪಿಸಿದರು.
ಮೌನ ಪ್ರತಿಭಟನೆಯ ನಂತರ ಪೌರ ಸೇವಾ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ ಮಾತನಾಡಿ ಸಿಬ್ಬಂದಿಯ ಕೊರತೆಯ ನಡುವೆಯೂ ಆಡಳಿತದ ಅಸಹಕಾರದ ಮಧ್ಯ ಕಾರ್ಯನಿರ್ವಹಿಸುವ ನಾವು ಕೆಲಸ ಕಳೆದುಕೊಳ್ಳುವ ಭಯದಲ್ಲಿ ಒತ್ತಡದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.
ನಿಜವಾಗಿಯೂ ಕೆಲಸಗಳಾಗಬೇಕಾದರೆ ನಮ್ಮೊಂದಿಗೆ ಸಮನ್ವಯತೆ ಸಾಧಿಸಿ ಸೇವೆ ನೀಡಲು ಸಹಕರಿಸಬೇಕೆ ಹೊರತು ಅನಗತ್ಯವಾಗಿ ದೂರುತ್ತಾ ಆರೋಪಿಸುತ್ತಾ, ಬಹಿರಂಗವಾಗಿ ಪ್ರತಿಭಟಿಸುವ ಮೂಲಕ ಗೊಂದಲದ ವಾತಾವರಣ ನಿರ್ಮಾಣ ಮಾಡಿ ನಮ್ಮ ಕಾರ್ಯನಿರ್ಹಣೆಗೆ ತೊಂದರೆ ಮಾಡುತ್ತಾರೆ,
ದಲ್ಲಾಳಿಗಳನ್ನು ಹೊರಗಿಟ್ಟು ನಾಗರಿಕರಿಗೆ ಕೆಲಸ ನಿರ್ವಹಿಸಲು ಮುಂದಾಗಿರುವುದೆ ನಮ್ಮ ತೊಂದರೆಯಾಗಿದ್ದು ಇದನ್ನು ಘಟನೆಯ ಪ್ತಯೋಜನ ಪಡೆದು ಪ್ರತಿಭಟಿಸಿದ್ದಾರೆ ಎಂದು ಅಬದ್ರತೆಯಲ್ಲಿ ಕಾರ್ಯನಿರ್ವಹಿಸುವಂತೆ ಮಾಡುತ್ತಾರೆ  ಜಿಲ್ಲಾಧಿಕಾರಿ ಗಳಿಗೆ ಮೌನ ಪ್ರತಿಭಟನೆಯೊಂದಿಗೆ  ಮನವಿ ಸಲ್ಲಿಸಿದರು.
ನಂತರ ಪೌರಾಯುಕ್ತ ಚಂದ್ರಪ್ಪ ಮಾತನಾಡಿ ಅಕ್ರಮಗಳಿಗೆ  ಸಹಕಾರ ನೀಡದ್ದು ಪ್ರತಿಭಟನೆಗೆ ಕಾರಣವಾಗಿದೆ ನಾವು ಪ್ರಮಾಣಿಕವಾಗಿ ನಾಗರಿಕ ಸೇವೆ ನೀಡಲು ಸದಾ ಸಿದ್ದ  ಸದಸ್ಯರ ಸಹಕಾರಬೇಕು ಎಂದರು.
ಅಭಿಯಂತರರಾದ ಆರತಿ, ಭಾರತಿ, ತೇಜಶ್ವಿನಿ ವಿರೂಪಾಕ್ಷಿ, ಹಿರೇಮಠ, ಸೇರಿದಂತೆ ಹಿರಿಯ ಅಧಿಕಾರಿಗಳು ಸಿಬ್ಬಂದಿ ಪೌರಕಾರ್ಮಿಕರು ಪಾಲ್ಗೊಂಡಿದ್ದರು.