ಹಬೋಹಳ್ಳಿ : ಪುರಸಭೆಯ ಅಧ್ಯಕ್ಷ,ಉಪಾಧ್ಯಕ್ಷ ಚುನಾವಣೆ ವಿಳಂಬ ಸದಸ್ಯರಲ್ಲಿ ತಳಮಳ
ಉಮಾಪತಿ ಶೆಟ್ಟರ್
ಹಗರಿಬೊಮ್ಮನಹಳ್ಳಿ. ಆ.29 ಪಟ್ಟಣದ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿ ಒಂದು ತಿಂಗಳಾಗುತ್ತಾ ಬಂದರು ಚುನಾವಣೆಯ ದಿನಾಂಕ  ವಿಳಂಬ ಮಾಡುತ್ತಿರುವುದಕ್ಕೆ ಸದಸ್ಯರಲ್ಲಿ ತಳಮಳ ಉಂಟಾಗಿದೆ.
ಒಟ್ಟು 23 ವಾರ್ಡ್ ಗಳಿಗೆ ಕಳೆದ 32 ತಿಂಗಳ ಹಿಂದೆ ಚುನಾವಣೆ ನಡೆದಾಗ 8ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ರೇಷ್ಮಾ  ಅವಿರೋಧವಾಗಿ ಆಯ್ಕೆಯಾದರು. ಉಳಿದ 22 ಕ್ಷೇತ್ರಗಳಲ್ಲಿ ಚುನಾವಣೆ ಜರಿಗಿತು. ಇದರಲ್ಲಿ 11 ಕಾಂಗ್ರೆಸ್ 11 ಬಿಜೆಪಿ ಸದಸ್ಯರಾಗಿ ಆಯ್ಕೆಯಾದರು. ಅವಿರೋಧ ಅಭ್ಯರ್ಥಿ ಸೇರಿ ಕಾಂಗ್ರೆಸ್ 12 ಸ್ಥಾನಗಳೊಂದಿಗೆ ಪುರಸಭೆಯ ಚುಕ್ಕಾಣಿ ಹಿಡಿಯಲು ದಾರಿ ಸುಗಮವಾಗಿತ್ತು. ಆದರೆ ಮೀಸಲಾತಿ ವಿಳಂಬದಿಂದ ಅಧ್ಯಕ್ಷ,ಉಪಾಧ್ಯಕ್ಷ ಕನಸು ಕಾಣುತ್ತಿದ್ದವರು. ವರ್ಷಗಟ್ಟಲೆ ಮರೀಚಿಕೆಯಾಯಿತು. ಸರ್ಕಾರ ಮತ್ತು ಮೀಸಲಾತಿ ಜಗ್ಗಾಟದಲ್ಲಿ ಅಧಿಕಾರ ಸಿಗದೇ ಸದಸ್ಯರು ಆಕ್ರೋಶ,ಜೊತೆಗೆ  ನಿರಾಸೆಗೊಂಡಿದ್ದರು. ಬಹು ತಿಂಗಳ ನಂತರ ಮೀಸಲಾತಿ ಪ್ರಕಟವಾಗಿದೆ.
ಆದರೆ ದಿನಾಂಕ ನಿಗದಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದು ಯಾಕೆ? ಎಂಬ ಪ್ರಶ್ನೆ ಸದಸ್ಯರು ಒಳಗೊಂಡಂತೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ. ಈಗಾಗಲೇ ಜಿಲ್ಲೆಯ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಆಯ್ಕೆಯ ಪ್ರಕ್ರಿಯೆ ಮುಗಿದಿದೆ. ಆದರೆ ನಮ್ಮ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ದಿನಾಂಕ ಯಾವಾಗ ಎಂದು ಕೇಳುತ್ತಿದ್ದಾರೆ. ವಿಳಂಬಕ್ಕೆ ಕಾರಣ ಕಾಂಗ್ರೆಸ್ 12 ಸದಸ್ಯರನ್ನು ಹೊಂದಿದ್ದರೆ. ಬಿಜೆಪಿ 11 ಸದಸ್ಯರನ್ನು ಹೊಂದಿದೆ. ಶಾಸಕರಿಗೆ ಇಲ್ಲಿ ಮತದಾನದ ಹಕ್ಕು ಇರುತ್ತದೆ. ಅವರು ಬಿಜೆಪಿ ಬೆಂಬಲಿಸಿದರೆ.
ಸಮಬಲ ಆಗುತ್ತದೆ. ಆಗ ಕಾಂಗ್ರೆಸ್ ಪಕ್ಷ ಬೆಂಬಲಿಸಲು ಸಂಸದರ ಮತ ಬೇಕಾಗುತ್ತದೆ. ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಸಂಸದ ಈ ತುಕಾರಾಂ ಇವರು ದಿನಾಂಕ ನಿಗದಿ ಮಾಡುವವರಿಗೆ ಪುರಸಭೆಯ ಚುನಾವಣೆಯ ದಿನಾಂಕ ನಿಗದಿಯಾಗುವುದಿಲ್ಲ.ಅದಕ್ಕಾಗಿ ಚುನಾವಣೆ ದಿನಾಂಕ ನಿಗದಿಪಡಿಸುತ್ತಿಲ್ಲ ಎಂದು ಕೇಳಿ ಬರುತ್ತದೆ. ಅಧ್ಯಕ್ಷ ಸ್ಥಾನ ಓಬಿಸಿ 2 ಎ ಗೆ ಮೀಸಲಾಗಿದ್ದು. ಉಪಾಧ್ಯಕ್ಷ ಎಸ್ ಟಿ ಮಹಿಳೆ  ಮೀಸಲಾಗಿದೆ. ಎರಡು ಪಕ್ಷದಲ್ಲಿ  ಅಧ್ಯಕ್ಷ ಸ್ಥಾನಕ್ಕೆ ಹಲವರು ಆಕಾಂಕ್ಷಿಗಳಿದ್ದು. ಭಾರಿ ಪೈಪೋಟಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಎಂ.ಮರಿ ರಾಮಪ್ಪ, ತೆಲಗಿ ಇಸ್ಮಾಯಿಲ್, ಅಜೀಜ್ ಹುಲ್ಲಾ, ಹೆಸರು ಕೇಳಿ ಬರುತ್ತದೆ. ಬಿಜೆಪಿಯಿಂದ ಬಣಕಾರ್ ಸುರೇಶ್, ಬಿ. ಗಂಗಣ್ಣ, ನಾಗರಾಜ್ ಜನ್ನು ಹೆಸರು ಕೇಳಿ ಬರುತ್ತಿವೆ. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಇಬ್ಬರು ಬಿಟ್ಟರೆ ವಿರೋಧಿ ಪಾಳಯದಲ್ಲಿ ಯಾರು ಇರುವುದಿಲ್ಲ. ಅದರಿಂದ ಅಧಿಕಾರ ಹಂಚಿಕೆ ಮಾಡಿಕೊಳ್ಳಬಹುದು.  ಈ ಎಲ್ಲಾ  ಬೆಳವಣಿಗೆ ನಡೆಯಬೇಕೆಂದರೆ ಚುನಾವಣೆಯ ದಿನಾಂಕ ನಿಗದಿ ಯಾವಾಗ ಎಂಬುವುದು ಕಾದು ನೋಡೋಣ…