ಉದ್ದು ಬೆಳೆಯ ಕ್ಷೇತ್ರೋತ್ಸವ
ಕಲಬುರಗಿ:ಆ.29:ಕೃಷಿ ವಿಜ್ಞಾನ ಕೇಂದ್ರ ರದ್ದೇವಾಡ್ಗಿ ಮತ್ತು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಮಾಡಬುಳ ಇವರ ಸಹಭಾಗಿತ್ವದಲ್ಲಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಲ್ಕೂಡ ಗ್ರಾಮದಲ್ಲಿ ದಿನಾಂಕ 28-08-2024 ರಂದು ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿಯಲ್ಲಿ ರೈತರ ಹೊಲದಲ್ಲಿ ಉದ್ದು ಬೆಳೆಯಲ್ಲಿ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಶ್ರೀಮತಿ ಸುರೇಖಾ ಅಂಕಲಗಿ ಮಾತನಾಡಿ ಬಿತ್ತನೆ ಬೀಜ ವಿತರಣೆ ಮಾಡಿ, ಸುಧಾರಿತ ಬೇಸಾಯ ಕ್ರಮಗಳು, ಸಮಗ್ರ ಪೀಡೆ ಮತ್ತು ಪೋಷಕಾಂಶಗಳ ನಿರ್ವಹಣೆಯಿಂದ ಹೆಚ್ಚಿನ ಇಳುವರಿಯನ್ನು ಪಡೆದ ರೈತರಿಂದ ಇನ್ನುಳಿದ ರೈತರಿಗೆ ಸಮಗ್ರ ಮಾಹಿತಿ ಕೊಡಮಾಡಲಾಯಿತು. ಸಾಮಾನ್ಯವಾಗಿ ಈ ಭಾಗದಲ್ಲಿ ಎಕರೆಗೆ 2 ರಿಂದ 3 ಕ್ವಿಂಟಾಲ್ ಬರುತ್ತಿದ್ದು ರೈತರಾದ ಶ್ರೀ.ಶಿವಕುಮಾರ ದತ್ತೂರಗಿ ಅವರು 3 ಎಕರೆ 19 ಗುಂಟೆಯಲ್ಲಿ 18-20 ಕ್ವಿಂಟಾಲ್ ಉದ್ದು ಬೆಳೆಯನ್ನು ಪಡೆದು ಇನ್ನುಳಿದ ರೈತರಿಗೆ ಮಾದರಿಯಾಗಿರುತ್ತಾರೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ.ಮಲ್ಲಪ್ಪ (ಬೇಸಾಯಶಾಸ್ತ್ರ ವಿಜ್ಞಾನಿ)ರವರು ಮಾತನಾಡಿ ಸಮಗ್ರ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ರೈತರು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಕಾರ್ಯಕ್ರಮದಲಿ ್ಲಗ್ರಾಮದ ರೈತರು. ಬಿಟಿಎಮ್ ಭಾಗವಹಿಸಿದ್ದರು.