ಕಾರ್ಕಳ ಅತ್ಯಾಚಾರ ಪ್ರಕರಣ ಖಂಡಿಸಿ ಬೃಹತ್ ಪ್ರತಿಭಟನೆ
ಕಾಳಗಿ: ಆ.29:ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಯುವತಿಯೊಬ್ಬಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡುವಂತೆ ಭೋವಿ ಸಮಾಜದ ತಾಲೂಕಾಧ್ಯಕ್ಷ ಲಕ್ಷ್ಮಣ ಭೋವಿ ಆಗ್ರಹಿಸಿದರು.
ಪಟ್ಟಣದಲ್ಲಿ ಭೋವಿ ಸಮಾಜದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು, ಬುಧವಾರ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಆರೋಪಿ ಅಲ್ತಾಫ್ ಮತ್ತು ಆತನ ಸ್ನೇಹಿತರು ಯುವತಿಯನ್ನು ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದು ಖಂಡನೀಯ. ಅತ್ಯಾಚಾರ ಮಾಡಿದ ದುಷ್ಕರ್ಮಿಗಳನ್ನು ಗಲ್ಲಿಗೆ ಹಾಕಬೇಕು. ಇಲ್ಲವೆ ಎನ್‍ಕೌಂಟರ್ ಮಾಡಬೇಕು ಎಂದು ಒತ್ತಾಯಿಸಿದರು.
ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದವರಿಗೆ ರಾಜ್ಯ ಸರ್ಕಾರ ಕಠಿಣ ಶಿಕ್ಷೆ ವಿಧಿಸಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಂಡಾಗ ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಸಿಕ್ಕಂತೆ ಆಗುತ್ತದೆ. ಇಲ್ಲದೆ ಇದ್ದರೆ ರಾಜ್ಯದ ಮೂಲೆ ಮೂಲೆಯಲ್ಲಿ ಇಂತಹ ದುಷ್ಕರ್ಮಿಗಳು ತಲೆ ಎತ್ತುತ್ತಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಜಾಗೃತಿ ಸೇನೆ ತಾಲೂಕಾಧ್ಯಕ್ಷ ಶಂಕರ ಚೌಕ ಮಾತನಾಡಿ, ಕಾರ್ಕಳದಲ್ಲಿ ಯುವತಿಯನ್ನು ಅಪಹರಿಸಿ ಬಲವಂತವಾಗಿ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿರುವ ಘಟನೆ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಹಿಂದೂ ಯುವತಿಯರನ್ನು ಗುರಿಯಾಗಿಟ್ಟು???ಂಡು ಇಂತಹ ಕೃತ್ಯ ನಡೆಸುವ ವ್ಯವಸ್ಥಿತ ತಂಡವನ್ನು ಪತ್ತೆ ಹಚ್ಚಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ತಹಶಿಲ್ದಾರ ಘಮಾವತಿ ರಾಠೋಡ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಜಂಗಮ ಸಮಾಜ ತಾಲೂಕಾಧ್ಯಕ್ಷ ಶರಣು ಸಾಲಿಮಠ, ಹಿಂದೂ ಕಾರ್ಯಕರ್ತ ಭೀಮರಾಯ ಮಲಘಾಣ, ರಾಜಶೇಖರ ಗುಡದಾ ಮಾತನಾಡಿದರು. ರೈತ ಮುಖಂಡ ವೀರಣ್ಣ ಗಂಗಾಣಿ, ಬಲರಾಮ ವಲ್ಲ್ಯಾಪುರೆ, ಸುನೀಲ ರಾಜಾಪುರ, ಶ್ರೀಮಂತ ಮೆಳಕುಂದಿ, ಸೂರ್ಯಕಾಂತ ಕಟ್ಟಿಮನಿ, ಮಂಜುನಾಥ ಭೇರನ್, ನರಸಿಂಗ್ ಜಾಧವ್, ಶರಣು ಬೆಲೂರ, ರೇವಣಸಿದ್ದ ಕಲಶೆಟ್ಟಿ, ಬಸವರಾಜ ಹುಡದಳ್ಳಿ, ಅಮೃತರಾವ ಪಾಟೀಲ, ಶೇಖರ ಮಾನಶೆಟ್ಟಿ, ರಾಜಕುಮಾರ ಮಲಘಾಣ, ಸುಂದರ ಸಾಗರ, ಗೌಡಪ್ಪಗೌಡ ಕಲ್ಲಹಿಪ್ಪರಗಿ, ಸಂಗಮೇಶ ತಾಂಡೂರ, ಕಾರಣ ರಾಜಾಪುರ, ಈರಪ್ಪ ಪೂಜಾರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.