ಒಳ ಮೀಸಲಾತಿ ಜನಕ ಮಂದಾಕೃಷ್ಣಗೆ ಸನ್ಮಾನ
ಆಳಂದ:ಆ.29: ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟದ ಜನಕ ಎಂದೇ ಕರೆಯಲಾದ ಹೈದರಾಬಾದನ್ ಮಂದಾಕೃಷಣ ಮಾದಿಗರಿಗೆ ಡಾ. ಬಾಬು ಜಗಜೀವನರಾಮ ಅಭಿಮಾನಿ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಅಂಬರಾಯ ಚಲಗೇರಾ ಅವರ ನೇತೃತ್ವದಲ್ಲಿ ಸಮಾಜ ಮುಖಂಡರು ಅವರನ್ನು ಹೈದರಾಬಾದನಲ್ಲಿ ಸನ್ಮಾನಿಸಿದರು.
ಕಳೆದ ಶನಿವಾರ ಹೈದ್ರಾಬಾದ್ ನಗರಕ್ಕೆ ತೆರಳಿದ ಮುಖಂಡರು, ಮಂದಾಕೃಷ್ಣ ಮಾದಿಗ ಅವರನ್ನು ಡಾ. ಬಾಬು ಜಗಜೀವನರಾಮರ ಅಭಿಮಾನಿಗಳ ಸೈನ್ಯದ ಅಧ್ಯಕ್ಷ ಅಂಬಾರಾಯ ಎಮ್.ಎ. ಚೆಲಗೇರಿ ಮತ್ತು ಮಾಜಿ ಶಾಸಕ ವಿರಭದಪ್ಪ ಹಾಲಹರವಿ ಅಭಿನಂದಿಸಿದರು.
ಮಂದಾಕೃಷ್ಣ ಮಾದಿಗ ಅವರ 30 ವರ್ಷದ ಅವಿರತ ಹೋರಾಟದ ಫಲವಾಗಿ, ಸುಪ್ರಿಂ ಕೋರ್ಟ್‍ನ 7 ಮಂದಿ ನ್ಯಾಯಾಧೀಶರ ಪೀಠವು ಕಳೆದ ಅ.1ರಂದು ಪ್ರಮುಖ ತೀರ್ಪು ನೀಡಿದ್ದು, ಪ.ಜಾ. ಒಳ ಮೀಸಲಾತಿಯನ್ನು ಸಮಾಜದಲ್ಲಿ ಸೂಕ್ತವಾದ ಸಾಮಾಜಿಕ ನ್ಯಾಯವನ್ನು ಕಾಪಾಡುವಂತೆ, ಅವರ ಜನಸಂಖ್ಯೆ ಅನುಗುಣವಾಗಿ ಕಲ್ಪಿಸಲು ಮುಖ್ಯಮಂತ್ರಿಗಳಿಗೆ ಕೋರ್ಟ್ ಅಧಿಕಾರ ನೀಡಿದೆ ಎಂಬುದು ಚರ್ಚಿಸಿ ತಂಸಷ ಹಂಚಿಕೊಂಡರು.
ಮಂದಾಕೃಷ್ಣ ಮಾದಿಗ ಅವರು ಮಾದಿಗ ದಂಡೂರ ಮತ್ತು ಎಮ್.ಆರ್.ಪಿ. ಮುಖಂಡರಾಗಿ ಈ ಮಹತ್ವದ ಒಳಮೀಸಲಾತಿ ಹೋರಾಟಕ್ಕೆ ಶ್ರಮ ವಹಿಸಿದ ಕಾರಣ ಸನ್ಮಾನಿಸಿದ ಮುಖಂಡರು ಅವರ ಕಾರ್ಯವನ್ನು ಶ್ಲಾಘಿಸಿದರು.
ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳಲ್ಲಿ ಒಳಮೀಸಲಾತಿ ಜಾರಿಗೆ ಬಂದಂತೆ, ಕರ್ನಾಟಕದಲ್ಲಿಯೂ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಪ್ರಕಾರ, ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಕರ್ನಾಟಕದ ಮುಖ್ಯ ಮಂತ್ರಿ ಸಿದ್ದಾಮಯ್ಯ ಅವರಿಗೆ ಒತ್ತಾಯಿಸುವ ಕುರಿತು ಚರ್ಚಿಸಲಾಯಿತು.