ಸರಸಂಬಾ ಆರೋಗ್ಯ ಕೇಂದ್ರದ ಆಶ್ರಯದಲ್ಲಿ 26 ಜನರಿಗೆ ನೇತ್ರ ಚಿಕಿತ್ಸೆ
ಆಳಂದ:ಆ.29: ತಾಲೂಕಿನ ಸರಸಂಭದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಕಲಬುರಗಿಯ ದ್ರಷ್ಟಿ ಆಸ್ಪತ್ರೆ ನೇತೃತ್ವದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು.
ಈ ಶಿಬಿರದಲ್ಲಿ 110 ಜನರಿಗೆ ಕಣ್ಣಿನ ತಪಾಸಣೆ ಮಾಡಲಾಗಿದ್ದು, 26 ಜನರಿಗೆ ಶಸ್ತ್ರಚಿಕಿತ್ಸೆ ಅವಶ್ಯಕತೆಯಿದ್ದರಿಂದ ಅವರನ್ನು ದ್ರಷ್ಟಿ ಆಸ್ಪತ್ರೆ, ಕಲಬುರಗಿಗೆ ಯಲ್ಲಿ ನೇತೃ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಕೈಗೊಂಡ ರೋಗಿಗಳನ್ನು ಬುಧವಾರ ಸುರಕ್ಷಿತವಾಗಿ ಮನೆಗೆ ಕಳುಹಿಸಿಕೊಡಲಾಯಿತು.
ಈ ಶಿಬಿರವು ಗ್ರಾಮೀಣ ಪ್ರದೇಶದ ಬಡವರು, ವಿಶೇಷವಾಗಿ ಖಾಸಗಿ ಆಸ್ಪತ್ರೆಗಳ ಭಾರಿ ವೆಚ್ಚವನ್ನು ಭರಿಸಲು ಅಸಮರ್ಥರಾಗಿರುವ ಜನರಿಗೆ ಅನುಕೂಲವಾಗಿದೆ ಎಂದು ರೋಗಿಗಳು ಸಂತಷವ್ಯಕ್ತಪಡಿಸಿದರು. ನೇತೃ ತಪಾಸಣೆಯಲ್ಲಿ ಸರಸಂಭ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಶಿಬಿರದ ಪಾಲ್ಗೊಂಡು ತಪಾಸಣೆ ಕೈಗೊಂಡಿದ್ದರು.
ಪ್ರತಿ ತಿಂಗಳ 4ನೇ ಮಂಗಳವಾರ ಇಂಥ ಶಿಬಿರಗಳನ್ನು ಆಯೋಜಿಸಲಾಗುತ್ತz ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನೀರಿಕ್ಷಣಾಧಿಕಾರಿ ನಾಗನಾಥ್ ಕಾವಳೆ ಹೇಳಿದರು.
ಕಣ್ಣು ಮನುಷ್ಯನ ಅತ್ಯಂತ ಪ್ರಮುಖ ಅಂಗವಾಗಿರುವುದರಿಂದ, ಇಂತಹ ಶಿಬಿರಗಳಲ್ಲಿ ಭಾಗವಹಿಸುವುದು ಎಲ್ಲರ ಕರ್ತವ್ಯವಾಗಿದೆ. ಶಿಬಿರಕ್ಕೆ ಬರುವವರು ತಮ್ಮ ಆಧಾರ್ ಕಾರ್ಡ್ ಪ್ರತಿಯನ್ನು ತಪ್ಪದೇ ಕೊಂಡೊಯ್ಯುವುದರಿಂದ, ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯನ್ನು ಪಡೆಯಲು ಅವಕಾಶವಿರುತ್ತದೆ ಬಡವರು ಇಂಥ ಶಿಬಿರಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.