ಕೃಷ್ಣಜನ್ಮಾಷ್ಠಮಿ  ಭಕ್ತಿ, ಏಕತೆ – ಆಧ್ಯಾತ್ಮಿಕ ಜ್ಞಾನೋದಯ ಒಳಗೊಂಡಿದೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೯: ಗೋಣಿವಾಡದ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಸರ್ ಎಂ ವಿ ಎಲೈಟ್ ಒಲಂಪಿಯಾಡ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ವೀಣಾ  ನಮ್ಮ ಭಾರತೀಯ ಪರಂಪರೆ ಅರ್ಥಪೂರ್ಣವಾದ ಸಂಪ್ರದಾಯಗಳನ್ನು ಒಳಗೊಂಡಿದೆ. ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಭಾರತೀಯರು ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸುವ ಹಬ್ಬವಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಕೃಷ್ಣನ ರೂಪದಿ ಕಂಡು ಕೃಷ್ಣನ ವೇಷಗಳನ್ನು ಧರಿಸಿ ಸಂಭ್ರಮಿಸುತ್ತಾರೆ, ನಮ್ಮ ಶಾಲೆಯಲ್ಲೂ ವಿವಿಧ ರೂಪಗಳಲ್ಲಿ, ವೇಷದೊಂದಿಗೆ ಬಂದ ಮಕ್ಕಳಲ್ಲಿಯೇ ಕೃಷ್ಣನನ್ನು ಕಾಣುತ್ತೇವೆ, ಪ್ರತಿಷರ್ವ ಕೂಡ ಕೃಷ್ಣ ಜನ್ಮಾಷ್ಠಮಿ ಆಚರಿಸುವ ಮೂಲಕ ವಿಶೇಷತೆಯನ್ನ ಮೆರೆಯುತ್ತೇವೆ ಎಂದರು.ಈ ಹಬ್ಬ ಭಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ಒಳಗೊಂಡಿದೆ, ಅವತಾರ ಪುರುಷನ ಜನನದ ಹಬ್ಬದ ಹಿನ್ನೆಲೆಯಲ್ಲಿ  ನಮ್ಮ ದೇಶದ ಪ್ರತಿ ಮನೆಯಲ್ಲೂಸಂಭ್ರಮ ಕಳೆಕಟ್ಟಿದೆ ಎಂದರು. ಶಾಲೆಯ ಮಕ್ಕಳು ಕೃಷ್ಣ-ರಾಧೆಯರ ವೇಷಧರಿಸಿ, ನಂದಗೋಕುಲವನ್ನು ಸೃಷ್ಠಿಸಿದ್ದಾರೆ ಎಂದು ಮಕ್ಕಳಲ್ಲಿ ಸ್ಪೂರ್ತಿಯನ್ನು ತುಂಬಿದರು. ಬಳಿಕ ಮಾತನಾಡಿದ ಸರ್‍ಎಂವಿ ಕಾಲೇಜಿನ ನಿರ್ದೇಶಕರಾದ ಪ್ರದೀಪ್   ಗ್ರಾಮೀಣ ಭಾಗದ ಜನರಲ್ಲಿ ಹಬ್ಬ ಹಾಗೂ ಸಂಪ್ರದಾಯದ ಆಚರಣೆಗಳ ವೈಶಿಷ್ಟತೆಯೂ ಇನ್ನೂ ಜೀವಂತವಾಗಿವೆ,  ಗ್ರಾಮಾಂತರ ಪ್ರದೇಶದ ಈ ಶಾಲೆಯಲ್ಲಿ  ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ವೇಷಧರಿಸಿ ಬಂದ ಮಕ್ಕಳಲ್ಲಿ ಪರಿಶುದ್ಧವಾದ ಮನಸ್ಸಿದೆ, ಮಕ್ಕಳಿಗೆ ಇಂತಹ ಶಾಲೆಗಳ ಮೂಲಕ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಇದಕ್ಕೂ ಮೊದಲು  ಮಕ್ಕಳು  ಮುದ್ದು ಕೃಷ್ಣ ಹಾಗೂ ರಾಧೆಯರಾಗಿ ಎಲ್ಲರ ಕಣ್ಮನ ಸೆಳೆದರು. ವಿದ್ಯಾರ್ಥಿನಿಯರು  ಕೃಷ್ಣನ ಬಾಲಲೀಲೆಗಳ ಕುರಿತಾಗಿ ನೃತ್ಯಮಾಡಿ ಕೃಷ್ಣನ ವಿವಿಧ ರೂಪಗಳನ್ನು ನೆನಪಿಸಿದರು ವಿದ್ಯಾರ್ಥಿ ನಿಯರು ಭಜನೆ ಹಾಡನ್ನು ಹಾಡಿ ಇಡೀ ಶಾಲೆಯನ್ನು ಭಕ್ತಿಯಲ್ಲಿ ತೇಲಿಸಿದರು. ಈ ವೇಳೆ ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು, ಪೋಷಕರು  ಉಪಸ್ಥಿತರಿದ್ದರು.