ಸಸಿ ನೆಟ್ಟು ಗಾಂಧಿ ಜಯಂತಿ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಅ.03:– ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ 155 ನೇ ಗಾಂದಿ ಜಯಂತಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಚ್ಛ ಭಾರತ ದಿವಸ್ ಅನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರಿಸರ ಬಳಗದ ಅಧ್ಯಕ್ಷ ಪರಶುರಾಮೇಗೌಡ ಅವರು ಮಾತನಾಡಿ, ಅಹಿಂಸೆ ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಗಾಂಧಿಯನ್ನು ಸಸಿ ನೆಟ್ಟು ಸ್ಮರಿಸುತ್ತಿರುವುದು ಶ್ಲಾಘನೀಯ. ಇಂದಿನ ದಿನಗಳಲ್ಲಿ ಪರಿಸರ ಕಾಳಜಿ ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಗಾಂದಿ ಕಂಡ ರಾಮರಾಜ್ಯದಲ್ಲಿ ಪರಿಸರ ಉಳಿಸಿ ಬೆಳೆಸುವ ಕೆಲಸ ಸಹ ಆಗಬೇಕಿದೆ ಎಂದು ಹೇಳಿದರು.
ಸಂಗೀತ ವಿವಿಯ ಕುಲಪತಿ ಪೆÇ್ರ.ನಾಗೇಶ್ ವಿ ಬೆಟ್ಟಯ್ಯಕೋಟೆ ಅಧ್ಯಕ್ಷತೆವಹಿಸಿದ್ದರು. ಕುಲಸಚಿವೆ ಹಾಗೂ ಹಣಕಾಸು ಅಧಿಕಾರಿ ಕೆ.ಎಸ್.ರೇಖಾ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜಂಟಿ ನಿರ್ದೇಶಕ ಎಂ.ನಂಜುಂಡಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.