ಗಾಂಧೀಜಿಯ ಸರಳತೆ ಮೈಗೂಡಿಸಿಕೊಳ್ಳಿ, ಗುರಿ ಮುಟ್ಟುವವರೆಗೆ ನಿಲ್ಲದಿರಿ:ಬಿ.ಫೌಜಿಯಾ ತರನ್ನುಮ್
ಕಲಬುರಗಿ:ಅ.2: ಸತ್ಯ, ಅಹಿಂಸೆಯ ಪ್ರತಿಪಾದಕರಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಸರಳತೆಯ ಬದುಕು ನಮ್ಮದಾಗಬೇಕಿದೆ. ಗುರಿ ಮುಟ್ಟುವವರೆಗೆ ನಿಲ್ಲಬಾರದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಕಲಬುರಗಿ ನಗರದ ಡಾ. ಎಸ್. ಎಂ. ಪಂಡಿತ್ ರಂಗಮಂದಿರದಲ್ಲಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ “ಮಹಾತ್ಮ ಗಾಂಧೀಜಿ 155ನೇ ಜನ್ಮ ವμರ್Áಚರಣೆ” ಅಂಗವಾಗಿ ಗಾಂಧೀಜಿ ಅವರ ತತ್ವ-ಸಂದೇಶ ಕುರಿತು ವಿಶೇಷ ಉಪನ್ಯಾಸ, ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಣೆ ಹಾಗೂ ಸರ್ವಧರ್ಮ ಪ್ರಾರ್ಥನೆ-ಸದ್ಭಾವನಾ ಗೀತಗಾಯನ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ಗಾಂಧೀಜಿಯವರ ಬದುಕು ನಮಗೆ ದಾರಿ ದೀಪವಾಗಿದೆ. ಅವರ ಜೀವನವೇ ನಮಗೆ ಸಂದೇಶವಾಗಿದೆ ಎಂದ ಜಿಲ್ಲಾಧಿಕಾರಿಗಳು, ಸರಳತೆ, ಸತ್ಯ ಮಾರ್ಗದಲ್ಲಿ ಸಾಗಿದಲ್ಲಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ವಿದ್ಯಾರ್ಥಿ ಸಮುದಾಯಕ್ಕೆ ಅವರು ಕರೆ ನೀಡಿದರು.
ಅಹಿಂಸಾ ತತ್ವಗಳೆ ಶಾಂತಿಗೆ ಪ್ರೇರಣೆ: ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಕಲಬುರಗಿಯ ಸಂತ ಜೋಸೆಫ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಡಾ.ಚಿ.ಸಿ.ನಿಂಗಣ್ಣ ಮಾತನಾಡಿ, ಇಂದು ಯುಕ್ರೇನ್. ರμÁ್ಯ, ಅಮೇರಿಕಾದಂತಹ ದೇಶಗಳಲ್ಲಿ ಅಹಿಂಸೆ ಹೆಚ್ಚಾಗಿ ವಿಧ್ವಂಸಕ ಕೃತ್ಯಗಳಿಗೆ ಸಾಕ್ಷಿಯಾಗಿದ್ದರೆ ಗಾಂಧಿ ನೆಲವಾದ ಭಾರತದಲ್ಲಿ ಮಾತ್ರ ಸರ್ವ ಧರ್ಮಗಳು ಶಾಂತಿಯುತ, ಸೌಹಾರ್ದತೆಯ ಬದುಕು ಕಟ್ಟಿಕೊಂಡಿರುವುದಕ್ಕೆ ಬಾಪುವಿನ ಅಹಿಂಸಾ ತತ್ವಗಳೇ ನಮಗೆ ಪ್ರೇರಣೆಯಾಗಿವೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರೇ ಭಾರತ ತೊಲಗಿ ಎಂಬ ಚಳುವಳಿ ಆರಂಭಿಸಿದ ಗಾಂಧೀಜೀಯವರು ನಮ್ ನಾಡಿನ ಬೆಳಗಾವಿಯಲ್ಲಿ ಐತಿಹಾಸಿಕ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು ಎಂದ ಸ್ಮರಿಸಿದ ಅವರು, ಗಾಂಧೀಜಿ ಸೇರಿದಂತೆ ಅಸಂಖ್ಯಾತ ಜನರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ. ವಿಶ್ವಕ್ಕೆ ಅಹಿಂಸಾ ತತ್ವ ಬೋಧಿಸಿದ ಗಾಂಧೀಜಿ ಅಂದು-ಇಂದು ಎಂದೆಂದಿಗೂ ಪ್ರಸ್ತುತ ಎಂದರು.
ಕಾರ್ಯಕ್ರಮ ಆರಂಭಕ್ಕು ಮುನ್ನ ನಗರದ ಟೌನ್ ಹಾಲ್ ಬಳಿ ಇರುವ ಗಾಂಧಿ ಪ್ರತಿಮೆಗೆ ಮತ್ತು ವೇದಿಕೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಶಾಸಕ ಶಶೀಲ್ ಜಿ. ನಮೋಶಿ, ತಿಪ್ಪಣ್ಣಪ್ಪ ಕಮಕನೂರ್, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ಯಲ್ಲಪ್ಪ ಎಸ್. ನಾಯಕೋಡಿ ಸೇರಿದಂತೆ ಸರ್ವಧರ್ಮಗಳ ಗುರುಗಳು, ಅಧಿಕಾರಿ ವರ್ಗ ಪುμÁ್ಪರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಇನ್ನೂ ಕಾರ್ಯಕ್ರಮದ ವೇದಿಕೆ ಮೇಲೆ ಗಾಂಧಿ ವೇಷಧಾರಿಯಲ್ಲಿ ಶಾಲಾ ಬಾಲಕನೊಬ್ಬ ಕುಳಿತುಕೊಂಡು ಚರಕ ನೂಲಿದ್ದು, ಲಾಲ್ ಬಹಾದ್ದೂರ ಶಾಸ್ತ್ರಿ ವೇಷಧಾರಿಯಾಗಿ ನಿಂತಿದ್ದ ಇನ್ನೋರ್ವ ಪುಟ್ಟ ಬಾಲಕ ಎಲ್ಲರ ಗಮನ ಸೆಳೆದರು.
ಧಾರ್ಮಿಕ ಪಠಣ ಬೋಧಿಸಿದ ಪೂಜ್ಯರು: ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶೈಲಂ ಸಾರಂಗಮಠದ ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹಿಂದೂ ಧರ್ಮ, ಮೌಲಾನಾ ಸೈಯದ್ ಖಾಸಿಂ ಬುಖಾರಿ ಖಾದ್ರಿ ಅವರು ಇಸ್ಲಾಂ ಧರ್ಮ, ಸಿದ್ದಾರ್ಥ ವಿಹಾರದ ಪೂಜ್ಯ ಸಂಗಾನಂದ ಭಂತೇಜಿ ಅವರು ಬೌದ್ಧ ಧರ್ಮ, ಕಲಬುರಗಿ ಸೆಂಟ್ ಮೇರಿ ಚಚ್ರ್ನ ಫಾದರ್ ಸ್ಟ್ಯಾನ್ಲಿ ಲೋಬೋ ಅವರು ಕ್ರಿಶ್ಚಿಯನ್ ಧರ್ಮ, ಮಳಖೇಡದ 1008 ಶ್ರೀ ಮಲ್ಲಿನಾಥ ದಿಗಂಬರ ಜೈನ್ ಮಂದಿರದ ಕಾರ್ಯದರ್ಶಿ ದೀಪಕ್ ಪಂಡಿತ್ ಅವರು ಜೈನ್ ಧರ್ಮ ಹಾಗೂ ಕಲಬುರಗಿಯ ಶ್ರೀ ಗುರುನಾನಕ್ ಮಠದ ಪೂಜ್ಯ ಭಾಯ್ ದೀಪ್ ಸಿಂಗ್ (ಗ್ರಂಥಿ) ಅವರು ಸಿಖ್ ಧರ್ಮದ ಪಠಣ ಬೋಧಿಸಿದರು.
ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಣೆ: ಇದೇ ಸಂದರ್ಭದಲ್ಲಿ ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಾಪೂಜಿ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಡ, ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿಭಾಗದಿಂದ ತಲಾ ಮೂವರು ಸೇರಿ ಒಟ್ಟು 9 ಜನ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಮಾಣ ಪತ್ರ ಜೊತೆಗೆ ವಿಶೇಷವಾಗಿ ನೂಲಿನ ಹಾರ ಹಾಕಿ ಸತ್ಕರಿಸಲಾಯಿತು.
ಸರ್ವಧರ್ಮಿಯ ಪ್ರಾರ್ಥನೆ, ಸದ್ಭಾವನಾ ಗೀತಗಾಯನ: ಭಾರತ ಸೇವಾ ದಳದ ಜಿಲ್ಲಾ ಸಂಘಟಿಕ ಚಂದ್ರಶೇಖರ ಜಮಾದಾರ ನೇತೃತ್ವದಲ್ಲಿ ಸರ್ವಧರ್ಮೀಯ ಪ್ರಾರ್ಥನೆ ನಡೆಯಿತು. ಕಲಾವಿದ ದತ್ತರಾಜ ಕಲಶೆಟ್ಟಿ ಮತ್ತು ಅವರ ತಂಡದಿಂದ ಸದ್ಭಾವನಾ ಗೀತ ಗಾಯನಗಳ ಜೊತೆಗೆ ಗಾಂಧಿ ಅವರಿಗೆ ಪ್ರಿಯವಾದ ಹಾಡುಗಳನ್ನು ಹಾಡಿದರು. ಕೊನೆಯದಾಗಿ “ರಘುಪತಿ ರಾಘವ ರಾಜಾ ರಾಮ್” ಭಜನ್ ಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
ಈ ಸಂದರ್ಭದಲ್ಲಿ ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಪೆÇ್ರಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಸಿದ್ದೇಶ್ವರಪ್ಪ ಜಿ.ಬಿ., ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಡಿ.ಡಿ.ಪಿ.ಐ ಸೂರ್ಯಕಾಂತ ಮದಾನೆ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಡಿ.ಯು.ಡಿ.ಸಿ. ಯೋಜನಾ ನಿರ್ದೇಶಕ ಮುನಾವರ ದೌಲಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಭಾರತ ಸೇವಾದಳದ ಪ್ರತಿನಿಧಿಗಳು, ನೂರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರೆ, ಶಿವರಾಜ ಅಣಜಗಿ ನಿರೂಪಿಸಿದರು.