ಗಾಂಧೀಜಿ-ಶಾಸ್ತ್ರೀಜಿ ತತ್ವಾದರ್ಶಗಳು ಸದಾ ಪ್ರಸ್ತುತ: ಪ್ರೊ. ಅಲ್ಲಾವುದ್ದೀನ್
ಕಲಬುರಗಿ:ಅ.2: ಇಂದಿನ ಕಲುಷಿತ ಸಮಾಜಕ್ಕೆ ಮಹಾತ್ಮ ಗಾಂಧೀಜಿ ಹಾಗೂ ಲಾಲ ಬಹಾದ್ದುರ ಶಾಸ್ತ್ರೀಜಿ ಯವರ ತತ್ವಾದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುವಾಗಿವೆ. ಸ್ವಾರ್ಥ ಬದುಕಿನಲ್ಲಿ ಅನೇಕ ಅಹಿತಕರ ಘಟನೆಗಳನ್ನು ಎದುರಿಸುತ್ತಿದ್ದೇವೆ. ಅವುಗಳನ್ನು ಮೆಟ್ಟಿ ನಾವು ಮಹಾತ್ಮರ ಆದರ್ಶಗಳು ಅಳವಡಿಸಿಕೊಮಡು ನಡೆಯಬೇಕು. ಮರದ ನೆರಳಿನಂತೆ ಹರಿಯುವ ನೀರಿನಂತಾಗಿ ಬದುಕು ಸಾರ್ಥಕವಾಗಬಲ್ಲದು ಎಂದು ಹಿರಿಯ ಚಿಂತಕ ಪ್ರೊ. ಅಲ್ಲಾವುದ್ದೀನ್ ಸಾಗರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಬುಧವಾರ ಏರ್ಪಡಿಸಿದ ಗಾಂಧಿ ಮತ್ತು ರಾಷ್ಟ್ರೀಯತೆ ಎಂಬ ಒಂದು ಚಿಂತನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನೂರಾರು ವರ್ಷಗಳ ಕಾಲ ಪರಕೀಯರ ಆಡಳಿತಕ್ಕೆ ಒಳಪಟ್ಟಿದ್ದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಗಾಂಧೀಜಿ ಯವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ತತ್ವಾದರ್ಶ ಇಂದಿಗೂ ಪ್ರಸ್ತುತವಾಗಿವೆ. ಹೊಸ ಪೀಳಿಗೆ ಗಾಂಧೀಜಿ ಯವರ ವಿಚಾರಧಾರೆ ತಿಳಿದುಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಇನ್ನೂ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ಹೇಳಿದ ಅವರು, ಮೌಲ್ಯಗಳ ಉಳಿವಿಗಾಗಿ ಪರಿಷತ್ತು ಸದಾ ಕಾಲ ಶ್ರಮಿಸುತ್ತಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉತ್ತರ ವಲಯದ ಪ್ರಧಾನ ಕಾರ್ಯದರ್ಶಿ ಅಶೋಕ ಸೊನ್ನ, ಆದರ್ಶ ಶಿಕ್ಷಕಿ ಶೀಲಾ ಬಿರಾದಾರ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ರವೀಂದ್ರಕುಮಾರ ಭಂಟನಳ್ಳಿ, ಎಂ ಎನ್ ಸುಗಂಧಿ, ಸಿದ್ಧಲಿಂಗ ಬಾಳಿ, ಸುರೇಖಾ ಜೇವರ್ಗಿ, ಶಾಂತಪ್ಪ ಸೂರನ್, ಶಿವಾನಂದ ಮಠಪತಿ, ಡಾ. ಗೌಸುದ್ದೀನ್ ತುಮಕೂರಕರ್, ಡಾ. ನಗೇಂದ್ರ ಮಸೂತಿ, ರಮೇಶ ಬಡಿಗೇರ, ಪ್ರಭವ ಪಟ್ಟಣಕರ್, ನವಾಬ ಖಾನ್, ಸೈಯದ್ ನಜೀರುದ್ದೀನ್ ಮುತ್ತವಲಿ, ಸಂತೋಷ ಕುಡಳ್ಳಿ, ಹಣಮಂತಪ್ರಭು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
……….
ಹಿರಿಯ ಜೀವಿಗಳಾದ ಎ.ಕೆ.ರಾಮೇಶ್ವರ, ದೇವೇಂದ್ರಪ್ಪ ಬಾಡಿಯಾಳ, ವಿಜಯಕುಮಾರ ಹುಲಿ, ಎಸ್ ಎಸ್ ಬಿರಾದಾರ, ಇಂದಿರಾ ಗುರುಮಠ, ತುಕಾರಾಮ ಜಂಗಲೆ, ನೀಲಕಂಠಯ್ಯ ಎಸ್ ಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಸತ್ಕರಿಸಲಾಯಿತು.
……….
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ತಿಳಿಸಿ ಕೊಡಬೆಕಾಗಿದೆ. ಗಾಂಧೀಜಿಯವರ ವ್ಯಕ್ತಿತ್ವ ಅರಿತಾಗ ಅವರು ಕಂಡ ಕನಸುಗಳು ನನಸಾಗುತ್ತವೆ. ದ್ವೇಷಿಸದೇ ಪ್ರೀತಿಸುವ ಗುಣಗಳು ಅಳವಡಿಸಿಕೊಳ್ಳಬೇಕಾಗಿದೆ.
-ಶೀಲಾ ವಿ ಬಿರಾದಾರ
ಆದರ್ಶ ಶಿಕ್ಷಕಿ
……….
ಸತ್ಯ, ಅಹಿಂಸೆ ಹಾಗೂ ಜೀವನ ಮೌಲ್ಯಗಳನ್ನು ಅರಿಯಬೇಕಾಗಿದೆ. ಗಾಂಧೀಜಿಯವರ ಚಿಂತನೆಗಳು ಇಂದಿನ ವರ್ತಮಾನಕ್ಕೆ ಹೆಚ್ಚು ಪೂರಕವಾಗಿವೆ.