ದಶಮಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಸಾವು
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಅ.06 ತಾಲೂಕಿನ ದಶಮಾಪುರ ಗ್ರಾಮದ ಹೊರವಲಯದಲ್ಲಿ   ಇಂದು  ಮಧ್ಯಾಹ್ನ 1 ಗಂಟೆ ಸಮಯದಲ್ಲಿ  ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಸಾವನಪ್ಪಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿಗಳಾದ  ಬಣಕಾರ್ ನರಪ್ಪ (55) ಮತ್ತು ಪ್ರಶಾಂತ್ ಬಣಕಾರ್ (38) ಹೊಲದಲ್ಲಿ ಹಸುಗಳನ್ನು ಮೇಯಿಸುತ್ತಿದ್ದಾಗ ಮಳೆ ಪ್ರಾರಂಭವಾಗಿದೆ. ಇವರು ಮರದ ಕೆಳಗೆ ನಿಂತಿರುವಾಗ ಸಿಡಿಲು ಬಡಿದು ಸ್ಥಳದಲ್ಲಿ ಅಸು ನೀಗಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ ಎಂದು ಪಿಎಸ್ಐ ಬಸವರಾಜ್ ಅಡಬಾವಿ ತಿಳಿಸಿದ್ದಾರೆ.