ಸಂಭ್ರಮದ ದುರ್ಗಾದೌಡ್ ಕಾರ್ಯಕ್ರಮ
ಲಕ್ಷ್ಮೇಶ್ವರ,ಅ.6: ಪಟ್ಟಣದಲ್ಲಿ ದಸರಾ ಮಹೋತ್ಸವ ಸಮಿತಿಯವರು ಹಮ್ಮಿಕೊಂಡಿರುವ ದುರ್ಗಾ ದೌಡ ಕಾರ್ಯಕ್ರಮ ಮೂರನೇ ದಿನವನ್ನು ಪೂರೈಸಿತು.
ಕೆಂಚಲಾಪುರ ಓಣಿ ಯ ಬನಶಂಕರಿ ದೇವಸ್ಥಾನದಿಂದ ಹೊರಟ ದುರ್ಗಾ ದೌಡು ಮಾರುಕಟ್ಟೆಯಲ್ಲಿರುವ ಕೆಮ್ಮಮ್ಮನ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ದುರ್ಗಾ ದೌಡ ದ ರೂವಾರಿ ಗುರುನಾಥ್ ದಾನಪ್ಪನವರ ಮತ್ತು ಯುವ ಮುಖಂಡ ಶಂಕರ ಬಾಳಿಕಾಯಿ ಅವರು ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಧರ್ಮ ಆಚಾರ-ವಿಚಾರಗಳು ಮರೆಯಾಗುತ್ತಿವೆ ಇಂಥ ಕ್ಲಿಷ್ಟ ಸನ್ನಿವೇಶದಲ್ಲಿ ಯುವ ಜನಾಂಗವನ್ನು ಧರ್ಮ ಮತ್ತು ಆಚರಣೆಯತ್ತ ಸೆಳೆದು ಮತ್ತೆ ಮುಂದಿನ ಪೀಳಿಗೆಗೆ ಪರಿಚಯಿಸುವ ಇದೊಂದು ಧಾರ್ಮಿಕ ಕಾರ್ಯಕ್ರಮ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಂಬಣ್ಣ ಬಾಳಿಕಾಯಿ ಮಹೇಶ ಹೊಗೆಸೊಪ್ಪಿ ನ ಬಸವರಾಜ ಅರಳಿ ಗಂಗಾಧರ ಮೆಣಸಿನಕಾಯಿ ತಿಪ್ಪಣ್ಣ ಸಂಶಿ ಮಲ್ಲನಗೌಡ ಪಾಟೀಲ ರವಿ ಲಿಂಗ ಶೆಟ್ಟಿ ನಾಗರತ್ನ ನಾಗಲೂಟಿ ದೇವಪ್ಪ ಗಡೆದ ರಾಜೇಶ್ವರಿ ದಾನಪ್ಪನವರ ಸೇರಿದಂತೆ ಭಕ್ತ ಸಮೂಹ ಕೇಸರಿ ಶಾಲು ಧರಿಸಿ ಶ್ವೇತ ವಸ್ತ್ರಧಾರಿಗಳಾಗಿದ್ದರು.
ದುರ್ಗಾ ದೌಡು ಬರುವ ಮಾರ್ಗದುದ್ದಕ್ಕೂ ಮನೆಯ ಮುಂದೆ ರಂಗೋಲಿ ಹಾಕಿ ಕಾರ್ಯಕರ್ತರನ್ನು ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದರು.