ಸದಸ್ಯತ್ವ ಅಭಿಯಾನ
ಲಕ್ಷ್ಮೇಶ್ವರ,ಅ.6:ಪಟ್ಟಣದಲ್ಲಿ ಶನಿವಾರ ಶಿರಹಟ್ಟಿ ಬಿಜೆಪಿ ಮಂಡಲ ನಗರ ಬಿಜೆಪಿ ಘಟಕ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಜಗತ್ತಿನಲ್ಲಿ ಭಾರತೀಯ ಜನತಾ ಪಕ್ಷ ಕೋಟಿ ಕೋಟಿ ಕಾರ್ಯಕರ್ತರು ಹೊಂದಿರುವ ಏಕೈಕ ಪಕ್ಷವಾಗಿದೆ ಇಂದು ಇಡೀ ಜಗತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಕ್ಷಿಪ್ರಗತಿಯಲ್ಲಿ ಪ್ರಗತಿ ಹೊಂದುತ್ತಿರುವುದನ್ನು ಬೆರಗಾಗಿ ನೋಡುವಂತೆ ಮಾಡಿದ್ದಾರೆ ಎಂದು ಹೇಳಿದರು
. ಕಾರ್ಯಕರ್ತರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನಾಂಗವನ್ನು ಬಿಜೆಪಿಯತ್ತ ಸೆಳೆಯುವಲ್ಲಿ ಮನೆಮನೆಗೆ ತೆರಳಿ, ಮೋದಿಜಿಯವರು ಕೈಗೊಂಡಿರುವ ಕಳೆದ ಹತ್ತು ವರ್ಷಗಳ ಪ್ರಗತಿಯ ಯೋಜನೆಗಳ ವಿವರವನ್ನು ತಲುಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಗದಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ ಮಂಡಲ್ ಪ್ರಧಾನ ಕಾರ್ಯದರ್ಶಿ ಅನಿಲ್ ಮುಳುಗುಂದ್ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಚಕ್ರಸಾಲಿ ನಗರ ಘಟಕದ ಅಧ್ಯಕ್ಷ ನವೀನ್ ಬೆಳ್ಳಟ್ಟಿ ವಿಠಲ ಬದಿ ಸೇರಿದಂತೆ ಅನೇಕರಿದ್ದರು.