ಚೆಕ್ ವಿತರಣೆ
ಲಕ್ಷ್ಮೇಶ್ವರ,ಅ.6:ಪಟ್ಟಣದ ಶಿಗ್ಲಿ ನಾಕಾದಲ್ಲಿರುವ ಮಾರುತಿ ದೇವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರ ಶನಿವಾರ 1.50 ಲಕ್ಷ ರೂಪಾಯಿಗಳ ಚೆಕ್ಕನ್ನು ಶಾಸಕ ಡಾಕ್ಟರ್ ಚಂದ್ರು ಲಮಾಣಿ ದೇವಸ್ಥಾನದ ಧರ್ಮದರ್ಶಿಗಳಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿ ಗ್ರಾಮಾಭಿವೃದ್ಧಿ ಸಂಸ್ಥೆಯು ನಶಿಸಿ ಹೋಗುತ್ತಿರುವ ನಮ್ಮ ಗುಡಿ ಗುಂಡಾರಗಳು ಶಿಲ್ಪ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಉದಾರವಾದ ನೆರವು ನೀಡುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಗ್ರಾಮೀಣ ಜನರ ಬದುಕನ್ನು ಹಸನಗೊಳಿಸುವ ನೆಟ್ಟಿನಲ್ಲೂ ತನ್ನದೇ ಆದ ಅಮೂಲ್ಯವಾದ ಕಾಣಿಕೆಯನ್ನು ರಾಜ್ಯಕ್ಕೆ ನೀಡುತ್ತಿದೆ ಎಂದು ಪ್ರಶಂಸಿಸಿದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಜಿಎಸ್‍ಎಸ್ ಗಡ್ಡ ದೇವರಮಠ ಅವರು ನಿಜವಾಗಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಧರ್ಮ ಕಾರ್ಯದಲ್ಲಿ ತನ್ನದೇ ಆದ ಕಾಣಿಕೆಯನ್ನು ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಕರೆವಾಡಿ ಮಠದ ಶ್ರೀ ಮಳೆ ಮಲ್ಲಿಕಾರ್ಜುನ ಶ್ರೀಗಳು ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಗದಗ ಜಿಲ್ಲಾ ಯೋಜನಾ ನಿರ್ದೇಶಕರಾದ ಯೋಗೀಶ್ ಚಂದ್ರಶೇಖರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪೂರ್ಣಜಿ ಕರಾಟೆಯವರು ಮಾತನಾಡಿದರು ವೇದಿಕೆಯ ಮೇಲೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ ರಾಜು ಕುಂಬಿ ಅಶ್ವಿನಿ ಅಂಕಲ ಕೋಟಿ ಜಂಬಣ್ಣ ಬಾಳಿಕಾಯಿ ಎನ್ ಆರ್ ಪಾಟೀಲ್ ಯೋಜನಾಧಿಕಾರಿ ಪುನೀತ್ ಓಲೆಕಾರ್ ಶಿವಯೋಗಿ ಅಂಕಲ ಕೋಟಿ ನವೀನ್ ಬೆಳ್ಳಟ್ಟಿ ಸೋಮಣ್ಣ ಬಸಾಪುರ ಓಂಕಾರಪ್ಪ ಗಜಕೋಶ ರಾಮು ನಾಯಕ ಪಕೀರೇಶ ಮ್ಯಾಟಣ್ಣನವರ ಇದ್ದರು. ತಿಪ್ಪಣ್ಣ ಸಂಶಿ ಕಾರ್ಯಕ್ರಮ ನಿರ್ವಹಿಸಿದರು.