ಇಂದು ಆರ್‍ಎಸ್‍ಎಸ್ ಪಥಸಂಚಲನ: ಕೇಸರಿಮಯವಾದ ಗುಳೇದಗುಡ್ಡ
ಗುಳೇದಗುಡ್ಡ,ಅ.6: ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಘಟಕದ ವತಿಯಿಂದ ವಿಜಯದಶಮಿ ಉತ್ಸವ ಇಂದು ಅ.6 ರಂದು ನಡೆಯಲಿದೆ. ಪಟ್ಟಣದ ಭಂಡಾರಿ ಕಾಲೇಜಿನ ಆವರಣದಿಂದ ಮಧ್ಯಾಹ್ನ 3.45ಕ್ಕೆ ಪಥಸಂಚಲನ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಘೋಷವಾದ್ಯ ಸಹಿತ ಗಣವೇಶದಾರಿ ಸ್ವಯಂ ಸೇವಕರಿಂದ ಪಥಸಂಚಲನ ನಡೆಯಲಿದೆ. ಬಳಿಕ ಸಂಜೆ 5.15ಕ್ಕೆ ಸ್ಥಳೀಯ ಭಂಡಾರಿ ಮತ್ತು ರಾಠಿ ಮಹಾವಿದ್ಯಾಲಯದ ಆವರಣದಲ್ಲಿ ವಿಜಯದಶಮಿ ಉತ್ಸವ ನಡೆಯಲಿದ್ದು ಪಟ್ಟಣದ ಸಂಶೋಧಕ, ರೇಷ್ಮೆ ಬೆಳೆಗಾರ ಡಾ. ಸಂಗಪ್ಪ ನಾರಾ ಅವರು ಮುಖ್ಯಅತಿಥಿಗಳಾಗಿ ಆಗಮಿಸುವರು. ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರಸಿಂಗ್ ಘೋರ್ಪಡೆ ಅವರು ವಕ್ತಾರರಾಗಿ ಆಗಮಿಸುವರು.
ಇಡೀ ಪಟ್ಟಣ ಕೇಸರಿಮಯ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಯಜದಶಮಿ ಪಥಸಂಚಲಕ್ಕೆ ಪಟ್ಟಣದಲ್ಲಿ ಈ ಬಾರಿ ಅಭೂತಪೂರ್ವ ತಯಾರಿ ನಡೆದಿದ್ದು, ಪಟ್ಟಣದ ಎಲ್ಲ ಬೀದಿಗಳು ಕೇಸರಿಮಯವಾಗುತ್ತಿವೆ. ಸ್ವಯಂ ಸೇವಕರು, ಅಭಿಮಾನಿ ಯುವಕರು ಕೇಸರಿ ಧ್ವಜ, ಕೇಸರಿ ತೋರಣಗಳನ್ನು ಪಟ್ಟಣದ ಬೀದಿಯುದ್ದಕ್ಕೂ ಕಟ್ಟಿದ್ದಾರೆ.
ಪಟ್ಟಣದ ಕೆಳಗಿನ ಮಾರ್ಕೆಟ್‍ನ ಸರ್ಕಲ್‍ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮಹಾದ್ವಾರ ನಿರ್ಮಿಸಿ, ಸುಭಾಷಚಂದ್ರ ಭೋಸ್, ವಲ್ಲಾಭಾಯಿ ಪಟೇಲ, ಮಹಾರಾಣ ಪ್ರತಾಪಸಿಂಗ್, ಸಂಭಾಜಿ ಬೋಸ್ಲೆ ಅವರ ಬೃಹತ್ ಭಾವಚಿತ್ರಗಳನ್ನು ನಿಲ್ಲಿಸಲಾಗಿದೆ. ಪುರಸಭೆ ಎದುರು ಸಾವರ್ಕರ ಸಾಮ್ರಾಜ್ಯ ಮಹಾದ್ವಾರ ನಿರ್ಮಿಸಿಸಲಾಗಿದೆ. ಕÁ್ರಂತಿಕಾರಿ ಭಗತ್‍ಸಿಂಗ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ ಆಜಾದ್, ವೀರಸಾರ್ವಕರ, ಬಸವಣ್ಣ, ಸಿದ್ದೇಶ್ವರ ಶ್ರೀಗಳು ಸಂಘದ ಸಂಸ್ಥಾಪಕ ಡಾ. ಗುರೂಜಿ ಅವರ ಭಾವಚಿತ್ರಗಳನ್ನು ಹಾಕಲಾಗಿದೆ. ನಗರದ ವಿವಿಧೆಡೆ ಛತ್ರಪತಿ ಶಿವಾಜಿ, ಶ್ರೀರಾಮ, ಶರಣರ ಬೃಹತ್ ಭಾವಚಿತ್ರಗಳನ್ನು ನಿಲ್ಲಿಸಲಾಗಿದೆ. ಪÀಟ್ಟಣದ ಬೀದಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕೇಸರಿ ಪ್ರವೇಶದ್ವಾರಗಳನ್ನು ನಿರ್ಮಿಸಿ, ಕೇಸರಿ ತೋರಣಗಳಿಂದ ಅಲಂಕರಿಸಲಾಗಿದೆ. ಪಥಸಂಚಲನದಲ್ಲಿ ಸುಮಾರು 2000ಕ್ಕೂ ಹೆಚ್ಚು ಗಣವೇಷಧಾರಿಗಳು ಪಾಲ್ಗೊಳ್ಳುವ ನೀರಿಕ್ಷೆ ಇದೆ.