ಜಿಲ್ಲಾಸ್ಪತ್ರೆಯಲ್ಲಿ ಹೊರಗುತ್ತಿಗೆ ಟೆಂಡರ್ ನೀಡುವಲ್ಲಿ ಅನ್ಯಾಯ; ಸರಿಪಡಿಸಲು ಒತ್ತಾಯ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೯: ಚಿಗಟೇರಿ ಜಿಲ್ಲಾ ಆಸ್ಪತ್ರೆ ಮಾನವ ಸಂಪನ್ಮೂಲ ಹೊರಗುತ್ತಿಗೆಯ ಟೆಂಡ‌ರ್ ಕರೆದು ಟೆಂಡರ್‌ದಾರರಿಗೆ ಕಾರ್ಯಾದೇಶ ನೀಡದೆ ರಾಯಚೂರಿನ ದೀಕ್ಷಾ ಕನ್ಸ್‌ಲ್ವೆನ್ಸಿ ಏಜೆನ್ಸಿಯ ಸಬ್ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಪ್ರಯತ್ನಿಸುತ್ತಿರುವ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರ ವಿರುದ್ಧ ಕಾನೂನು ಕ್ರಮಕೈಗೊಂಡು ಎಲ್-1 ಟೆಂಡರ್‌ದಾರರಿಗೆ ಇದೇ ಆ.31ರೊಳಗೆ ಕಾರ್ಯಾದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಗುವುದು ಎಂದು ಡಾ. ಬಿ.ಆರ್. ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರ ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬಿ. ಹನುಮಂತಪ್ಪ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಅಸ್ಪತ್ರೆಯಿಂದ 2024-25 ನೇ ಸಾಲಿಗೆ ಕರೆದಿರುವ ಟೆಂಡರ್‌ನಲ್ಲಿ ದಿನಾಂಕ:05-06-2024 ರಿಂದ 05-07-2024ರವರೆಗೆ ಒಂದು ತಿಂಗಳ ಅವಧಿಯೊಳಗೆ ಟೆಂಡರ್ ಹಾಕಲು ಕರೆಯಲಾಗಿತ್ತು. ಇದರಲ್ಲಿ ಮೂರು ಏಜೆನ್ಸಿಗಳು ಭಾಗವಹಿಸಿದ್ದವು.  ಟಾರ್ಗೇಟ್ ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿ ಫೋರ್ಸ್ ಶೇ.2 ಸೇವಾ ಶುಲ್ಕ, ರಾಘವೇಂದ್ರ ಅಸೋಸಿಯೆಟ್ಸ್, ರಾಣೇಬೆನ್ನೂರು ಶೇ. 2 ಸೇವಾ ಶುಲ್ಕ, ದೀಕ್ಷಾ ಕನ್ಸ್‌ಲ್ವೆನ್ಸಿ ಏಜೆನ್ಸಿ ಶೇ. 4.5 ಸೇವಾ ಶುಲ್ಕ ಈ ರೀತಿ ಹಾಕಿರುತ್ತಾರೆ. ಇದರಲ್ಲಿ ಕಡಿಮೆ ಸೇವಾ ಶುಲ್ಕ ಪಡೆದು ಸೇವೆ ಸಲ್ಲಿಸುವ ಗುತ್ತಿಗೆದಾರರ ಬದಲಾಗಿ ಹೆಚ್ಚಿನ ಸೇವಾ ಶುಲ್ಕವನ್ನು ಹಾಕಿರುವ ದೀಕ್ಷಾ ಕನ್ಸ್‌ಲ್ವೆನ್ಸಿ ಏಜೆನ್ಸಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್-1 ಬಿಡ್‌ದಾರರಿಗೆ ಕಾರ್ಯಾದೇಶ ನೀಡಲು ವಿಳಂಬಧೋರಣೆ ತೋರಿದ್ದಾರೆ ಎಂದು ಆರೋಪಿಸಿದರು.ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾನವ ಸಂಪನ್ಮೂಲ ಹೊರಗುತ್ತಿಗೆಯ ಸೇವೆಯನ್ನು ನೀಡುತ್ತಿರುವ ದೀಕ್ಷಾ ಕನ್ಸಲೆನ್ಸಿ ಏಜೆನ್ಸಿಯ ಸಬ್ ಗುತ್ತಿಗೆಯನ್ನಾಗಿ ಹಿಂದಿನ ಪೂಜಾಯ್ಯ ಏಜೆನ್ಸಿಯ ಸಬ್ ಗುತ್ತಿಗೆದಾರರಾದ ಶಯ ಎನ್ ಮಂಜುನಾಥ ಜಿಲ್ಲಾ ಆಸ್ಪತ್ರೆಯ ಕ್ಯಾಂಟೀನ್ ಗುತ್ತಿಗೆದಾರರಾದ ಶ್ರೀ ಮಂಜುನಾಥ, ಲೋಹಿತ, ಶರೀಫ ಇವರುಗಳಿಗೆ ಸಬ್ ಗುತ್ತಿಗೆಯನ್ನು ನೀಡಿದ್ದು ಇವರುಗಳು ಕಾರ್ಮಿಕರಿಂದ ಒಂದರಿಂದ ಎರಡು ಸಾವಿರ ರೂಪಾಯಿಗಳ ವರೆಗೆ ಹಪ್ತಾ ವಸೂಲಿ ಮಾಡುತ್ತಿದ್ದಾರೆ.ಕೆಲವೊಬ್ಬರನ್ನು ಕೆಲಸದಿಂದ ಬಿಡುಸುತ್ತೇವೆಂದು 10 ರಿಂದ 20 ಸಾವಿರ ರೂಪಾಯಿಗಳನ್ನು ಪಡೆದಿದ್ದ ಹಾಜರಾತಿ ಪುಸ್ತಕದಲ್ಲಿ ತಮ್ಮ ಮತ್ತು ತಮ್ಮ ಕುಟುಂಬದವರ ಹೆಸರುಗಳನ್ನು ನಮೂದಿಸಿ ವೇತನವನ್ನು ಪಡೆದಿದ್ದ 10 ರಿಂದ 20 ವರ್ಷಗಳವರೆಗೆ ಕೆಲಸಗಾರನ್ನು ತಮ್ಮ ಮಾತುಗಳನ್ನು ಕೇಳದೇ ಹೋದರೆ ತೆಗೆದು ಹಾಕತ್ತೇವೆಂದು ಹೆದರಿಸುವ ಮುಖಾಂತರ ದೌರ್ಜನ್ಯ ಎಸಗುತ್ತಿದ್ದು ಅವರ ವಿರುದ್ದವಾಗಿ ನೊಂದಂತಹ ಕಾರ್ಮಿಕರು ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಪರಿಶಿಷ್ಟ, ಜಾತಿ ಮತ್ತು ಪರಿಶಿಷ್ಟ ಪಂಗಡ ಸಭೆಯಲ್ಲಿ ದೂರು ಕೊಟ್ಟಿದ್ದು ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗಿತ್ತು. ಜಿಲ್ಲಾ ಎಸ್ಪಿ ಕಛೇರಿಯೊಳಗೆ ನಡೆದ ಎಸ್ಸಿ ಎಸ್ಟಿ ಜಾಗೃತಿ ಸಭೆಯಲ್ಲಿ ದೌರ್ಜನ್ಯವನ್ನು ನಡೆಸಿದಂತಹ ಏಜೆನ್ಸಿ ವಿರುದ್ಧ ದೂರು ಸಲ್ಲಿಸಿದ್ದು, ರಾಯಚೂರಿನ ದೀಕ್ಷಾ ಕನ್ಸಲ್ವೆನ್ಸಿ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಮೂಲಕ ಸಬ್ ಗುತ್ತಿಗೆದಾರರಾದ ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಎಸಗುತ್ತಿರುವುದನ್ನು ಕಂಡು ಕಾಣದಂತೆ ಮೂಕ ಪ್ರೇಕ್ಷಕರಾಗಿ ನೋಡುತ್ತಾ ಅವರ ದಬ್ಬಾಳಿಕೆಗಳನ್ನು  ಜಿಲ್ಲಾಧಿಕಾರಿಗಳ ಗಮನಕ್ಕೆ ತಾರದೇ, ಈ ಸಾಲಿನ ಟೆಂಡರ್‌ನ್ನು ಎಲ್-1 ಬಿಡ್‌ದಾರರಿಗೆ ಕಾರ್ಯಾದೇಶ ನೀಡದೇ ದೀಕ್ಷಾ ಏಜೆನ್ಸಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತಿರುವುದನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಎಲ್-1  ಗುತ್ತಿಗೆ ದಾರರಿಗೆ ಕಾರ್ಯಾದೇಶ ಕೊಡಿಸಿಕೊಡಬೇಕೆಂದು ಈ ಮೂಲಕ ಅಗ್ರಹಿಸುತ್ತೇವೆ ಎಂದರು. ಒಂದು ವೇಳೆ ಸಬ್‌ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಕಾರ್ಯಾದೇಶ ನೀಡಿದ ಪಕ್ಷದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಸೆ.2 ರಂದು ಸಂಘಟನೆಯ ವತಿಯಿಂದ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ, ಚಂದ್ರಪ್ಪ ಕೊಪ್ಪದ್, ಜೆ.ಡಿ. ಕೃಷ್ಣಮೂರ್ತಿ, ಮಾಲತೇಶ್ ಉಪಸ್ಥಿತರಿದ್ದರು.