ಹೆಸರು ಖರೀದಿ ಕೇಂದ್ರ ಆರಂಭಿಸಲು ಆಗ್ರಹ
ಲಕ್ಷ್ಮೇಶ್ವರ,ಆ.29: ಹೆಸರು ಖರೀದಿ ಕೇಂದ್ರವನ್ನು ಕೂಡಲೇ ಆರಂಭಿಸಬೇಕು ಎಂದು ಆಗ್ರಹಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಗೆ ಸೊಪ್ಪಿನ ಮತ್ತು ತಾಲೂಕ ಅಧ್ಯಕ್ಷ ಲೋಕೇಶ್ ಸುತಾರ್ ಅವರ ನೇತೃತ್ವದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ ತಾಲೂಕಿನಲ್ಲಿ ರೈತರು ಸಾಕಷ್ಟು ಖರ್ಚು ಮಾಡಿ ಹೆಸರುಬೇಳೆ ಬೆಳೆ ಬೆಳೆದಿದ್ದು ಮುಕ್ತ ಮಾರುಕಟ್ಟೆಯಲ್ಲಿ ಬೆಲೆಕುಸಿತವಾಗಿದ್ದು ಸಾಲ ಸೋಲ ಮಾಡಿ ಬೆಳೆದಿರುವ ರೈತರಿಗೆ ಬೆಂಬಲ ಬೆಲೆ ನೀಡಿದರೆ ರೈತರು ಆರ್ಥಿಕ ಸಂಕಷ್ಟದಿಂದ ಪಾರಾಗುತ್ತಾರೆ.
ಆದರೆ ರೈತರು ಆರ್ಥಿಕ ಮುಗ್ಗಟ್ಟಿನಿಂದಾಗಿ ಕೈಗೆ ಬಂದಂತೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದು ಇದರಿಂದ ರೈತರಿಗೆ ಭಾರಿ ಹಾನಿಯಾಗುತ್ತದೆ ಆದ್ದರಿಂದ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಆರಂಭಿಸಬೇಕು ಎಂದು ಬಸವರಾಜ ಹೊಗೆಸೊಪ್ಪಿನ ಮತ್ತು ಲೋಕೇಶ ಸುತಾರ ಈ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು. ಮನವಿ ಪತ್ರವನ್ನು ಗ್ರೇಡ್ 2 ತಹಸಿಲ್ದಾರ್ ಮಂಜುನಾಥ ಅಮಾಸಿ ಸ್ವೀಕರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಕಳುಹಿಸುವುದಾಗಿ ಹೇಳಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಕರವೇ ರೈತ ಘಟಕದ ತಾಲೂಕಾಧ್ಯಕ್ಷ ಸಿ ಎಫ್ ಗಡ್ಡರ ಮಠ ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಿ ಅತ್ತಿಗೆರೆ ನಗರ ಘಟಕದ ಅಧ್ಯಕ್ಷ ಪ್ರವೀಣ ಗೌರಿ ತಾಲೂಕ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೊಂಚಗೇರಿ ಮಠ ಶಂಕರಗೌಡ ಪಾಟೀಲ ಪ್ರವೀಣ್ ಗಾಣ್ಗೇರೆ ಬಸವರಾಜ್ ಮಡಿವಾಳರ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.