ಚಿಣ್ಣರ ಗೋಕುಲಾಷ್ಠಮಿ
ಮುನವಳ್ಳಿ,ಆ29: ಪಟ್ಟಣದ ಗಜಾನನ ವಿದ್ಯಾವರ್ಧಕ ಜನಕಲ್ಯಾಣ ಟ್ರಸ್ಟ್‍ನ ಕುಮಾರೇಶ್ವರ ವಿದ್ಯಾಮಂದಿರದಲ್ಲಿ ಗೋಕುಲಾಷ್ಠಮಿ ಅಂಗವಾಗಿ ಮಕ್ಕಳಿಗೆ ರಾಧಾ ಕೃಷ್ಣ ಉಡುಗೆ ತೊಡುಗೆ ಹಾಗೂ ಪಾಲಕರಿಗೆ ವಿವಿಧ ಆಟಗಳ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಬಹುಮಾನಗಳನ್ನು ಪಾಲಕರ ಸಮ್ಮೇಳನದಲ್ಲಿ ವಿತರಿಸುವಲಾಗುವದೆಂದು ಮುಖ್ಯೋಪಾಧ್ಯಯ ಶಂಕರ ರಾಠೋಡ, ತಿಳಿಸಿದರು.
ಶಾಲೆಯ ಚೇರಮನ ಶ್ರೀಕಾಂತ ಮಿರಜಕರ್, ಬಸವರಾಜ ಗೋಪಶೆಟ್ಟಿ, ಮಂಜುನಾಥ ಬೆಟಗೇರ, ನಿರ್ಮಲಕುಮಾರ ವನಕುದರಿ, ಪ್ರಾಚಾರ್ಯರಾದ ಜಿ,ಎನ್.ಅಲಮನ್ನವರ, ಎಂ.ಎಂ ಲಕ್ಕಣ್ಣವರ, ಪಿ.ಪಿ ಶಾನಬೋಗ ಮಕ್ಕಳು ಪಾಲಕರು ಉಪಸ್ಥಿತರಿದ್ದರು.