ಯೂರೋಪ್ ಹೃದ್ರೋಗ ಸಮ್ಮೇಳನಕ್ಕೆ ಡಾ.ನಟೇಶ್
ಬೆಂಗಳೂರು, ಆ.೨೯- ಸೆಪ್ಟೆಂಬರ್ ೧ ರಂದು ಇಂಗ್ಲೆಂಡ್ ನಲ್ಲಿ ನಡೆಯಲಿರುವ ಯೂರೋಪಿಯನ್ ಕಾರ್ಡಿಯಾಲಜಿ ಸೊಸೈಟಿಯ ವಾರ್ಷಿಕ ಸಮ್ಮೇಳನಕ್ಕೆ ಶ್ರೀ ಜಯದೇವ ಸಂಸ್ಥೆಯ ಖ್ಯಾತ ಹೃದ್ರೋಗ ತಜ್ಞ ಡಾ.ನಟೇಶ್ ಅವರನ್ನು ಭಾರತದ ಪ್ರತಿನಿಧಿಯಾಗಿ ಆಹ್ವಾನಿಸಲಾಗಿದೆ.
ಅವರು ಯೂರೋಪಿಯನ್ ಕಾರ್ಡಿಯಾಲಜಿ ಸೊಸೈಟಿ ಮತ್ತು ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ನಡುವಿನ ಸಹಕಾರದ ಕುರಿತು ದ್ವಿಪಕ್ಷೀಯ ಮಾತುಕತೆಗಳಲ್ಲಿ ಭಾಗವಹಿಸಲಿದ್ದಾರೆ.
ಅವರು ಭಾರತದ ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ದಕ್ಷಿಣ ವಲಯದ ಚುನಾಯಿತ ಪ್ರತಿನಿಧಿ ಆಗಿದ್ದಾರೆ.ಸಿ ಎಸ್ ಐ ಬೆಂಗಳೂರಿನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಡಾ. ನಟೇಶ್ ಅವರಿಗೆ ಸಿಎಸ್‌ಐ ಬೆಂಗಳೂರು ಘಟಕ ಶುಭಾಶಯ ಕೋರಿದೆ.